ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿ ಹರಡದಂತೆ ತಡೆಗಟ್ಟುವ ಹಿನ್ನೆಲೆ ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲಿಸಿ ಬೆಂಗಳೂರಿನ ಯಲಹಂಕ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದೆ.
ಯಲಹಂಕ ಏರ್ಪೋರ್ಟ್, ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಅಂಗಡಿ-ಮುಂಗಟ್ಟು, ಹೋಟೆಲ್ಗಳು ಬಂದ್ ಆಗಿವೆ. ಬೆರಳೆಣಿಕೆಯಷ್ಟು ಮೆಡಿಕಲ್ ಶಾಪ್ಗಳು ಮಾತ್ರ ತೆರೆದಿವೆ. ಎನ್‌ಇಎಸ್ ಸರ್ಕಲ್, ಸಂತೆ ಸರ್ಕಲ್, ಡೈರಿ ಸರ್ಕಲ್ ಸೇರಿ ಜನಜಂಗುಳಿಯಿಂದ ಕೂಡಿರುತ್ತಿದ್ದ ಪ್ರದೇಶಗಳು ಖಾಲಿ ಖಾಲಿ ಹೊಡೆಯುತ್ತಿವೆ.
ಬಸ್ಗಾಗಿ ಕಾಯುವವರ ಸಂಖ್ಯೆ ಕೂಡಾ ಬೆರಳೆಣಿಕೆಯಷ್ಟು ಇತ್ತು. ಒಟ್ಟಾರೆಯಾಗಿ ಕೊರೊನಾ ಮಹಾಮಾರಿ ಹರಡದಂತೆ ತಡೆಗಟ್ಟಲು ಯಲಹಂಕ, ಬ್ಯಾಟರಾಯನಪುರ ಸೇರಿ ಸುತ್ತಮುತ್ತಲ ಜನತೆ ಸಂಪೂರ್ಣ ಬೆಂಬಲ ನೀಡಿದ್ದಾರೆ.