ETV Bharat / state

ವಲಸಿಗ ಸಚಿವರ ಖಾತೆ ಬದಲಾವಣೆಗೆ ಸಚಿವ ಸುಧಾಕರ್ ಅಸಮಾಧಾನ - Sudhakar unhappy about portfolio changes

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಖಾತೆಯನ್ನು ಯಾರಿಗೆ ಬೇಕಾದರೂ ಕೊಡಲಿ. ಆದರೆ, ಒಬ್ಬರಿಗೆ ಕೊಡಿ ಅನ್ನೋ‌ದು ನನ್ನ ಮನವಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

sudhakar-unhappy-about-portfolio-changes
ಸಚಿವ ಸುಧಾಕರ್
author img

By

Published : Jan 22, 2021, 3:39 PM IST

ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದ ನಂತರ ಮೌನಕ್ಕೆ ಶರಣಾಗಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಕಡೆಗೂ ಮೌನ ಮುರಿದಿದ್ದು, ರಾಜಕೀಯ ಸೂಸೈಡ್ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ ಮೂರರಷ್ಟು ಮತ ಪಡೆದಿರಲಿಲ್ಲ. ಅಂಥದ್ರಲ್ಲಿ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೀನಿ ಅನ್ನೋದು ಗೊತ್ತಿದೆ ಎಂದು ವಲಸಿಗ ಸಚಿವರ ಖಾತೆ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಖಾತೆ ಯಾರಿಗೆ ಬೇಕಾದರೂ ಕೊಡಲಿ. ಆದರೆ, ಒಬ್ಬರಿಗೆ ಕೊಡಿ ಅನ್ನೋ‌ದು ನನ್ನ ಮನವಿ. ವೈದ್ಯಕೀಯ ಶಿಕ್ಷಣ ಒಂದು ವಿಶೇಷ ಸಬ್ಜೆಕ್ಟ್. ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆ ಒಂದಕ್ಕೊಂದು ಪೂರಕವಾದುದು. ಈಗ ಖಾತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ ಸಾಧ್ಯತೆ ಇದೆ. ನನ್ನ ಅಸಮಾಧಾನ ಮುಖ್ಯವಲ್ಲ, ಈ ನಿರ್ಧಾರ ಲಸಿಕೆ ಹಂಚಿಕೆಗೆ ಗೊಂದಲ ಉಂಟಾಗಬಾರದು ಅನ್ನೋದಷ್ಟೇ ನನ್ನ ಉದ್ದೇಶ ಎಂದರು.

ಗೋಪಾಲಯ್ಯ, ನಾರಾಯಣಗೌಡರು, ಎಂಟಿಬಿ ನಾಗರಾಜ್‌ಗೆ ಅನ್ಯಾಯ ಆಗಿದೆ. ಗೋಪಾಲಯ್ಯ ಅವರ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಎಂಟಿಬಿ ಅವರ ರಕ್ಷಣೆ ನಮ್ಮ ಕರ್ತವ್ಯ. ಈಗ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಮಗೆ ಪಾರ್ಟಿ ಡಿಸಿಪ್ಲೀನ್ ಅತ್ಯಂತ ಮುಖ್ಯವಾದದು. ಇಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಮುಖ್ಯವಲ್ಲ ಎಂದು ಅಸಮಾಧಾನ ಬಹಿರಂಗಪಡಿಸಿದರು.

ನಾನು ಕಂದಾಯ ಸಚಿವ ಆರ್. ಅಶೋಕ್ ಜೊತೆ ಮಾತಾಡಿಲ್ಲ. ಗೃಹ ಸಚಿವ ಬೊಮ್ಮಾಯಿ ಜೊತೆಗೆ ಮಾತನಾಡಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ ಮೂರರಷ್ಟು ಮತ ಪಡೆದಿರಲಿಲ್ಲ. ಅಂಥದ್ದರಲ್ಲಿ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೀನಿ ಎಂದು ನನಗೆ ಗೊತ್ತಿದೆ. ನಾವು ರಾಜಕೀಯ ಸೂಸೈಡ್ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ. ಅದರಲ್ಲೂ ಎಂಟಿಬಿ ನಾಗರಾಜ್ ತಮ್ಮ ಬಳಿ ಇದ್ದ ವಸತಿ ಖಾತೆ ಬಿಟ್ಟು ಬಂದರು. ಆದ್ರೀಗ ಅವರಿಗೆ ಖಾತೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಆರೋಗ್ಯ,ವೈದ್ಯಕೀಯ ಎರಡು ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂದು ಸಿಎಂ ಗೆ ಮನವಿ ಮಾಡುತ್ತೇನೆ.
ನನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ, ಎರಡೂ ಖಾತೆ ಒಬ್ಬರ ಬಳಿ ಇರುವಂತೆ ಮಾಡುವ ಕುರಿತು ಸಿಎಂ ಬಳಿ ಚರ್ಚೆ ಮಾಡುತ್ತೇನೆ ಎಂದರು.

ನನಗೆ ಬೇರೆ ಬೇರೆ ಕೆಲಸಗಳು ಇದ್ದವು. ಹೀಗಾಗಿ, ಕ್ಯಾಬಿನೆಟ್ ಗೆ ಹೋಗಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಚಿವ ಸಂಪುಟ ಸಭೆಗೆ ಗೈರಾದ ಕುರಿತು ಸ್ಪಷ್ಟೀಕರಣ ನೀಡಿದರು.

ಕೊರೊನಾ ಲಸಿಕೆ ಪಡೆದ ಯಾರೂ ರಾಜ್ಯದಲ್ಲಿ ಮೃತಪಟ್ಟಿಲ್ಲ:

ಕಳೆದ 5 ದಿನದಿಂದ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ. ಇಲ್ಲಿಯವರೆಗೆ 1,38,656 ಜನರಿಗೆ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ 1,36,882, ಜನರಿಗೆ ನೀಡಲಾಗಿದೆ. ಹಾಗೂ ಕೋವ್ಯಾಕ್ಸಿನ್ 1774 ಜನರಿಗೆ ನೀಡಲಾಗಿದೆ. ಇದರಲ್ಲಿ ಶೇ.2 ರಿಂದ 3.5ಜನರಿಗೆ ಸ್ವಲ್ಪ ಅಡ್ಡ ಪರಿಣಾಮ ಆಗಿದೆ. ಅರ್ಧ ದಿನದಲ್ಲಿ ಅದು ನಿವಾರಣೆಯಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಲಸಿಕೆ ಪಡೆದು ಯಾರೂ ಮರಣ ಹೊಂದಿಲ್ಲ ಎಂದು‌ ಸ್ಪಷ್ಟಪಡಿಸಿದರು.

ಇಲ್ಲಿಯವರೆಗೆ ಲಸಿಕೆ ಪಡೆಯಲು ನೊಂದಣಿಯಾಗಿರುವವರ ಸಂಖ್ಯೆ 8,47,908 ಆಗಿದ್ದು, ಕೊವ್ಯಾಕ್ಸಿನ್ ನ 1,46,240 ಡೋಸ್ ಇಂದು ರಾಜ್ಯಕ್ಕೆ ಬರಲಿದೆ. ಲಸಿಕೆ ಹಾಕಲು 909 ಸೈಟ್ ಗುರುತಿಸಲಾಗಿದೆ. ಇಂದು ಕೂಡ ಲಸಿಕೆ ಕೊಡಲಾಗುತ್ತಿದೆ. ಲಸಿಕೆಯಿಂದ ಹೆದರಬೇಡಿ, ಕೋವಿಡ್ ಗೆ ಹೆದರಬೇಕು. ತಪ್ಪು ಮಾಹಿತಿಗೆ ಕಿವಿಗೊಡಬೇಡಿ, ವ್ಯಾಕ್ಸಿನ್ ಗೆ ಭಯ ಬೀಳಬೇಡಿ, ತಾವೆಲ್ಲ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.

2ನೇ ಅಲೆ ಬರುವ ಮುನ್ನವೇ ಸುರಕ್ಷಿತವಾಗಿರಿ. 2ನೇ ಹಂತದ ಲಸಿಕೆ ಕೂಡ ಆದಷ್ಟು ಬೇಗ ರಾಜ್ಯಕ್ಕೆ ಬರಲಿದೆ. ಹೀಗಾಗಿ, ದೊಡ್ಡ ಸಿದ್ದತೆಗಳು ಆಗಬೇಕಿದೆ. ಎರಡು ಕೋಟಿ ಜನರಿಗೆ 2ನೇ ಹಂತದಲ್ಲಿ ಲಸಿಕೆ ನೀಡಬೇಕಾಗಿದೆ ಎಂದರು.

ಇದನ್ನೂ ಓದಿ: ಬಿಟ್ಟು ಹೋದವರ ರಾಜಕೀಯ ಸಮಾಧಿ ಆಗಲಿದೆ ಎಂದು ಹೇಳಿದ್ದ ಮಾತು ನಿಜವಾಗಿದೆ: ಡಿಕೆಶಿ

ಹುಣಸೋಡು ಸ್ಫೋಟ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ಇದೊಂದು ದುರದೃಷ್ಟಕರ ಘಟನೆ. ಈ ಘಟನೆಯನ್ನು ಗಣಿ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣವಾದವರಿಗೆ ಸೂಕ್ತವಾದ ಶಿಕ್ಷೆ ಆಗಬೇಕು. ಕೆಲ ಜಿಲ್ಲೆಗಳಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡೊದಿದೆ. ಜೊತೆಗೆ ಹೆಚ್ಚು ಶೇಖರಣೆ ಮಾಡಲಾಗುತ್ತಿದೆ. ನಿಯಮ ಗಾಳಿಗೆ ತೂರಿ ಕ್ರಷರ್ ಕೆಲಸಗಳು ನಡೆಯುತ್ತಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ನನ್ನ ಜಿಲ್ಲೆಯಲ್ಲೂ ಕೂಡಾ ಈ ಕ್ರಷರ್ ಕೆಲಸ ನಡೆಯುತ್ತಿದೆ. ಪೊಲೀಸರು ಆಗಾಗ್ಗೆ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.