ಬೆಂಗಳೂರು : ಮತ್ತಷ್ಟು ಆ್ಯಂಟಿಜೆನ್ ಕಿಟ್ಗಳು ಅವಶ್ಯಕತೆಯಿದ್ದು, ಆದಷ್ಟು ಬೇಗ ಒದಗಿಸುವಂತೆ ನಿನ್ನೆ ಮುಖ್ಯಮಂತ್ರಿ ಜೊತೆ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಹಾಗೂ ಬೊಮ್ಮನಹಳ್ಳಿಯ ಕೊರೊನಾ ನಿಯಂತ್ರಣ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಗೊಟ್ಟಿಗೆರೆಯಲ್ಲಿ ಆಯೋಜಿಸಿದ್ದ 20 ಆ್ಯಂಬುಲೆನ್ಸ್ ಹಸ್ತಾಂತರ ಮತ್ತು ಕೊರೊನಾ ಸ್ಥಿತಿಗತಿಯ ಕುರಿತ ಸಭೆ ಬಳಿಕ ಮಾತನಾಡಿ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣಕ್ಕೆ 2,300 ಆ್ಯಂಟಿಜೆನ್ ಕಿಟ್ಗಳನ್ನು ಈಗಾಗಲೇ ನೀಡಲಾಗಿದ್ದು, ಇದರಿಂದ ತುರ್ತು ಕೋವಿಡ್ ಪರೀಕ್ಷೆ ನಡೆಸಿ ಫಲಿತಾಂಶ ನೀಡಲು ಸಹಕಾರಿಯಾಗಿದೆ. ಇನ್ನಷ್ಟು ಆ್ಯಂಟಿಜೆನ್ ಕಿಟ್ಗಳ ಅವಶ್ಯಕತೆಯಿದೆ. ಈ ಬಗ್ಗೆ ನಿನ್ನೆ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಒಟ್ಟು 5 ಲಕ್ಷ ಕಿಟ್ಗಳ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಲಭ್ಯವಾಗಲಿದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕ ಕೃಷ್ಣಪ್ಪ, ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು, ಎಲ್ಲ ವಾರ್ಡ್ ಕಾರ್ಪೊರೇಟರ್ಗಳು ಸಭೆಯಲ್ಲಿ ಭಾಗವಹಿಸಿದ್ದರು.