ETV Bharat / state

ಸಹಕಾರಿ ಇಲಾಖೆ ಚುನಾವಣಾ ವೆಚ್ಚ ನಿಗದಿ ಸಾಧ್ಯವಿಲ್ಲ: ಸಚಿವ ಎಸ್‌.ಟಿ.ಸೋಮಶೇಖರ್‌ - ವಿಧಾನಪರಿಷತ್​​ನಲ್ಲಿ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್

ಸಹಕಾರ ಇಲಾಖೆ ಚುನಾವಣೆಗೆ ಸರ್ಕಾರ ವೆಚ್ಚ ಭರಿಸುವುದಿಲ್ಲ. ಚುನಾವಣೆಯ ಸುಧಾರಣೆಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಇಲ್ಲಿ ಇನ್ನಷ್ಟು ಬದಲಾವಣೆ ಮಾಡಬೇಕಿದ್ದರೆ ಸೂಚಿಸಲಿ. ಇದೇ ಅಧಿವೇಶನ ಮುಗಿಯುವ ಮುನ್ನ ಅಳವಡಿಸಿಕೊಳ್ಳುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

Somashekhar
ಸೋಮಶೇಖರ್
author img

By

Published : Mar 8, 2022, 3:48 PM IST

ಬೆಂಗಳೂರು: ಸಹಕಾರ ಇಲಾಖೆ ಚುನಾವಣೆಗೆ ಸರ್ಕಾರ ವೆಚ್ಚ ಭರಿಸುವುದಿಲ್ಲ. ಹಾಗಾಗಿ ಚುನಾವಣಾ ವೆಚ್ಚ ಇಷ್ಟೇ ಎಂದು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ವಿಧಾನಪರಿಷತ್​​ನಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಶೇ.65 ರಿಂದ 70 ರಷ್ಟು ಹೊಂದಾಣಿಕೆ ಮೇಲೆ ಚುನಾವಣೆ ನಡೆಯುತ್ತದೆ. ಇನ್ನೂ ಕೆಲವು ಕಡೆ ರಕ್ತಪಾತ ಉಂಟಾಗುವ ಸಾಧ್ಯತೆ ಇದ್ದು, ಅಂತಹ ಕಡೆ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಇಲ್ಲಿ ವೆಚ್ಚ ಹೆಚ್ಚಾಗುತ್ತದೆ. ಚುನಾವಣೆ ಸುಧಾರಣೆಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಇಲ್ಲಿ ಇನ್ನಷ್ಟು ಬದಲಾವಣೆ ಮಾಡಬೇಕಿದ್ದರೆ ಸೂಚಿಸಲಿ. ಇದೇ ಅಧಿವೇಶನ ಮುಗಿಯುವ ಮುನ್ನ ಅಳವಡಿಸಿಕೊಳ್ಳುತ್ತೇವೆ. ಏನೇ ಸಲಹೆ, ಸೂಚನೆಗಳಿದ್ದರೂ ಕಳುಹಿಸಿಕೊಡಬಹುದು ಎಂದರು.

ಸಹಕಾರಿ ಚುನಾವಣೆ ಸಂದರ್ಭ ಅನಗತ್ಯ ವೆಚ್ಚ ಆಗುತ್ತದೆ. ಪೊಲೀಸರನ್ನು ಹೆಚ್ಚು ನಿಯೋಜಿಸಿ ವೆಚ್ಚ ಹೆಚ್ಚಿಸಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯ ಅನಿಲ್ ಕುಮಾರ್ ಮನವಿ ಮಾಡಿದರು.

ಇದನ್ನೂ ಓದಿ: ಬಾಳ ಜಾಣರಿದ್ದೀರಿ ಎಂದ ರಮೇಶ್‌ ಕುಮಾರ್‌ಗೆ ನಿನ್ನ ಹತ್ರನೇ ಕಲಿತ್ತಿದ್ದೀನಿ ಎಂದ ಸಿದ್ದರಾಮಯ್ಯ

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಸರೋಜಿನಿ ಮಹಿಷಿ ವರದಿ ಅನ್ವಯ ಆದ್ಯತೆ ನೀಡುವ ಕಾರ್ಯ ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಜೆಡಿಎಸ್ ಸದಸ್ಯ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸಮಾನವಾಗಿ ಕೈಗಾರಿಕೆ ಹಂಚಿಕೆ ಮಾಡಲು ಒಂದು ಜಿಲ್ಲೆ, ಒಂದು ‌ಕೈಗಾರಿಕೆ ಕಾರ್ಯಕ್ರಮ ರೂಪಿಸಿದ್ದೇವೆ. ಎರಡು ಹಾಗೂ ಮೂರನೇ ಹಂತದ ನಗರಕ್ಕೆ ಕೈಗಾರಿಕೆ ಬಂದರೆ ಹೆಚ್ಚು ರಿಯಾಯಿತಿ ನೀಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಮೈಸೂರು, ಚಾಮರಾಜನಗರ ಇತರೆ ಜಿಲ್ಲೆಗೆ ಅಗತ್ಯವಿರುವ ಕೈಗಾರಿಕೆ ಬಂದಲ್ಲಿ ನಿಯೋಜಿಸುವ ಕಾರ್ಯ ಮಾಡುತ್ತೇವೆ. ಕೈಗಾರಿಕೆಗಳು ಬಂದರೆ ಮನವೊಲಿಸಿ ಹಳೆ ಮೈಸೂರು ಭಾಗಕ್ಕೆ ಕಳುಹಿಸಿಕೊಡುತ್ತೇವೆ ಎಂದರು.

ಹಣ ಬಿಡುಗಡೆ ಆಗಲಿದೆ: ಸಚಿವ ಸೋಮಶೇಖರ್ ಮಾತನಾಡಿ, ಸಹಕಾರ ಸಚಿವನಾಗಿ 7 ಬಾರಿ ಭೇಟಿ ನೀಡಿದ್ದೇನೆ. ಕೊಡಗು ಡಿಸಿಸಿ ಬ್ಯಾಂಕ್ ಸುಸ್ಥಿತಿಯಲ್ಲಿದೆ. 22 ಹಾಗೂ 28 ಕೋಟಿ ರೂ. ಎರಡು ಹಂತದಲ್ಲಿ ಬಿಡುಗಡೆ ಆಗಿದೆ. ಬಜೆಟ್​ನಲ್ಲಿ ಅನುಮೋದನೆ ಆಗಿದೆ. 2.70 ಕೋಟಿ ರೂ. ಮಾತ್ರ ಬಿಡುಗಡೆ ಆಗಬೇಕು. ಅದನ್ನು ಕೆಲವೇ ದಿನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಕೊಡಗು ಜಿಲ್ಲೆಯ ಸಹಕಾರ‌ ಸಂಘಗಳಿಗೆ ಬರಬೇಕಿರುವ ಬಾಕಿ ಮೊತ್ತ 16 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸದಸ್ಯೆ ವೀಣಾ ಅಚ್ಚಯ್ಯ ಮನವಿ ಮಾಡಿದರು.

ಇದನ್ನೂ ಓದಿ: ಮಹಿಳಾ ದಿನದಂದೇ ಅಮೃತಧಾರೆ ಎದೆಹಾಲು ಬ್ಯಾಂಕ್​ಗೆ ಚಾಲನೆ

ಕೋವಿಡ್​ನಿಂದ ಮೃತಪಟ್ಟ ರೈತರ ಸಾಲ ಮನ್ನಾ ವಿಚಾರ ಮೊದಲು ಇತ್ತು. ಆದರೆ ನಂತರ 1 ಲಕ್ಷ ರೂ. ಮೃತರ ಕುಟುಂಬಕ್ಕೆ ನೀಡಲು ತೀರ್ಮಾನಿಸಲಾಯಿತು. ಇನ್ನು ಕೇಂದ್ರ ಸರ್ಕಾರ 50 ಸಾವಿರ ರೂ. ನೀಡುತ್ತಿದೆ. ತಲಾ 1.5 ಲಕ್ಷ ರೂ. ಮೃತ ರೈತರ ಕುಟುಂಬಕ್ಕೆ ನೀಡಿದ್ದೇವೆ. ರೈತರ ಕುಟುಂಬಕ್ಕೆ ಸಾಲ ಮರುಪಾವತಿಗೆ ಅಂತಿಮ ಗಡುವು ಮೂರು ಸಾರಿ ವಿಸ್ತರಿಸಿ, ರೈತರ ಪರವಾಗಿ ಸರ್ಕಾರ ಸಹಕಾರಿ ಬ್ಯಾಂಕ್​ಗಳಿಗೆ 134 ಕೋಟಿ ರೂ. ಪಾವತಿಸಿದೆ. ಹೊಸ ಸಾಲ ನೀಡಿಕೆಗೆ‌ ಈ ಸಾಲ ಕಟ್ಟಿದ ರೈತರಿಗೆ ತೊಂದರೆ ಎದುರಾಗುವುದಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಮುನಿರಾಜು ಗೌಡ ಚುಕ್ಕೆ ಗುರಿತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ರೈತರಿಗೆ ಸರ್ಕಾರ ಅನ್ಯಾಯ ಮಾಡಿಲ್ಲ. ಸೂಕ್ತ ಸಂದರ್ಭದಲ್ಲಿ ಸರಕಾರಿ ಬ್ಯಾಂಕ್ ಮೂಲಕ ಸಹಾಯ ಮಾಡುತ್ತೇವೆ. ಆತಂಕ ಬೇಡ ಎಂದರು.

ಮುನಿರಾಜುಗೌಡ ಮಾತನಾಡಿ, ಕೋವಿಡ್​ನಿಂದ ಮೃತಪಟ್ಟ 10,437 ರೈತರ 92 ಕೋಟಿ ರೂ. ಸಾಲ ಮನ್ನಾ ಮಾಡುವ ಭರವಸೆ ನೀಡಿದ್ರಿ. ಆದ್ರೆ ಇದು ಈಡೇರಿಲ್ಲ. ಆದಷ್ಟು ಬೇಗ ಈ ಕಾರ್ಯ ಆಗಬೇಕು. ರೈತರ ಕುಟುಂಬವನ್ನು ಸಾಲದ ವಿಚಾರದಲ್ಲಿ ಕಪ್ಪು ಪಟ್ಟಿಗೆ ಸೇರಿಸಿ ಮುಂದೆ ಸಾಲ ಸಿಗದಂತೆ ಮಾಡಬಾರದು ಎಂದು ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.