ETV Bharat / state

ಮೈತ್ರಿ ಸರ್ಕಾರದಲ್ಲಿ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಅನುದಾನಕ್ಕೆ ಕತ್ತರಿ ಹಾಕಲು ಚಿಂತನೆ? - State government thinking about to cut the grants

ಈ ಹಿಂದೆ ಕಾಂಗ್ರೆಸ್​ ಮತ್ತು ಜೆಡಿಎಸ್​​ ಮೈತ್ರಿ ಸರ್ಕಾರ ಆಡಳಿತ ನಡೆಸಿದ್ದು, ತಮಗೆ ಬೇಕಾದ ಶಾಸಕರಿಗೆ ಹಾಗೂ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಅಧಿಕ ಅನುದಾನ ನೀಡಲಾಗಿತ್ತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರ ಇದಕ್ಕೆ ಕಡಿವಾಣ ಹಾಕಿದೆ.

ಹೆಚ್ಚುವರಿಯಾಗಿ ನೀಡಿದ್ದ ಅನುದಾನಕ್ಕೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಚಿಂತನೆ
author img

By

Published : Sep 10, 2019, 6:37 PM IST

Updated : Sep 10, 2019, 6:55 PM IST

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್​​ನ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಈಗಾಗಲೇ ಉನ್ನತಮಟ್ಟದ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ ಎಂಬ ಅಂಶವನ್ನು ಮುಂದಿಟ್ಟು, ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ವಿವರವನ್ನು ತರಿಸಿಕೊಂಡಿದ್ದಾರೆ. ಹೀಗೆ ಅನುದಾನ ಮಂಜೂರಾದ ಕ್ಷೇತ್ರಗಳ ಪೈಕಿ ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ ಎಂಬ ಅಂಶವನ್ನು ವಿಶೇಷವಾಗಿ ಗಮನಿಸುತ್ತಿರುವ ಸಿಎಂ ಯಡಿಯೂರಪ್ಪ, ಮೊದಲು ಈ ರೀತಿ ಹೆಚ್ಚುವರಿ ಅನುದಾನ ಪಡೆದ ಕ್ಷೇತ್ರಗಳಿಗೆ ಹಣ ಕಡಿತ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಕೆಲ ಶಾಸಕರ ಕ್ಷೇತ್ರಗಳಿಗೆ ಹಲವು ಕ್ಷೇತ್ರಗಳಿಗಿಂತ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಅನುದಾನ ನೀಡಲಾಗಿದ್ದು, ಈ ಹೆಚ್ಚುವರಿ ಅನುದಾನದ ಬಾಬ್ತನ್ನು ಕಟ್ ಮಾಡಲು ನಿರ್ಧರಿಸಲಾಗಿದೆ. ಹೀಗೆ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ? ಮತ್ತು ಅದನ್ನು ಹೇಗೆ ಕಡಿತ ಮಾಡಬೇಕು? ಎಂಬ ಕುರಿತು ಅವರು ಲೆಕ್ಕ ಹಾಕುತ್ತಿರುವುದರಿಂದ ಉಭಯ ಪಕ್ಷಗಳ ಕೆಲವು ಶಾಸಕರು ಬಿಜೆಪಿಯೆಡೆ ದೌಡಾಯಿಸಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಹೆಚ್ಚುವರಿ ಅನುದಾನ ಸಿಕ್ಕಿರುವುದರಿಂದ ಅಗತ್ಯ ಕೆಲಸ ಮಾಡಿಸಬಹುದು. ಆ ಮೂಲಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ ಎಂದು ಜನರಿಗೆ ತೋರಿಸಬಹುದು. ಪರಿಣಾಮಕಾರಿಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ತಮಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಆ ಶಾಸಕರ ಯೋಚನೆಯಾಗಿತ್ತು. ಆದರೆ ಹೀಗೆ ಲಭ್ಯವಾದ ಹೆಚ್ಚುವರಿ ಅನುದಾನ ಕಟ್ ಆಗುವುದಷ್ಟೇ ಅಲ್ಲದೆ, ಉಳಿದ ಅನುದಾನದ ಹಣದಲ್ಲೂ ಕಡಿತವಾದರೆ ಮುಂದಿನ ದಿನಗಳು ಕಷ್ಟವಾಗುತ್ತವೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಉಭಯ ಪಕ್ಷಗಳ ಶಾಸಕರು, ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Intro:ಬೆಂಗಳೂರು : ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನನ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.Body:ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ ಎಂಬ ಅಂಶವನ್ನು ಮುಂದಿಟ್ಟು ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ವಿವರವನ್ನು ತರಿಸಿಕೊಂಡಿದ್ದಾರೆ. ಹೀಗೆ ಅನುದಾನ ಮಂಜೂರಾದ ಕ್ಷೇತ್ರಗಳ ಪೈಕಿ ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ ಎಂಬ ಅಂಶವನ್ನು ವಿಶೇಷವಾಗಿ ಗಮನಿಸುತ್ತಿರುವ ಸಿಎಂ ಯಡಿಯೂರಪ್ಪ, ಮೊದಲು ಈ ರೀತಿ ಹೆಚ್ಚುವರಿ ಅನುದಾನ ಪಡೆದ ಕ್ಷೇತ್ರಗಳಿಗೆ ಹಣ ಕಡಿತ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಕೆಲ ಶಾಸಕರ ಕ್ಷೇತ್ರಗಳಿಗೆ ಹಲವು ಕ್ಷೇತ್ರಗಳಿಗಿಂತ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಅನುದಾನ ನೀಡಲಾಗಿದ್ದು, ಈ ಹೆಚ್ಚುವರಿ ಅನುದಾನದ ಬಾಬ್ತನ್ನು ಕಟ್ ಮಾಡಲು ನಿರ್ಧರಿಸಲಾಗಿದೆ. ಹೀಗೆ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ? ಮತ್ತು ಅದನ್ನು ಕಡಿತ ಮಾಡಬೇಕು? ಎಂಬ ಕುರಿತು ಅವರು ಲೆಕ್ಕ ಹಾಕುತ್ತಿರುವುದರಿಂದ ಉಭಯ ಪಕ್ಷಗಳ ಹಲವು ಶಾಸಕರು ಬಿಜೆಪಿಯೆಡೆ ದೌಡಾಯಿಸಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹೆಚ್ಚುವರಿ ಅನುದಾನ ಸಿಕ್ಕಿರುವುದರಿಂದ ಅಗತ್ಯದ ಕೆಲಸ ಮಾಡಿಸಬಹುದು.ಆ ಮೂಲಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ ಎಂದು ಜನರಿಗೆ ತೋರಿಸಬಹುದು. ಪರಿಣಾಮವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಅದು ತಮಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಆ ಶಾಸಕರ ಯೋಚನೆಯಾಗಿತ್ತು. ಆದರೆ ಹೀಗೆ ಲಭ್ಯವಾದ ಹೆಚ್ಚುವರಿ ಅನುದಾನ ಕಟ್ ಆಗುವುದಷ್ಟೇ ಅಲ್ಲದೆ, ಉಳಿದ ಅನುದಾನದ ಹಣದಲ್ಲೂ ಕಡಿತವಾದರೆ ಮುಂದಿನ ದಿನಗಳು ಕಷ್ಟವಾಗುತ್ತವೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಉಭಯ ಪಕ್ಷಗಳ ಶಾಸಕರು ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Conclusion:
Last Updated : Sep 10, 2019, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.