ಬೆಂಗಳೂರು: ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ಬೆಂಗಳೂರಿಗೆ ಆಗಮಿಸಿ ಜಿಎಸ್ಟಿ ಬಗ್ಗೆ ಸಹಕಾರಿ ಸಚಿವರಾದ ಬಂಡೆಪ್ಪ ಕಾಶಪ್ಪನವರ್ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಜುಲೈ 1 ಕ್ಕೆ ಜಿಎಸ್ಟಿ ಜಾರಿಯಾಗಿ ಎರಡು ವರ್ಷ ಆಗಲಿದೆ, ಜಿಎಸ್ಟಿಯ ಎರಡನೇ ಸಂವತ್ಸರಕ್ಕೆ ಸರಳತೆ ಹಾಗೂ ಅನುಸರಣೆಯ ಬಗ್ಗೆ ಒತ್ತು ನೀಡಲಾಗುವುದು, ಐ ಟಿ ಸಂಸ್ಥೆಗಳು ಹೊಸ ಮಾದರಿಯ ತೆರಿಗೆ ಪಾವತಿಯನ್ನು ಕಂಡುಹಿಡಿದಿದ್ದಾರೆ. ಇದೆ ಅನುಸಾರದಂತೆ ಇನ್ಫೋಸಿಸ್ ಸಂಸ್ಥೆ ತೆರಿಗೆ ಪಾವತಿ ಬಗ್ಗೆ ಪ್ರೋಟೋಟೈಪ್ಸ್ ತಯಾರಿಸಿದ್ದಾರೆ, ಅದನ್ನು ಜುಲೈ 1 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದರು.
ಪೂರ್ಣಪ್ರಮಾಣದಲ್ಲಿ ಆನ್ಲೈನ್ನಲ್ಲಿ ತೆರಿಗೆ ಪಾವತಿ ಹಾಗೂ ತೆರಿಗೆ ರಿಟರ್ನ್ಸ್ ಅಳವಡಿಸಲಿದ್ದೇವೆ. ಈಗಾಗಲೇ ಮೂರು ರಾಜ್ಯಗಳು ವಾಹನಗಳಿಗೆ ಆರ್ ಎಫ್ ಐ ಡಿ ಪ್ರಯೋಗಿಸಿದ್ದಾರೆ ಹಾಗೂ ಅದು ಯಶಸ್ವಿಯಾಗಿದೆ. ಇದನ್ನು ಎಲ್ಲಾ ರಾಜ್ಯಗಳಿಗೆ ಕೂಲಂಕುಶವಾಗಿ ಪರಿಶೀಲಿಸಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.
ಆರ್ ಎಫ್ ಐ ಡಿ ಅಳವಡಿಕೆಯಿಂದ ಕಳ್ಳ ರಸೀದಿಗಳು ನಿಯಂತ್ರಣವಾಗಲಿದೆ. ವ್ಯಾಟ್ ತೆರಿಗೆಯಿಂದ ಸರ್ಕಾರದ ಆದಾಯದಲ್ಲಿ ಏರುಪೇರು ಕಾಣುತ್ತಿತ್ತು. ಆದರೆ ಜಿ ಎಸ್ ಟಿ ಬಂದ ಮೇಲೆ ಶೇಕಡಾ 14 ರಷ್ಟು ಪ್ರಗತಿ ಕಾಣುತ್ತಿದೆ ಎಂದು ಹೇಳಿದರು.