ಬೆಂಗಳೂರು : ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳನ್ನು ವಿವಿಧ ಜಿಲ್ಲೆಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಅಪರಾಧ ವಿಭಾಗದ ಎಸ್ ಪಿ ವರ್ತಿಕಾರನ್ನು ಉತ್ತರಕನ್ನಡದ ಎಸ್‌ಪಿಯಾಗಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ ಜಿ.ಸಂಗೀತಾ ಅವರನ್ನು ಚಾಮರಾಜನಗರ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.
ಉಳಿದಂತೆ ಆಂತರಿಕ ಕಾರ್ಯದರ್ಶಿ ವಿಭಾಗದ ಎಸ್‌ಪಿ ಆನಂದ್‌ಕುಮಾರ್ ಅವರನ್ನು ವಿಜಯಪುರ ಎಸ್‌ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ.
ಓದಿ: ಶಾಲೆ ಆಸ್ತಿ ಕಬಳಿಕೆ ಆರೋಪ : ಶಿವಗಂಗಾ ಮಠಾಧೀಶರ ಹಾಜರಿಗೆ ಕೋರ್ಟ್ ನಿರ್ದೇಶನ