ETV Bharat / state

9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ..

author img

By

Published : Nov 30, 2022, 4:32 PM IST

Updated : Nov 30, 2022, 6:11 PM IST

ಸರ್ಕಾರ ನಿದ್ರೆ ಮಾಡುತ್ತಿರುವ ನಾಟಕ ಆಡಬಾರದು, ಇಂತಹ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

sugarcane growers entered the 9th day protest
9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋ ರಾತ್ರಿ ಧರಣಿ..

ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕಬ್ಬು ಬೆಳೆಗಾರ ರೈತರು ಫ್ರೀಡಂ ಪಾರ್ಕ್​​​​​ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ 9ನೇ ದಿನವೂ ಮುಂದುವರೆದಿದೆ. ಇಂದು ನೂರಾರು ರೈತರು ಅರೆ ಬೆತ್ತಲೆಯಾಗಿ ತಲೆ ಮೇಲೆ ಕಲ್ಲು ಹೊತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ರೈತರನ್ನು ಬೆತ್ತಲೆ ಮಾಡಿದ ಸರ್ಕಾರಕ್ಕೆ ಧಿಕ್ಕಾರ, ಕಬ್ಬು ಬೆಳೆಗಾರರನ್ನು ಸಕ್ಕರೆ ಕಾರ್ಖಾನೆ ಮಾಲೀಕರ ಮರ್ಜಿಯಲ್ಲಿ ಕಬ್ಬಿನ ರೀತಿ ಅರೆಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಲಾಯಿತು.

ರೈತರ ಬಳಿ ಅಸ್ತ್ರಗಳಿವೆ: ಅಹೋ ರಾತ್ರಿ ಚಳವಳಿ ನಿರತರಾಗಿರುವ ರೈತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಸರ್ಕಾರ ನಿದ್ರೆ ಮಾಡುತ್ತಿರುವ ನಾಟಕ ಆಡಬಾರದು. ಇಂತಹ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ. ಅದನ್ನು ಪ್ರಯೋಗ ಮಾಡಿದರೆ ಸರ್ಕಾರಕ್ಕೆ ಗಂಡಾಂತರ ಖಚಿತ.

ಉದ್ಯಮಿಗಳ ಮಾರ್ವಾಡಿಗಳ ಮರ್ಜಿಯಲ್ಲಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತ ಪರ ಎಂದು ಹೇಳುವ ಸರ್ಕಾರ ರೈತರನ್ನು ಬೀದಿಯಲ್ಲಿ ಮಲಗುವಂತೆ ಮಾಡಿರುವುದು ಏಕೆ? ಎಂದು ಉತ್ತರಿಸಲಿ. ನಾಳೆ ಸಂಜೆ ಒಳಗೆ ಸರ್ಕಾರದ ನಿರ್ಧಾರ ಹೊರ ಬೀಳದಿದ್ದರೆ, ರೈತರ ಹೋರಾಟದ ಕಠಿಣ ಅಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ..

ಸರ್ಕಾರದ ತಾಕತ್ತು ತೋರಿಸಲಿ: 9 ದಿನಗಳಿಂದ ವಿಭಿನ್ನ ರೀತಿಯ ಹೋರಾಟ ನಡೆಸುತ್ತಿದ್ದರೂ ಕುಂಭಕರ್ಣನ ರೀತಿಯಲ್ಲಿ ಮಲಗಿರುವ ರಾಜ್ಯ ಸರ್ಕಾರ ಎಚ್ಚೆತ್ತು ಕಬ್ಬುದರ ಏರಿಕೆ ಮಾಡಲಿ. ಸರ್ಕಾರ ಪದೇ ಪದೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡುವ ನಾಟಕವಾಡದೇ ಕಾನೂನಿನಂತೆ ಕಬ್ಬು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡು ಸರ್ಕಾರದ ತಾಕತ್ತು ತೋರಿಸಲಿ ಎಂದರು

ಇಂದಿನ ಪ್ರತಿಭಟನೆಯಲ್ಲಿ, ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ರೈತ ಸಂಘ ವಿ ಆರ್ ನಾರಾಯಣರೆಡ್ಡಿ ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್,ಶಿವಮ್ಮ,ಹಾಸನ ಮಂಜೇಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಪಾತಾಳಕ್ಕಿಳಿದ ಈರುಳ್ಳಿ ಬೆಲೆ..! 205 ಕೆಜಿ ಮಾರಿದ ರೈತರಿಗೆ ಬಂದ ಲಾಭ ಕೇವಲ 8 ರೂಪಾಯಿ!

Last Updated : Nov 30, 2022, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.