ಬೆಂಗಳೂರು: ಕೋವಿಡ್ ಸಂದಿಗ್ಧತೆಯ ನಡುವೆಯೂ ರಾಜ್ಯದಲ್ಲಿ ಉನ್ನತ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ. ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು ಮತ್ತು ಇಲಾಖೆ:
ಅಜಯ್ ನಾಗಭೂಷಣ್ - ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ
ಸಿ.ಶಿಖಾ - ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ
ಸಲ್ಮಾ ಫಾಹಿಮಾ - ಹೆಚ್ಚುವರಿ ಕಾರ್ಯದರ್ಶಿ, ಮೂಲ ಸೌಕರ್ಯ ಇಲಾಖೆ
ಕಣಗವಲ್ಲಿ- ಪರೀಕ್ಷಾ ನಿಯಂತ್ರಕರು, ಕೆಪಿಎಸ್ಸಿ
ರಘುನಂದನ ಮೂರ್ತಿ- ಆಯುಕ್ತರು (ಜಾರಿ) ವಾಣಿಜ್ಯ ತೆರಿಗೆ ಇಲಾಖೆ
ಅರ್ಚನಾ ಎಂ, ಎಸ್ - ಸದಸ್ಯರು. ಕೆಎಟಿ
ರಮ್ಯಾ ಎಸ್- ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ