ETV Bharat / state

ಇಂದು ವಿಶ್ವ ಜನಸಂಖ್ಯಾ ದಿನ : ರಾಜ್ಯದ ಜನಸಂಖ್ಯೆಯ ಮಾಹಿತಿ ಇಲ್ಲಿದೆ.. - State Population Information

ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ರಾಜ್ಯ 2001 ರ ಅಂಕಿ ಅಂಶ ಹೋಲಿಕೆಯಲ್ಲಿ 2011ರ ಜನಗಣತಿಯಲ್ಲಿ -1.91 ಕ್ಷೀಣಿಸಿತ್ತು. ಅಕ್ಷರಸ್ಥರ ಪ್ರಮಾಣ ಪ್ರತಿ ದಶಕದಲ್ಲೂ ಏರಿಕೆ ಆಗುತ್ತಲೇ ಬರುತ್ತಿದ್ದು, ರಾಜ್ಯದಲ್ಲಿ 75.36% ಅಕ್ಷರಸ್ಥರು ಎಂದು ಹೇಳಿತ್ತು. 2018ರ ಮತದಾರರ ಪಟ್ಟಿಯಲ್ಲಿ 4.97 ಕೋಟಿ ಜನ ಇದ್ದರೆ, 2013ರ ಚುನಾವಣಾ ಸಮಯದಲ್ಲಿ 4.37 ಕೋಟಿ ಮತದಾರರು ಇದ್ದರು..

State Population Information
ಇಂದು ವಿಶ್ವ ಜನಸಂಖ್ಯಾ ದಿನ
author img

By

Published : Jul 11, 2020, 5:40 PM IST

ಬೆಂಗಳೂರು : ದೇಶದ 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 6.11 ಕೋಟಿ ಜನರು ಇದ್ದಾರೆ ಎಂದು ದಾಖಲೆಯಾಗಿತ್ತು. ಅದರಲ್ಲಿ 3,09,66,657 ಪುರುಷರು ಹಾಗೂ 3,01,28,640 ಮಹಿಳೆಯರು ಎಂದು ಹೇಳಲಾಗಿತ್ತು.

2001ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 5.29 ಕೋಟಿ ಜನರಿಂದ 2011ರ ಜನಗಣತಿಯ ವೇಳೆಗೆ 10 ವರ್ಷದ ಅಂತರದಲ್ಲಿ 82 ಲಕ್ಷ ಜನಸಂಖ್ಯೆ ಹೆಚ್ಚಳ ಆಗಿತ್ತು. ಮುಂಬರುವ 2021ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 7.05 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಜನಗಣತಿ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ವಿಶ್ವ ಜನಸಂಖ್ಯಾ ದಿನದಂದು 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ಮತದಾರರು, ಅಕ್ಷರಸ್ಥರು ಹಾಗೂ ಇನ್ನುಳಿದ ಮಾಹಿತಿಯನ್ನು ಒಮ್ಮೆ ಗಮನಿಸೋಣ.

2011, ರಾಜ್ಯದಲ್ಲಿ 30 ಜಿಲ್ಲೆಗಳು 176 ತಾಲೂಕು 29340 ಹಳ್ಳಿಗಳು, 347 ಪಟ್ಟಣಗಳಲ್ಲಿ ಜನಗಣತಿ ಮಾಡಲಾಯಿತು. 2011ರಲ್ಲಿ ರಾಮನಗರ ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ನೂತನ ಜಿಲ್ಲೆಯೆಂದು ಮಾನ್ಯತೆ ಪಡೆದಿತ್ತು. ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕ ಶೇ. 5.05 ಭಾಗವನ್ನು ಹೊಂದಿತ್ತು. ಹಾಗೂ ಜನಸಂಖ್ಯೆಯಲ್ಲಿ ರಾಜ್ಯ 9ನೇ ಸ್ಥಾನವನ್ನು ಪಡೆದಿತ್ತು. ವಿಶೇಷವೆಂದ್ರೆ 2001ರ ಜನಗಣತಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನವೇ ಇತ್ತು.

ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ರಾಜ್ಯ 2001 ರ ಅಂಕಿ ಅಂಶ ಹೋಲಿಕೆಯಲ್ಲಿ 2011ರ ಜನಗಣತಿಯಲ್ಲಿ -1.91 ಕ್ಷೀಣಿಸಿತ್ತು. ಅಕ್ಷರಸ್ಥರ ಪ್ರಮಾಣ ಪ್ರತಿ ದಶಕದಲ್ಲೂ ಏರಿಕೆ ಆಗುತ್ತಲೇ ಬರುತ್ತಿದ್ದು, ರಾಜ್ಯದಲ್ಲಿ 75.36% ಅಕ್ಷರಸ್ಥರು ಎಂದು ಹೇಳಿತ್ತು. 2018ರ ಮತದಾರರ ಪಟ್ಟಿಯಲ್ಲಿ 4.97 ಕೋಟಿ ಜನ ಇದ್ದರೆ, 2013ರ ಚುನಾವಣಾ ಸಮಯದಲ್ಲಿ 4.37 ಕೋಟಿ ಮತದಾರರು ಇದ್ದರು.

ಜನಗಣತಿ ಕ್ರಿಯಾಶೀಲ ಕಾನೂನು, ಸರ್ಕಾರದ ಯೋಜನೆ ರೂಪಿಸುವುದಕ್ಕೆ ಬುನಾದಿ ಆಗಿರುತ್ತದೆ. ವಿವಿಧ ಪ್ರಶ್ನೆಗಳು ಹಾಗೂ ಉತ್ತರ ಕೊಡುವ ಜನಗಣತಿ ಪ್ರಸ್ತುತ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗಳಿಗೆ ಯಾವರೀತಿ ಯೋಜನೆಗಳು ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡುತ್ತದೆ.

ಹತ್ತು ವರ್ಷಕ್ಕೆ ಒಮ್ಮೆ ನಡೆಯುವ ಜನಗಣತಿಯಲ್ಲಿ ಮರಣ ಪ್ರಮಾಣ, ಜನನ ಪ್ರಮಾಣ, ಲಿಂಗ ಅನುಪಾತ, ಒಟ್ಟು ಜನಸಂಖ್ಯೆ, ನಗರಗಳ ಜನಸಂಖ್ಯೆ ಇತರೆ ಜಿಲ್ಲೆಗಳ ಜನಸಂಖ್ಯೆ ಸೇರಿದಂತೆ ಹತ್ತು ಹಲವು ವಿಷಯಗಳು ಅಂಕಿಅಂಶ ಸಮೇತ ಜನಗಣತಿಯಲ್ಲಿ ದಾಖಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.