ETV Bharat / state

ಮಲ್ಲೇಶ್ವರಂನಲ್ಲಿ ಅನುಮಾನಾಸ್ಪದ ಸೂಟ್ ಕೇಸ್ ಪತ್ತೆ: ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು - malleswaram,

ಮಲ್ಲೇಶ್ವರಂ ಪೊಲೀಸಗ್​ ಠಾಣಾ ವ್ಯಾಪ್ತಿಯ 15ನೇ ಕ್ರಾಸ್ ಬಳಿ‌ ಇಂದು‌ ಮಧ್ಯಾಹ್ನ ಪಾದಚಾರಿ ಮಾರ್ಗದಲ್ಲಿ ಅನುಮಾನಾಸ್ಪದವಾಗಿ ಸೂಟ್ ಕೇಸ್ ಇರುವುದನ್ನು ಕಂಡು ಸ್ಥಳೀಯರು, ಪೊಲೀಸ್ ಕಂಟ್ರೋಲ್ ರೂಮ್​​ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯನ್ನು ಕರೆಯಿಸಿದ್ದಾರೆ.

ಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು
ಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು
author img

By

Published : Jun 28, 2021, 5:39 PM IST

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿ ರಸ್ತೆ ಬದಿ ಅನುಮಾನಾಸ್ಪದವಾಗಿ ಸೂಟ್ ಕೇಸ್ ಕಂಡು ಬಂದಿದ್ದರಿಂದ ಸಾರ್ವಜನಿಕರು ಕೆಲ‌ಕಾಲ ಆತಂಕಕ್ಕೆ ಒಳಗಾದರು. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸೂಟ್ ಕೇಸ್​​ನಲ್ಲಿ ಹಳೆ ಬಟ್ಟೆ ಇರುವುದು ಗೊತ್ತಾಗಿದೆ.‌

ಮಲ್ಲೇಶ್ವರ ಠಾಣಾ ವ್ಯಾಪ್ತಿಯ 15ನೇ ಕ್ರಾಸ್ ಬಳಿ‌ ಇಂದು‌ ಮಧ್ಯಾಹ್ನ ಪಾದಚಾರಿ ಮಾರ್ಗದಲ್ಲಿ ಅನುಮಾನಾಸ್ಪದವಾಗಿ ಸೂಟ್ ಕೇಸ್ ಇರುವುದನ್ನು ಕಂಡು ಸ್ಥಳೀಯರು, ಪೊಲೀಸ್ ಕಂಟ್ರೋಲ್ ರೂಮ್​​ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕರೆಯಿಸಿದ್ದಾರೆ. ತಪಾಸಣೆ ನಡೆಸಿದಾಗ ಸೂಟ್​​ಕೇಸ್ ನಲ್ಲಿ ಹಳೆ ಬಟ್ಟೆಗಳು ಇರುವುದು ಗೊತ್ತಾಗಿದೆ.

ಇದನ್ನೂ ಓದಿ:8 ಅಂಗಡಿಗಳಲ್ಲಿ ಕಳ್ಳರ ಕೈ ಚಳಕ: ಸರಣಿ ಕಳ್ಳತನದಿಂದ ವ್ಯಾಪಾರಿಗಳಲ್ಲಿ ಆತಂಕ

ಸೂಟ್ ಕೇಸ್ ಬಿಟ್ಟು ಹೋಗಿರುವ ವ್ಯಕ್ತಿ ಈವರೆಗೆ ಪತ್ತೆಯಾಗಿಲ್ಲ. ಹಳೆ ಬಟ್ಟೆಯಾಗಿದ್ದರಿಂದ ಯಾರೋ ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ‌ ಮಾತನಾಡಿ, ಅನುಮಾನಾಸ್ಪದ ಸೂಟ್​​ಕೇಸ್​ ನೋಡಿ ಜನರು ಗಾಬರಿಯಾಗಿದ್ದಾರೆ. ಪೊಲೀಸರು, ಬಾಂಬ್​ ಸ್ಕ್ವಾಡ್​​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಿಂದ ಜನರ ಆತಂಕ ದೂರ ಆಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.