ETV Bharat / state

ಎಫ್‌ಬಿನಲ್ಲಿ ಮೆಡಿಕಲ್‌ ಸೀಟ್‌ ಬ್ಲಾಕಿಂಗ್ ಬಗ್ಗೆ ಶಂಕರ್ ಬಿದರಿ ಆರೋಪ.. ಸಚಿವ ಡಾ. ಸುಧಾಕರ್​ ಪ್ರತಿಕ್ರಿಯೆ - minister sudhakar latest pressmeet

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಮಾಡಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಸೀಟ್ ಬ್ಲಾಕಿಂಗ್ ಆರೋಪ ಕುರಿತು ಸಚಿವ ಕೆ ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

sudhakar reaction on shankar bidari alligations
ಸಚಿವ ಡಾ.ಕೆ.ಸುಧಾಕರ್​​
author img

By

Published : Feb 24, 2020, 3:02 PM IST

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಸೀಟ್ ಬ್ಲಾಕಿಂಗ್‌ನಿಂದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ವಿಚಾರವಾಗಿ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಯವರು ಕೆಲದಿನಗಳ ಹಿಂದೆ ಫೇಸ್‌ಬುಕ್‌ ಮೂಲಕ‌ ಆರೋಪ ಮಾಡಿದ್ದರು.

‌ಈ ಸಂಬಂಧ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್, ಶಂಕರ್ ಬಿದರಿ ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದವರು. ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುವ ಬದಲು ನನ್ನ ಬಳಿ ದೂರು ಕೊಡಬಹುದಿತ್ತು. ಸಾಮಾಜಿಕ ಜಾಲತಾಣದಲ್ಲಿ ಯಾರು ಬೇಕಾದರೂ ಸುಲಭವಾಗಿ ಆರೋಪ ಮಾಡಬಹುದು. ಶಂಕರ್ ಬಿದರಿಯವರು ನನಗೆ ಇನ್ನೂ ದೂರು ಕೊಟ್ಟಿಲ್ಲ.

ಸೀಟ್ ಬ್ಲಾಕಿಂಗ್‌ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ..​​

ಅವರು ಮಾಡಿದ ಆರೋಪ ಸಂಬಂಧ ದಾಖಲೆಗಳನ್ನು ಇನ್ನೂ ನನಗೆ ತಂದು ಕೊಟ್ಟಿಲ್ಲ. ದಾಖಲೆ ತಂದು ಕೊಟ್ಟರೆ ಅದರ ಸಂಬಂಧ ಪರಿಶೀಲನೆ ಮಾಡುತ್ತೇನೆ ಎಂದರು. ಬಿದರಿಯವರು ನನಗೆ ದೂರು ಕೊಟ್ಟಿದ್ರೆ ಸುಲಭವಿತ್ತು. ಅವರು ದೂರು ಕೊಟ್ಟ ಬಳಿಕ ಅದರಲ್ಲಿ ನಿಜಾಂಶವಿದ್ದರೆ ತನಿಖೆಗೆ ಒಳಪಡಿಸುತ್ತೇನೆ ಅಂತಾ ಹೇಳಿದರು.

ಇದೀಗ ಸಚಿವ ಸುಧಾಕರ್ ಸೀಟ್ ಬ್ಲಾಕಿಂಗ್ ಅಕ್ರಮ ಆರೋಪದಲ್ಲಿ ನಿರ್ಲಕ್ಷ್ಯದ ಧೋರಣೆ ತಾಳಿದ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಬಿದರಿ ಆರೋಪ ಮಾಡಿ 12 ದಿನಗಳಾದರೂ ಸುಮ್ಮನಿರುವ ವೈದ್ಯಕೀಯ ಶಿಕ್ಷಣ ಸಚಿವರ ನಡೆ ಶಂಕರ್ ಬಿದರಿಯವರು ಮಾಡಿದ್ದ ಆರೋಪವನ್ನ ಹಗುರಾಗಿ ತಗೊಂಡ್ರಾ ಅನ್ನೋ ಅನುಮಾನವನ್ನೂ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.