ETV Bharat / state

ಸೈಬರ್​​ ದಾಳಿಗೆ ವಿದ್ಯಾರ್ಥಿಗಳು ಬಲಿ: ಅಶ್ಲೀಲವಾಗಿ ಎಡಿಟ್ ಮಾಡಿ ಪೋರ್ನ್ ಸೈಟ್‌ಗಳಿಗೆ ಅಪ್ಲೋಡ್

ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ತೆಗೆದಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿರುವುದನ್ನೇ ಬಂಡವಾಳವಾಗಿಟ್ಟುಕೊಂಡ ಸೈಬರ್ ಖದೀಮರು ಇವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋರ್ನ್ ವೆಬ್ ಸೈಟ್​ಗೆ ಅಪ್ಲೋಡ್ ಮಾಡಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೈಬರ್ ಠಾಣೆಯಲ್ಲಿ ದೂರು
ಸೈಬರ್ ಠಾಣೆಯಲ್ಲಿ ದೂರು
author img

By

Published : Jul 28, 2020, 10:48 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಜಾಗೃತರಾಗಿರಬೇಕು ಎಂದು ನಗರ ಪೊಲೀಸ್ ಆಯುಕ್ತರು ಈ ಹಿಂದೆ ಮುನ್ಸೂಚನೆ ನೀಡಿದ್ರು‌. ಇದೀಗ ನಗರ ಆಯುಕ್ತರ ಮಾತಿನಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೇಚೆಗೆ ಸಿಲುಕಿದ್ದಾರೆ‌.

ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ತೆಗೆದಿರುವ ಫೋಟೋಗಳನ್ನ ಇನ್​ಸ್ಟಾಗ್ರಾಂ, ಫೇಸ್‌ಬುಕ್​ನಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಸೈಬರ್ ಖದೀಮರು ಅಶ್ಲೀಲವಾಗಿ ಎಡಿಟ್ ಮಾಡಿ ಪೋರ್ನ್ ವೆಬ್ ಸೈಟ್​ಗಳಿಗೆ ಅಪ್ಲೋಡ್ ಮಾಡಿದ್ದಾರೆ.

ತನ್ನ ಸಹಪಾಠಿಯ ಈ ರೀತಿಯ ಫೋಟೋ ನೋಡಿದ ವಿದ್ಯಾರ್ಥಿಯೊಬ್ಬ ಬೆಚ್ಚಿ ಬಿದ್ದಿದ್ದ. ತಕ್ಷಣ ಇತರೆ ಸಹಪಾಠಿಗಳಿಗೆ ಮತ್ತು ತನ್ನ ಕಾಲೇಜು ಆಡಳಿತ ಮಂಡಳಿಯವರಿಗೆ ಈ ವಿಚಾರ ತಿಳಿಸಿದ್ದಾನೆ. ಸದ್ಯ ಈ ಬಗ್ಗೆ ನಗರ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‌. ಸೈಬರ್ ಖದೀಮರು ಕೊರೊನಾ ಟೈಮ್​ನಲ್ಲಿ ಹೆಚ್ಚಾಗಿ ತಮ್ಮ ಕೃತ್ಯವೆಸಗುತ್ತಿದ್ದು, ಇಂಥ ಪ್ರಕರಣಗಳನ್ನು ಬೇಧಿಸುವುದು ಪೊಲೀಸರಿಗೆ ಸವಾಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.