ETV Bharat / state

ಆರ್ಥಿಕ ಸಂಕಷ್ಟ: ರಾಜ್ಯ ಸರ್ಕಾರ ಈವರೆಗೆ ಆರ್​ಬಿಐ ಮೂಲಕ ಮಾಡಿದ ಸಾಲ ಎಷ್ಟು ಗೊತ್ತಾ?

ಆರ್​​ಬಿಐ ಅಂಕಿಅಂಶದ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಜುಲೈವರೆಗೆ 12,000 ಕೋಟಿ ರೂ. ಸಾಲ ಪಡೆದಿದೆ. ನಬಾರ್ಡ್​​ನಿಂದ 52.29 ಕೋಟಿ ರೂ.‌ ಸಾಲ ಪಡೆಯಲಾಗಿದೆ. ರಾಜ್ಯ ಸರ್ಕಾರ ಆರ್​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ (ಎಸ್​ಡಿಎಲ್)ವನ್ನು ಎತ್ತುವಳಿ ಮಾಡುತ್ತಿದೆ.

state-government-got-loan-from-rbi
ರಾಜ್ಯ ಸರ್ಕಾರ
author img

By

Published : Oct 11, 2020, 3:13 AM IST

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ರಾಜ್ಯವು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲದ ಮೊರೆ ಹೋಗಲು ನಿರ್ಧರಿಸಿದೆ. ಈವರೆಗೆ ರಾಜ್ಯ ಸರ್ಕಾರ ಮಾಡಿರುವ ಸಾಲದ ಸಮಗ್ರ ವರದಿ ಇಲ್ಲಿದೆ.

ಲಾಕ್‌ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ಗೊತ್ತಿರುವ ವಿಚಾರ. ಆದಾಯದ ಮೂಲಗಳೆಲ್ಲ ಬರಿದಾಗಿದ್ದು, ಬೊಕ್ಕಸ ಖಾಲಿ ಖಾಲಿಯಾಗಿದೆ. ಅನಿವಾರ್ಯ ಸ್ಥಿತಿಯಲ್ಲಿರುವ ಸರ್ಕಾರ 33 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಲು ನಿರ್ಧರಿಸಿದೆ.

state government got loan from RBI
ಸಾಲದ ಮಾಹಿತಿ

ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯವನ್ನು ಮಂಡಿಸಿದ್ದು 1,79,920 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೊರೊನಾ ಲಾಕ್‌ಡೌನ್ ಹಿನ್ನೆಲೆ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರೂ.ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ 65,920 ಕೋಟಿ ರೂ. ಹಣದ ಕೊರತೆ ಎದುರಾಗಲಿದೆ. ಕೊರೊನಾ ಸಂಕಷ್ಟದಿಂದಾಗಿ ಕೇಂದ್ರ ಸರ್ಕಾರವು ಶೇ.3ರಿಂದ 5ರವರೆಗೆ ಸಾಲ ಪಡೆಯಲು ಅವಕಾಶ ನೀಡಿದೆ. ಇದರಿಂದ 36,700 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಸರ್ಕಾರಕ್ಕೆ ಅವಕಾಶ ಇದ್ದು, ಸದ್ಯ 33,000 ಕೋಟಿ ರೂ. ಸಾಲ ಪಡೆಯಲು ಅಧಿವೇಶನದಲ್ಲೂ ಅನುಮೋದನೆ ಪಡೆಯಲಾಗಿದೆ.

state government got loan from RBI
ಸಾಲದ ಮಾಹಿತಿ

ಈವರೆಗೆ 31,000 ಕೋಟಿ ರೂ. ಸಾಲ:

ರಾಜ್ಯ ಸರ್ಕಾರ ಈ ಬಾರಿ ಸಾಲವನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಅಭಿವೃದ್ಧಿ ಕೆಲಸ ಹಾಗೂ ಸರ್ಕಾರಿ ನೌಕರರ ವೇತನಕ್ಕಾಗಿ ಸಾಲದ ಮೊರೆ ಹೋಗಲು ನಿರ್ಧರಿಸಿದೆ.

ಆರ್​​ಬಿಐ ಅಂಕಿಅಂಶದ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಜುಲೈವರೆಗೆ 12,000 ಕೋಟಿ ರೂ. ಸಾಲ ಪಡೆದಿದೆ. ನಬಾರ್ಡ್​​ನಿಂದ 52.29 ಕೋಟಿ ರೂ.‌ ಸಾಲ ಪಡೆಯಲಾಗಿದೆ. ರಾಜ್ಯ ಸರ್ಕಾರ ಆರ್​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್)ವನ್ನು ಎತ್ತುವಳಿ ಮಾಡುತ್ತಿದೆ.

state government got loan from RBI
ಸಾಲದ ಮಾಹಿತಿ

ಆಗಸ್ಟ್ ತಿಂಗಳಲ್ಲಿ ಸರ್ಕಾರ 7,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಆಗಸ್ಟ್ 25, ಆಗಸ್ಟ್ 18 ಹಾಗೂ ಆಗಸ್ಟ್ 11ಕ್ಕೆ ತಲಾ 2,000 ಕೋಟಿ ರೂ. ಎಸ್​​ಡಿಎಲ್​ನ್ನು ಎತ್ತುವಳಿ ಮಾಡಿದ್ದರೆ, ಆಗಸ್ಟ್ 04ರಂದು ರಾಜ್ಯ ಸರ್ಕಾರ 1,000 ಕೋಟಿ ರೂ. ಸಾಲ ಪಡೆದಿದೆ.

ಸೆಪ್ಟೆಂಬರ್​‌ನಲ್ಲಿ ರಾಜ್ಯ ಸರ್ಕಾರ ಒಟ್ಟು 10,000 ಕೋಟಿ ರೂ‌. ಸಾಲ ಎತ್ತುವಳಿ ಮಾಡಿದೆ. ಅದರಂತೆ ಸೆಪ್ಟೆಂಬರ್ 1, ಸೆ.08, ಸೆ.15, ಸೆ.22 ಹಾಗೂ ಸೆ.29ಕ್ಕೆ ತಲಾ 2,000 ಕೋಟಿ ರೂ.ನಂತೆ ಆರ್​​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲವನ್ನು ಎತ್ತುವಳಿ ಮಾಡಿದೆ.

ಅದೇ ರೀತಿ ಅಕ್ಟೋಬರ್ 6ರಂದು ಸರ್ಕಾರ 2,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲವನ್ನು ಎತ್ತುವಳಿ ಮಾಡಿದೆ. ಉಳಿದಂತೆ ಅಕ್ಟೋಬರ್​​ನಲ್ಲಿ ರಾಜ್ಯ ಸರ್ಕಾರ ಇನ್ನೂ 6,000 ಕೋಟಿ ರೂ. ಸಾಲವನ್ನು ಪಡೆಯಲು ಯೋಜಿಸಿದೆ. ಆ ಮೂಲಕ ಅಕ್ಟೋಬರ್ ನಲ್ಲಿ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.

ನವೆಂಬರ್​​ನಲ್ಲಿ ರಾಜ್ಯ ಸರ್ಕಾರ 8,000 ಕೋಟ ರೂ. ಸಾಲ ಎತ್ತುವಳಿ ಮಾಡಲು ನಿರ್ಧರಿಸಿದ್ದರೆ, ಡಿಸೆಂಬರ್​​ನಲ್ಲಿ ಒಟ್ಟು 10,000 ಕೋಟಿ ರೂ‌. ಸಾಲ ಪಡೆಯಲು ನಿರ್ಧರಿಸಿದೆ.

state government got loan from RBI
ಸಾಲದ ಮಾಹಿತಿ

ರಾಜ್ಯದ ಮೇಲಾಗುವ ಸಾಲದ‌ ಹೊರೆ ಏನು?:

ಜಿಎಸ್‌ಟಿ ಪರಿಹಾರ 11,324 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಮರುಪಾವತಿ ಭರವಸೆಯೊಂದಿಗೆ ಹೆಚ್ಚುವರಿ ಸಾಲ ಮಾಡಲು ಅವಕಾಶ ನೀಡಲಾಗಿದೆ.

ಇವುಗಳೆಲ್ಲದರ ಪರಿಣಾಮ ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟಾದರೂ ಒಟ್ಟು ಜಿಡಿಪಿ ಉತ್ಪನ್ನದ ಶೇ.23.2ರಷ್ಟು ಮಾತ್ರ ಸಾಲ ಆಗಲಿದೆ. ಶೇ.25ಕ್ಕಿಂತ ಹೆಚ್ಚಿರಬಾರದು ಎಂಬ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮಗಳ ಅಡಿಯೇ ಇರಲಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.