ETV Bharat / state

ಮತದಾನ ಮಾಡಿದ ಚಂದನವನದ ಸ್ಟಾರ್ಸ್‌.. ಸರತಿಯಲ್ಲಿ ನಿಂತು ಸುದೀಪ್​, ಪ್ರೇಮ್, ದುನಿಯಾ ವಿಜಯ್​ ಹಕ್ಕು ಚಲಾವಣೆ​​​​​​​​​​​​​​​​​​​​​​​​​​​​​​​​​​​​​ - undefined

ಇಂದು ಹಾಗೂ ಏಪ್ರಿಲ್ 23 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೆಲೆಬ್ರಿಟಿಗಳೂ ಕೂಡಾ ಮತಗಟ್ಟೆಗೆ ತೆರಳಿ ಸಾಲಿನಲ್ಲಿ ನಿಂತು ವೋಟು ಮಾಡುತ್ತಿದ್ದಾರೆ.

ಸುದೀಪ್, ವಿಜಯ್, ಪ್ರೇಮ್
author img

By

Published : Apr 18, 2019, 12:17 PM IST

ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ ಜೊತೆ ಮತಕೇಂದ್ರಕ್ಕೆ ತೆರಳಿ ಮತ ಚಲಾಯಿಸದರು. ಯಾರಿಗೆ ಎಷ್ಟೇ ಕೆಲಸವಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ಬಂದು ಮತ ಚಲಾಯಿಸಿ. ನಮಗೆ ಸಿಕ್ಕಿರುವ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಮತ ಚಲಾಯಿಸಿದ ಸುದೀಪ್, ಪ್ರೇಮ್​, ವಿಜಯ್​

ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಪತ್ನಿ ಜ್ಯೋತಿಯೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ. ಇಂದು ಪ್ರೇಮ್ ಅವರ ಹುಟ್ಟುಹಬ್ಬ ಕೂಡಾ. ಮತ ಚಲಾಯಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೇಮ್​​​, ಇದು ಪ್ರಜಾಪ್ರಭುತ್ವ, ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸುವ ಹಕ್ಕು ನಮಗಿದೆ. ಆದ್ದರಿಂದ ಎಲ್ಲರೂ ತಪ್ಪದೆ ಬಂದು ತಮಗೆ ಸರಿ ಎನಿಸಿದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದರು.

ಈ ಬಾರಿ ಅಂಬರೀಶ್ ನಮ್ಮ ಜೊತೆಗೆ ಇಲ್ಲ, ಅಲ್ಲದೆ ಜನರು ನನ್ನ ಹುಟ್ಟುಹಬ್ಬ ಆಚರಿಸಲು ಬರುವ ಕಾರಣದಿಂದ ಮತ ಚಲಾಯಿಸುವುದು ಮಿಸ್ ಆಗುವುದು ಬೇಡ. ಆದ ಕಾರಣ ನನ್ನ ಅಭಿಮಾನಿಗಳಿಗೆ ಈ ಬಾರಿ ನಾನು ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ ಎಂದು ಮೊದಲೇ ತಿಳಿಸಿದ್ದೆ. ನನ್ನ ಹುಟ್ಟು ಹಬ್ಬಕ್ಕಿಂತ ಚುನಾವಣೆ ಮುಖ್ಯ ಎಂದರು.

ದುನಿಯಾ ವಿಜಯ್ ಕೂಡಾ ಇಂದು ಮತ ಚಲಾಯಿಸಿದ್ದಾರೆ. ಮತದಾನ ನಮ್ಮ ಹಕ್ಕು. 5 ವರ್ಷಗಳಿಗೊಮ್ಮೆ ನಮಗೆ ಸಿಗುವ ಈ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳದೆ ಬಂದು ಮತ ಚಲಾಯಿಸಿ ಎಂದಿದ್ದಾರೆ.

Intro:Body:

prem sudeep duniya vijay

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.