ETV Bharat / state

ಸುಷ್ಮಾ ಸ್ವರಾಜ್​​​​​​​ ನನಗೆ ತಾಯಿಯ ಪ್ರೀತಿ ಕೊಟ್ಟಿದ್ದಾರೆ: ಶಾಸಕ ಶ್ರೀರಾಮುಲು - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಸುಷ್ಮಾ ಸ್ವರಾಜ್ ಅವರ ಅಗಲಿಕೆ ಹಿನ್ನೆಲೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಕೆಐಎಎಲ್​​ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ‌ ಬೆಳೆಸಿದ್ದಾರೆ.

ಶಾಸಕ ಬಿ. ಶ್ರೀರಾಮುಲು
author img

By

Published : Aug 7, 2019, 10:51 AM IST

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನ ಹಿನ್ನೆಲೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಕೆಐಎಎಲ್​​ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ‌ ಬೆಳೆಸಿದ್ರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಪ್ರತಿಮ ರಾಜಕಾರಣಿ ಸುಷ್ಮಾ ಸ್ವರಾಜ್ ಅವರ ಅಗಲಿಕೆ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ನನ್ನ ಹಾಗೂ ಅವರ ನಡುವೆ ತಾಯಿ ಮಗನ ಸಂಬಂಧವಿತ್ತು. 1991ರಲ್ಲಿ ಅವರು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗಲಿಂದಲೂ ಅವರ ಪರಿಚಯವಿತ್ತು. ಅಂದು ಅವರು ಚು‌ನಾವಣೆಯಲ್ಲಿ ಸೋತರೂ ಧೃತಿಗೆಡಬೇಡಿ, ಪ್ರತಿ ವರ್ಷ ಬರ್ತಿನಿ ಅಂತ ಹೇಳಿದ್ರು‌. ಅದೇ ರೀತಿ ಬಂದು ಹೋಗ್ತಿದ್ರು‌‌ ಎಂದರು.

ದೆಹಲಿಯತ್ತ ಹೊರಟ ಶಾಸಕ ಬಿ.ಶ್ರೀರಾಮುಲು

ಯಾವಾಗ ಅವರು ಕರ್ನಾಟಕಕ್ಕೆ ಬಂದ್ರೂ ನನಗಾಗಿ ಒಂದು ಗಿಫ್ಟ್​​ ತರುತ್ತಿದ್ರು. ಇದು ನಿನ್ನ ಬಳಿ ಇಟ್ಕೊ, ಇದನ್ನು ನೋಡಿದಾಗ ನನ್ನ ನೆನಪು ಬರುತ್ತೆ ಅಂತ ಹೇಳ್ತಿದ್ರು. ಅವರ ಮನೆಗೆ ಹೋದಾಗಲು ಅವರ ಮಕ್ಕಳು, ಯಜಮಾನರು, ನಿನ್ನ ಮಗ ಬಂದ ನೋಡು ಅಂತಿದ್ರು. ಒಬ್ಬ ತಾಯಿ ಮಗನ ಮೇಲೆ ತೋರಿಸುವ ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ ಅವರು ನನ್ನ ಮೇಲೆ ತೋರಿಸುತ್ತಿದ್ರು ಎಂದರು.

ಅವರ ಬಗ್ಗೆ ಎಷ್ಟು ಹೇಳಿದ್ರು ಸಾಕಾಗುವುದಿಲ್ಲ. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅದು ಲಕ್ಷಾಂತರ ಅಭಿಮಾನಿಗಳಿಗೆ ನೋವು‌ಂಟು ಮಾಡಿದೆ. ಇಂದು ನಾನು ಈ ಸ್ಥಾನದಲ್ಲಿದ್ದೇನೆ ಅಂದ್ರೆ ಅದಕ್ಕೆ ಅವರು ಸಹ ಕಾರಣ‌. ಇಂದು ನಾನು ಸಹ ದೆಹಲಿಗೆ ಹೋಗ್ತಿದ್ದು, ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಸಂಜೆ ವಾಪಸ್ ಆಗ್ತೀನಿ ಎಂದರು.

Intro:KN_BNG_01_07_shreeramulu_Ambarish_7203301
Slug: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ: ದೆಹಲುಯತ್ತ ಹೊರಟ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು.

ಬೆಂಗಳೂರು: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ‌ ಹಿನ್ನೆಲೆ ದೆಹಲುಯತ್ತ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಕೆಐಎಎಲ್ ನಿಂದ ದೆಹಲಿಗೆ ಪ್ರಯಾಣ‌ ಬೆಳೆಸಿದ್ರು..

ಇದೇ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಪ್ರತಿಮ ರಾಜಕಾರಣಿ ಸುಷ್ಮಾಸ್ವರಾಜ್ ಅವರು ಅಗಲಿಕೆ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ನನ್ನ ಹಾಗೂ ಅವರ ನಡುವೆ ತಾಯಿ ಮಗನ ಸಂಬಂಧವಿತ್ತು. 1991 ರಲ್ಲಿ ಅವರು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗಲಿಂದಲೂ ಅವರ ಪರಿಚಯವಿತ್ತು. ಅಂದು ಅವರು ಚು‌ನಾವಣೆಯಲ್ಲಿ ಸೋತರೂ ದೃತಿಗೆಡಬೇಡಿ ಪ್ರತಿವರ್ಷ ಬರ್ತಿನಿ ಅಂತ ಹೇಳಿದ್ರು‌. ಅದೇ ರೀತಿ ಬಂದು ಹೋಗ್ತಿದ್ರು‌‌ ಎಂದರು..

ಯಾವಾಗ ಅವರು ಕರ್ನಾಟಕಕ್ಕೆ ಬಂದ್ರು ನನಗಾಗಿ ಒಂದು ಗಿಪ್ಟ್ ಅನ್ನ ತರುತ್ತಿದ್ರು. ಇದು ನಿನ್ನ ಬಳಿ ಇಟ್ಕೂ ಇದನ್ನು ನೋಡಿದಾಗ ನನ್ನ ನೆನಪುಬರುತ್ತೆ ಅಂತ ಹೇಳ್ತಿದ್ರು. ಅವರ ಮನೆಗೆ ಹೋದಾಗಲು ಅವರ ಮಕ್ಕಳು ಯಜಮಾನರು ನಿನ್ನ ಮಗ ಬಂದ ನೋಡು ಅಂತಿದ್ರು. ಒಬ್ಬ ತಾಯಿ ಮಗನ ಮೇಲೆ ತೋರಿಸುವ ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ ಅವರು ನನ್ನ ಮೇಲೆ ತೋರಿಸುತ್ತಿದ್ರು. ಅವರ ಬಗ್ಗೆ ಎಷ್ಟು ಹೇಳಿದ್ರು ಸಾಕಾಗುವುದಿಲ್ಲ. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಅದು ಲಕ್ಷಾಂತರ ಅಭಿಮಾನಿಗಳಿಗೆ ನೋವು‌ಂಟು ಮಾಡಿದೆ ಎಂದರು..

ಇಂದು ನಾನು ಈ ಸ್ಥಾನದಲ್ಲಿದ್ದೇನೆ ಅಂದ್ರೆ ಅದಕ್ಕೆ ಅವರು ಸಹ ಕಾರಣ‌. ಇಂದು ನಾನು ಸಹ ದೆಹಲಿಗೆ ಹೋಗ್ತಿದ್ದು, ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಸಂಜೆ ವಾಪಸ್ ಆಗ್ತೀನಿ ಎಂದರು..

Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.