ETV Bharat / state

ಮಕ್ಕಳು ಕಿಡ್ನಾಪ್ ಆದರೆಂದು ದೂರು ಕೊಟ್ಟ ತಂದೆ... ಎರಡೇ ತಾಸಲ್ಲಿ ಪೊಲೀಸರಿಗೆ ಗೊತ್ತಾಯ್ತು ಸತ್ಯ!

ಮಕ್ಕಳಿಬ್ಬರು ಶಾಲೆಗೆ ತೆರಳದೇ ಕಿಡ್ನಾಪ್​ ಆಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಎರಡೇ ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದಾರೆ.

ಮಕ್ಕಳು ಕಿಡ್ನಾಪ್
author img

By

Published : Aug 16, 2019, 2:53 PM IST

ಬೆಂಗಳೂರು: ಹಾಡಹಗಲೇ ಇಬ್ಬರು ವಿದ್ಯಾರ್ಥಿಗಳನ್ನ ಕಿಡ್ನಾಪ್​ ಮಾಡಲಾಗಿದೆ ಎಂಬ ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸರು ಎರಡೇ ಗಂಟೆಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ತರಗತಿ ಓದುತ್ತಿರುವ ತರುಣ್ ಹಾಗೂ ರಮೇಶ್ ಸುಂಕದಕಟ್ಟೆ ಬಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಇಂದು ಬೆಳಗ್ಗೆ 8.30ಕ್ಕೆ ತರುಣ್ ಹಾಗೂ ರಮೇಶ್​​ರನ್ನು ಪೋಷಕರು ಶಾಲೆಗೆ ಕಳುಹಿಸಿದ್ದರು. ಆದರೆ ವಿದ್ಯಾರ್ಥಿಗಳು ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ತಮ್ಮ ಮಕ್ಕಳು ಕಿಡ್ನಾಪ್ ಆಗಿದ್ದಾರೆನೋ ಎಂಬ ಅನುಮಾನದ ಮೇಲೆ ತಂದೆ ಸುಬ್ರಮಣ್ಯ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು.

ಅಜ್ಜಿ ಮನೆಯಲ್ಲಿ ಅಡಗಿ ಕುಳಿತಿದ್ದ ಮಕ್ಕಳು

ದೂರಿನ ಆಧಾರದ ಮೇಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾಮಾಕ್ಷಿಪಾಳ್ಯ ಇನ್​ಸ್ಪೆಕ್ಟರ್​​ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಪೊಲೀಸರು ತನಿಖೆಗೆ ಇಳಿದಾಗ ಪ್ರಕರಣ ಸತ್ಯತೆ ಬಯಲಾಗಿದ್ದು, ತರುಣ್ ಹಾಗೂ ರಮೇಶ್ ಬೆಳಗ್ಗೆ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದರು. ಆಗ ಕೋಪಗೊಂಡ ತಂದೆ ಸುಬ್ರಮಣ್ಯ ಹೊಡೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹೊರಟಿದ್ದರೂ ಕೂಡ ಅಲ್ಲಿಗೆ ಹೋಗದೆ ಅಜ್ಜಿಯ ಮನೆಯಲ್ಲಿ ಅಡಗಿ ಕುಳಿತಿದ್ದರು‌. ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

Intro:ಅಪ್ಪ ಹೊಡೆದ ಕಾರಣ ಅಜ್ಜಿ ಮನೆಯಲ್ಲಿ ಅಡಗಿ ಕೂತರು ಮಕ್ಕಳು
ಎರಡೇ ಗಂಟೆಯಲ್ಲಿ ಪ್ರಕರಣ ಭೇಧಿಸಿದ ಖಾಕಿ ಟೀಂ

ಹಾಡಾಹಗಲೇ ಇಬ್ಬರು ವಿದ್ಯಾರ್ಥಿಗಳನ್ನ
ಮೂರು ಪ್ರತ್ಯೇಕ ಬೈಕ್ ಗಳಲ್ಲಿ ಬಂದು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪದ ಪ್ರಕರಣವನ್ನ ಕಾಮಾಕ್ಷಿಪಾಳ್ಯ ಪೊಲೀಸರು ಎರಡೇ ಗಂಟೆಯಲ್ಲಿ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ತರಗತಿ ಓದುತ್ತಿರುವ ತರುಣ್ ಹಾಗೂ ರಮೇಶ್ ಸುಂಕದಕಟ್ಟೆ ಬಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು.ಇಂದು ಬೆಳಿಗ್ಗೆ ೮.೩೦ ಕ್ಕೆ ತರುಣ್ ಹಾಗೂ ರಮೇಶ್ ರನ್ನು ಪೋಷಕರು ಶಾಲೆಗೆ ಕಳುಹಿಸಿದ್ದರು.ಆದರೆ ಶಾಲೆಗೆ ಹೋಗುವ ವೇಳೆ ತರುಣ್ ಹಾಗೂ ರಮೇಶ್ ಕಿಡ್ನಾಪ್ ಆಗಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ತರುಣ್ ರಮೇಶ್ ತಂದೆ ಸುಬ್ರಮಣ್ಯ ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ದೂರು ನೀಡಿದ್ದರು.

ವಿಚಾರ ಗೊತ್ತಾಗ್ತಿದ್ದ ಹಾಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗೆ ತನೀಕೆ ನಡೆಸುವಂತೆ ಸೂಚನೆ ನೀಡಿದ್ರು‌. ಹೀಗಾಗಿ ತನಿಖೆಗೆ ಇಳಿದಾಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.ತರುಣ್ ಹಾಗೂ ರಮೇಶ್ ಮುಂಜಾನೆ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ರು. ಹೀಗಾಗಿ ತಂದೆ ಹೊಡೆದಿದ್ದಕ್ಕೆ ಅಜ್ಜಿಯ ಮನೆಯಲ್ಲಿ ವಿದ್ಯಾರ್ಥಿಗಳು ಅಡಗಿ ಕೂತಿದ್ರು‌. ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸಿದ ವೇಳೆ ಸತ್ಯ ಬೆಳಕಿಗೆ ಬಂದಿದ್ದು
ಸದ್ಯ ತರುಣ್ ಹಾಗೂ ರಮೇಶ್ ನನ್ನು ಪತ್ತೆ ಮಾಡಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ
Body:KN_BNG_04_KIDNAP_7204498Conclusion:KN_BNG_04_KIDNAP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.