ETV Bharat / state

ಲಾಕ್​ಡೌನ್​ ವೇಳೆ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಹೆಚ್ಚಳ: ಪೊಲೀಸ್ ಇಲಾಖೆ ವರದಿ

author img

By

Published : Oct 15, 2020, 10:42 AM IST

ಕೊರೊನಾ ಪ್ರಚೋದಿತ ಲಾಕ್​ಡೌನ್​ ಸಂದರ್ಭದಲ್ಲಿ ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಹೆಚ್ಚಿದೆ ಎಂದು ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.

ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಹೆಚ್ಚಳ
ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಹೆಚ್ಚಳ

ಬೆಂಗಳೂರು: ಕೊರೊನಾ ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಅನೇಕರಿಗೆ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊರೊನಾ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಸುಮಾರು ನಾಲ್ಕು-ಐದು ತಿಂಗಳುಗಳ ಕಾಲ ಲಾಕ್​ಡೌನ್ ಜಾರಿ ಮಾಡಿತ್ತು. ಆದರೆ ಇದರಿಂದ ಬಹಳಷ್ಟು ಆರ್ಥಿಕ ಸ್ಥಿತಿಗತಿಗಳು ಕುಗ್ಗುತ್ತಾ ಹೋಯಿತು. ತದನಂತರ ಬಹುತೇಕ ಮಂದಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಕಳೆದುಕೊಂಡರೆ, ಇನ್ನು ಕೆಲವರು ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಕುಟುಂಬದ ಖರ್ಚು ವೆಚ್ಚ, ಜೀವನದ ಬಂಡಿಯನ್ನ ಸಾಗಿಸೋದೇ‌ ದೊಡ್ಡ ಸವಾಲಾಯಿತು.

ಲಾಕ್​ಡೌನ್ ರಿಲೀಫ್ ಆದ ನಂತರ ಸರ್ಕಾರದ ಕೆಲವು ನಿಯಮಗಳ ಪ್ರಕಾರ ದೇವಸ್ಥಾನ, ಮಾಲ್, ಹೋಟೆಲ್, ಚಿತ್ರಮಂದಿರ, ಬಸ್ಸು, ಮೆಟ್ರೋಗಳನ್ನ ನಿಧಾನಗತಿಯಲ್ಲಿ ತೆರೆಯಲು ಅನುಮತಿ ನೀಡಿದ್ದರೂ ಸಹ ವಾರದ, ತಿಂಗಳ ಆದಾಯ ನಂಬಿದವರು ಇದರಿಂದ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಯ್ತು.

ಇನ್ನು ಕೆಲಸ ಇಲ್ಲದೆ ಮನೆಯಲ್ಲೇ ಇರುವಾಗ ಮನೆಯಲ್ಲಿ ಜಗಳ, ಕುಟುಂಬ ಕಲಹ, ವಿಪರೀತ ಒತ್ತಡ, ವರದಕ್ಷಿಣೆ ಕಿರುಕುಳ, ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿ ನೋವು ಅನುಭವಿಸಿದವರ ವಿಚಾರಗಳು ಬೆಳಕಿಗೆ ಬರುತ್ತಿದ್ದವು. 2020ರಲ್ಲಿ ಕೊರೊನಾ ಬಂದ ನಂತರ ಬಹಳಷ್ಟು ಮಂದಿ ಮನೆಯಲ್ಲೇ ಇದ್ದು, ನೆಮ್ಮದಿಯ ಜೀವನ ಮಾಡಬಹುದಿತ್ತು. ಆದರೆ ನೆಮ್ಮದಿಯನ್ನು ಕಳೆದುಕೊಂಡು ಬಹಳಷ್ಟು ಮಂದಿ ಜೀವನವೇ ಸಾಕು ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿವೆ ಎ‌ಂದು ಪೋಲಿಸ್ ಇಲಾಖೆಯ ದಾಖಲಾತಿಗಳು ಹೇಳುತ್ತಿವೆ.

ದಾಖಲಾತಿಗಳನ್ನ ನೋಡುವುದಾದರೆ 480 ಮಹಿಳೆಯರು, 918 ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿಯೊಂದು ಆತ್ಮಹತ್ಯೆಯ ಹಿಂದೆ ಒಬ್ಬೊಬ್ಬರು ಒಂದೊಂದು ನೋವುಗಳನ್ನ ಅನುಭವಿಸಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಲಾಕ್​ಡೌನ್ ರಿಲೀಫ್ ಆಗಿದೆ. ಆದರೆ ಕೊರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚಾಗ್ತಿದ್ದು, ಕೆಲ ಜನ ಹೊರಗಡೆಯ ಪ್ರಪಂಚ ಮರೆತು ಜೀವನದ ಲೈಫ್ ಸ್ಟೈಲ್ ಬದಲಾವಣೆ ಮಾಡ್ತಿದ್ದಾರೆ. ಹೊರಗಿನ ತಿಂಡಿ ತಿನಿಸುಗಳಿಗೆ ಕಡಿವಾಣ ಹಾಕಿ ಮನೆಯಲ್ಲಿ ಆದಷ್ಟು ತಯಾರಿಸಲು ಪ್ರಯತ್ನ ಮಾಡ್ತಿದ್ದಾರೆ. ಹಾಗೆಯೇ ಹೈ ಫೈ ಜೀವನಕ್ಕೆ ಬ್ರೇಕ್ ಹಾಕಿ ಖರ್ಚುಗಳನ್ನ ಕಮ್ಮಿ ‌ಮಾಡ್ತಿದ್ದಾರೆ. ಕಂಪನಿಗಳು ಅರ್ಧ ಸಂಬಳ ನೀಡಿ‌ ತಮ್ಮ ಕಂಪನಿ ನಷ್ಟದಲ್ಲಿದೆ ಎಂಬ ಉತ್ತರ ನೀಡುತ್ತಿವೆ. ಹೀಗೆ ಬಹುತೇಕ ವಿಚಾರಗಳಿಂದ ಜನರ ಜೀವನಕ್ಕೆ ಪೆಟ್ಟು ಬಿದ್ದು, ಜೀವನವೇ ಸಾಕೆನ್ನುವ ಮಟ್ಟಕ್ಕೆ ತಲುಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.