ETV Bharat / state

ಬಿಜೆಪಿ ಕೇಂದ್ರ ಕಚೇರಿಗೆ ಸುಮಲತಾ ಭೇಟಿ, ಹೆಚ್ಚಿದ ಕುತೂಹಲ!

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್ ಇಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

author img

By

Published : Jun 8, 2019, 8:44 PM IST

ಬಿಜೆಪಿ ಕೇಂದ್ರ ಕಛೇರಿಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ..!

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಇಂದು ದಿಢೀರ್ ಅಂತ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆಗೆ ಸುಮಲತಾ ಅಂಬರೀಶ್ ಭೇಟಿ‌ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿತ್ತು. ಆದ್ದರಿಂದ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳಲು ಬಂದಿದ್ದೆ. ಅಭಿವೃದ್ಧಿ ವಿಚಾರವಾಗಿ ಅವರ ಸಹಕಾರ ಕೇಳೋದು ನನ್ನ ಜವಾಬ್ದಾರಿ ಎಂದರು.

'ಬಿಜೆಪಿಗೆ ನನ್ನ ಬೆಂಬಲದ ಅವಶ್ಯಕತೆ ಇಲ್ಲ'

ಬಿಜೆಪಿ ನನ್ನ ಬೆಂಬಲ ಕೇಳಿಲ್ಲ.ಅಭಿವೃದ್ಧಿ ವಿಚಾರವಾಗಿ ಪಕ್ಷ ಸೇರುವ ಪ್ರಮೇಯ ಬಂದ್ರೆ, ಮತ ಹಾಕಿದ ಜನರ ಅಭಿಪ್ರಾಯ ಕೇಳಿ ಮುಂದಿನ ಹೆಜ್ಜೆ ಇಡ್ತೇನೆ ಎಂದ್ರು.

ಬಿಜೆಪಿ ಕೇಂದ್ರ ಕಛೇರಿಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ..!

ಬಿಜೆಪಿ 303 ಸ್ಥಾನ ಗೆದ್ದಿದೆ, ಆದ್ದರಿಂದ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಅಗತ್ಯ ಇಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ರು.

ಬಿಜೆಪಿ ಕೇಂದ್ರ ಕಛೇರಿಗೆ ಭೇಟಿ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್...!!!!

ಮಂಡ್ಯ ಲೋಕಸಾಭ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಇಂದು .ದಿಢೀರ್ ಅಂತ ಬೆಂಗಳೂರಿನ ಬಿಜೆಪಿ ಕೇಂದ್ರ ಕಛೇರಿಗೆ ಬೇಟಿ ಕೊಟ್ಟಿದ್ದಾರೆ.ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಜೊತೆಗೆ ಸುಮಲತಾ ಅಂಬರೀಶ್ ಭೇಟಿ‌ ಮಾಡಿ ಸುಮಾರು ಒಂದು ಗಂಟೆಗು ಹೆಚ್ಚು ಕಾಲ ಚರ್ಚೆನಡೆಸಿದ್ರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದೆ ಸಂಸದೆ ಸುಮಲತಾ ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿತ್ತು ಆದ್ದರಿಂದ ಲಬಿಜೆಪಿ
ನಾಯಕರಿಗೆ ಧನ್ಯವಾದ ಹೇಳಲು ಬಂದಿದ್ದೆ.ಅಭಿವೃದ್ಧಿ ವಿಚಾರವಾಗಿ ಅವರ ಸಹಕಾರ ಕೇಳೋದು ನನ್ನ ಜವಬ್ದಾರಿ .ಅಲ್ಲದೆ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳೋದು ನನ್ನ ಕರ್ತವ್ಯ. ಇನ್ನೂ ಬಿಜೆಪಿ ಸಹ ನನ್ನ ಬೆಂಬಲ ಕೇಳಿಲ್ಲ. ಅಭಿವೃದ್ಧಿ ವಿಚಾರವಾಗಿ ಪಕ್ಷ ಸೇರುವ ಪ್ರಮೇಯ ಬಂದ್ರೆ, ಮತ ಹಾಕಿದ ಜನರ ಕೇಳಿ ಮುಂದಿನ ಹೆಜ್ಜೆ ಇಡ್ತೇನೆ.ಅಲ್ಲದೆ ಬಿಜೆಪಿ 303 ಸ್ಥಾನ ಗೆದ್ದಿದೆ ಅದ್ದರಿಂದ ಬಿಜೆಪಿಗನನ್ನ ಬಾಹ್ಯ ಬೆಂಬಲ ಅಗತ್ಯ ಇಲ್ಲ ಎಂದು ಹೇಳಿದ ಸುಮಲತಾ ಅಂಬರೀಶ್ ಸಚಿವ ಡಿ.ಸಿ. ತಮ್ಮಣ್ಣ ಹೇಳಿಕೆ ವಿಚಾರ ಖಾರವಾಗಿ ಪ್ರತಿಕಿಯೆ ನೀಡಿದರು .ಜನ ವೋಟು ಹಾಕಿ ಗೆಲ್ಲಿಸಿದ ಮೇಲೆ ಅವರಿಗೆ ಕೆಲಸ ಮಾಡದಿದ್ರೆ ಸ್ಥಾನದಲ್ಲಿದ್ದೂ ಅರ್ಥ ಇಲ್ಲ.ಜನರಿಗೆ ಸಹಾಯ ಮಾಡಲು ಆಗಲ್ಲ ಅಂದ್ರೆ ರಾಜೀನಾಮೆ ನೀಡಿ ಅಂತ ಜನ ಕೇಳ್ತಾರೆ .ಡಿ.ಸಿ. ತಮ್ಮಣ್ಣ ರಾಜೀನಾಮೆ ಕೊಡಿ ಎಂದು ನಾನು ಕೇಳಲ್ಲ, ಜನರೇ ಕೇಳ್ತಾರೆ.ಅಧಿಕಾರ ನೀಡಿರೋದು ದರ್ಪ ಮಾಡೋಕೆ ಅಲ್ಲ, ಅವರು ಅದನ್ನ ಅರ್ಥ ಮಾಡ್ಕೋ ಬೇಕು.ಚುನಾವಣಾ ಸಮಯದಲ್ಲಿ ಮಾಡಿದ ರೀತಿ ಈಗಲು ರಾಜಕೀಯ ಮಾಡೋದ ಬಿಟ್ಟು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು ಎಂದು ಸಚಿವ ಡಿಸಿ ತಮ್ಮಣ್ಣ ಗೆ ಸುಮಲತಾ ಟಾಂಗ್ ಕೊಟ್ಟರು..

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.