ಬೆಂಗಳೂರು: ವಿಧಾನಪರಿಷತ್ ಕಾರ್ಯಕಲಾಪ ಸಲಹಾ ಸಮಿತಿ ಹಾಗು ಸಭಾಪತಿಗಳ ಪ್ಯಾನಲ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಪುನಾರಚಿಸಿದ್ದಾರೆ.
ಸಭಾಪತಿ ನೇತೃತ್ವದ ಕಲಾಪ ಸಲಹಾ ಸಮಿತಿಗೆ ಉಪಸಭಾಪತಿ ಪ್ರಾಣೇಶ್, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ, ಹಿರಿಯ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ, ಬಿ.ಕೆ.ಹರಿಪ್ರಸಾದ್, ಶಶಿಲ್ ನಮೋಷಿ, ಮರಿತಿಬ್ಬೇಗೌಡರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಿಎಂ ಯಡಿಯೂರಪ್ಪ ಹಾಗು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ವಿಶೇಷ ಆಹ್ವಾನಿತರಾಗಿರಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಭೂ ಒತ್ತುವರಿ; ಸುಪ್ರೀಂನಲ್ಲಿ ಅಫಿಡವಿಟ್ ಹಾಕಿ ಮುಂದಿನ ಕ್ರಮ: ಅಶೋಕ್
ಅದೇ ರೀತಿ ಸದನದಲ್ಲಿ ಸಭಾಪತಿ ಹಾಗು ಉಪ ಸಭಾಪತಿ ಇಲ್ಲದ ವೇಳೆ ಕೆ.ಸಿ.ಕೊಂಡಯ್ಯ, ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ ಹಾಗು ಪುಟ್ಟಣ್ಣ ಅವರು ಕಲಾಪ ನಡೆಸಿಕೊಡಲಿದ್ದಾರೆ ಎಂದು ಸಭಾಪತಿಗಳು ಸದನದಲ್ಲಿ ಪ್ರಕಟಿಸಿದರು.