ETV Bharat / state

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಬೇಡ: ಬರ್ತಿದೆ ಜಿಪಿಎಸ್ ಆಧಾರಿತ 'ಸ್ಟಾಪ್‌ ಟೊಬ್ಯಾಕೊ' ಆ್ಯಪ್​ - ಈಟಿವಿ ಭಾರತ ಕನ್ನಡ

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಹಾಗೂ ಸೇವಿಸುವವರಿಗೆ ಕಡಿವಾಣ ಹಾಕಲು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

stop-tobacco-application-to-stop-smoking-in-public-places
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಿರುದ್ಧ ಕ್ರಮ ಕೈಗೊಳ್ಳಲು ಜಿಪಿಎಸ್ ಆಧಾರಿತ " ಸ್ಟಾಪ್‌ ಟೊಬ್ಯಾಕೊ "ಆ್ಯಪ್​
author img

By

Published : Dec 15, 2022, 10:18 PM IST

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ತಡೆಯಲು ಜಿಪಿಎಸ್ ಆಧಾರಿತ 'ಸ್ಟಾಪ್‌ ಟೊಬ್ಯಾಕೊ' ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ಕಾರ ಪ್ರಾರಂಭಿಸಲಿದೆ. ಶೀಘ್ರದಲ್ಲೇ ಆ್ಯಪ್ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರು ಹಾಗೂ ಸೇವಿಸುತ್ತಿರುವವರಿಗೆ ಕಡಿವಾಣ ಹಾಕಲು ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆ್ಯಪ್ ಜಿಪಿಎಸ್ ತಂತ್ರಜ್ಞಾನ ಆಧರಿಸಿದೆ. ಹೀಗಾಗಿ, ಫೋಟೋ ತೆಗೆದ ಸ್ಥಳ ನಿಖರವಾಗಿ ತಿಳಿಯಲಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಕೋಟ್ಟಾ ಕಾಯ್ದೆ ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುತ್ತಿರುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತದೆ. ಈ ಕಾರ್ಯಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಒಳಗೊಂಡ 7 ಸದಸ್ಯರ ತಂಡ ರಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೋಟ್ಟಾ ಕಾಯ್ದೆ-2003ರ ಸೆಕ್ಷನ್-4ರಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧಿಸಲಾಗಿದೆ. ಸೆಕ್ಷನ್-ಎ ಪ್ರಕಾರ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿರ್ಬಂಧವಾಗಿದೆ. ಸೆಕ್ಷನ್ 6-ಬಿ ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಮೀಟರ್ ಆವರಣದಲ್ಲಿ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ.

ಜಿಪಿಎಸ್ ಆಧಾರಿತ ಅಪ್ಲಿಕೇಶನ್: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಕಂಡು ಬಂದರೆ ಮೇಲ್ ಮೂಲಕ ದೂರು ನೀಡುವಂತಹ ವ್ಯವಸ್ಥೆ 2019ರಲ್ಲಿ ಪ್ರಾಯೋಗಿಕವಾಗಿ ಜಾರಿ ತರಲಾಗಿತ್ತು. ಕೋವಿಡ್ ಕಾರಣದಿಂದಾಗಿ ರಾಜ್ಯಾದ್ಯಂತ ಈ ಯೋಜನೆ ಅಷ್ಟಾಗಿ ಪರಿಚಯವಾಗಿಲ್ಲ. ಆದರೆ, ಇದೀಗ ಬಹುತೇಕ ಎಲ್ಲರೂ ಮೊಬೈಲ್ ಬಳಸುವುದರಿಂದ ಜಿಪಿಎಸ್ ಆಧಾರಿತ ಅಪ್ಲಿಕೇಶನ್ ನಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಫೋಟೋ ತೆಗೆದು ಅಪ್​ಲೋಡ್​ ಮಾಡಿದರೆ ಸಾಕು: ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ಧೂಮಪಾನ ನಿಯಮ ಉಲ್ಲಂಘನೆ ಆಗುತ್ತಿರುವ ಸಾರ್ವಜನಿಕ ಸ್ಥಳಗಳಾದ ಅಂಗಡಿ, ಬೇಕರಿ, ಹೋಟೆಲ್, ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನ ಮತ್ತಿತರ ಜನದಟ್ಟಣೆ ಸ್ಥಳಗಳಲ್ಲಿ ಫೋಟೋ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬಹುದು. ನಂತರ ದೂರುದಾರರ ಜಿಲ್ಲೆ ತಾಲೂಕು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಇದರಲ್ಲಿ ಆಯ್ಕೆ ಇರುತ್ತದೆ.

ನೀಡಿದ ದೂರಿನ ಫೋಟೋ ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ತಲುಪಿ, ಅದಾದ ನಂತರ ತಾಲೂಕು ತಂಬಾಕು ನಿಯಂತ್ರಣ ಘಟಕಕ್ಕೆ ರವಾನೆಯಾಗುತ್ತದೆ. ಆ್ಯಪ್ ಜಿಪಿಎಸ್ ಆಧಾರಿತವಾಗಿರುವುದರಿಂದ, ದೂರು ದಾಖಲಾಗಿರುವ ಸ್ಥಳವನ್ನು ನಕ್ಷೆಯಲ್ಲಿ ಹೈಲೈಟ್ ಮಾಡಲಾಗುತ್ತದೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಧಾವಿಸಿ, ದಂಡ ವಿಧಿಸುತ್ತಾರೆ.

ಇದನ್ನೂ ಓದಿ: ಪುರಿ ಸಮುದ್ರ ತಟದಲ್ಲಿ ಮಲಗಿರುವ 'ಧೂಮಪಾನಿ ಶವ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.