ETV Bharat / state

ರಾಜ್ಯಪಾಲರ ಸಭೆ ಬಳಿಕ ರಾಜ್ಯದಲ್ಲಿ ಕಠಿಣ ನಿಯಮ ಜಾರಿ: ಸಚಿವ ಆರ್.ಅಶೋಕ್

ರಾಜ್ಯಪಾಲರು ಇವತ್ತು ವರ್ಚುವಲ್ ಸಭೆ ಕರೆದಿದ್ದಾರೆ. ಸಿಎಂ, ವಿಪಕ್ಷ ನಾಯಕರು, ಅಧಿಕಾರಿಗಳು, ಸಚಿವರಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆ ಮುಗಿದ ಬಳಿಕ, ಖಂಡಿತ ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Strict Rules after meeting with Governor in Karnataka news
ಸಚಿವ ಆರ್.ಅಶೋಕ್
author img

By

Published : Apr 20, 2021, 12:49 PM IST

Updated : Apr 20, 2021, 4:58 PM IST

ಬೆಂಗಳೂರು: ರಾಜ್ಯಪಾಲರ ಜತೆ ಸಭೆ ಮುಗಿದ ಬಳಿಕ, ಖಂಡಿತವಾಗಿಯೂ ರಾಜ್ಯದಲ್ಲಿ ಟಫ್‌ ರೂಲ್ಸ್ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಇವತ್ತು ವರ್ಚುವಲ್ ಸಭೆ ಕರೆದಿದ್ದಾರೆ. ಸಿಎಂ, ವಿಪಕ್ಷ ನಾಯಕರು, ಅಧಿಕಾರಿಗಳು, ಸಚಿವರಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ರಾಜ್ಯದ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ಸೂಚನೆ‌ ನೀಡಿದೆ. ಕೋವಿಡ್ ನಿರ್ವಹಣೆಯಲ್ಲಿ ಗವರ್ನರ್ ಕೂಡ ಭಾಗಿಯಾಗಬೇಕು ಎಂದು ಕೇಂದ್ರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾಂಗ್ರೆಸ್​ನವರು ಯಾವುದೇ ಅರ್ಥ ಕಲ್ಪಿಸೋದು ಬೇಡ. ಎಲ್ಲಾ ರಾಜ್ಯಗಳಲ್ಲಿ ರಾಜ್ಯಪಾಲರು ಈ‌ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸಚಿವ ಆರ್.ಅಶೋಕ್

ಸಂಸದ ತೇಜಸ್ವಿಸೂರ್ಯ ಕೇಂದ್ರ ಸಚಿವರ ಜೊತೆ ಮಾತನಾಡಿದ್ದಾರೆ. ಎಲ್ಲೆಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನಿಗೆ ಅವಕಾಶವಿದೆಯೋ ಅದನ್ನು ಕೊಡಿಸಲಾಗುವುದು. ಸಿಲಿಂಡರ್ ಮೂಲಕವೇ ಆಗಬೇಕಾದ ಕಡೆಗೆ ಖಾಲಿ ಸಿಲಿಂಡರ್​ಗಳನ್ನು ವಿತರಿಸಿ, ಆ ಮೂಲಕವೂ ದಾಸ್ತಾನಿಗೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರ ಈ ನಿಟ್ಟಿನಸ್ಸಿ ಪೂರಕ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

Last Updated : Apr 20, 2021, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.