ETV Bharat / state

ಅಂಕೆ ಮೀರುತ್ತಿದೆ ರಾಜ್ಯದ ಜನಸಂಖ್ಯೆ: ಸರ್ಕಾರದ ಯೋಜನೆಯಿಲ್ಲ; ಕಡಿವಾಣ ಜನರಿಂದಲೇ ನಡೆದಿದೆ

2011ರ ಜನಗಣತಿ ವೇಳೆ ರಾಜ್ಯದ ಜನಸಂಖ್ಯೆ 6.11 ಕೋಟಿ ಇದ್ದರೂ, ಇದೀಗ ಅದು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 7 ಕೋಟಿ ಮೀರಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಯೋಜನೆ ಕೈಗೊಳ್ಳದಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಅಲ್ಪಸ್ವಲ್ಪ ನಿಯಂತ್ರಣವಾಗಿದೆ ಎಂದಾದರೆ ಅದು ಜನ ತೆಗೆದುಕೊಂಡ ಎಚ್ಚರಿಕೆ ಹಾಗೂ ಕ್ರಮವಾಗಿದೆ.

Control Population
ಅಂಕೆ ಮೀರುತ್ತಿದೆ ರಾಜ್ಯದ ಜನಸಂಖ್ಯೆ
author img

By

Published : Jul 11, 2020, 9:18 PM IST

ಬೆಂಗಳೂರು: ರಾಜ್ಯದ ಜನಸಂಖ್ಯೆ ಸದ್ಯ 7 ಕೋಟಿ ಮೀರುತ್ತಿದೆ. ನಿಯಂತ್ರಣಕ್ಕೆ ಜನರೇ ಒಂದಿಷ್ಟು ಮಾರ್ಗ ಹುಡುಕಿಕೊಂಡಿದ್ದು ಬಿಟ್ಟರೆ ಸರ್ಕಾರದಿಂದ ಯಾವುದೇ ಪರಿಣಾಮಕಾರಿ ಯೋಜನೆ ಜಾರಿಗೆ ಬಂದಿಲ್ಲ. ಹೀಗಾಗಿ ರಾಜ್ಯದ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ.

ಕಳೆದ 10 ವರ್ಷದಲ್ಲಿ ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ಇದೇ ಅವಧಿಯಲ್ಲಿ ಮೂರನೇ ಬಾರಿ ಸಿಎಂ ಆಗಿದ್ದಾರೆ. 10 ವರ್ಷ ಕಾಲಾವಧಿಯಲ್ಲಿ ಮೊದಲ ಮೂರು ವರ್ಷ ಹಾಗೂ ನಂತರದ ಎರಡು ವರ್ಷ ಸರ್ಕಾರವೇ ಅತಂತ್ರ ಸ್ಥಿತಿ ಎದುರಿಸಿದೆ. ಈ ಸಂದರ್ಭ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆದಿದೆಯೇ ಹೊರತು ಯಾವುದೇ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಯಾವ ಯೋಜನೆ ಬಗ್ಗೆ ಯೋಚಿಸುವ ಕಾರ್ಯ ಕೂಡ ಆಗಿಲ್ಲ.

ಇನ್ನು, ದೇವರಾಜ್ ಅರಸು ನಂತರ ಪೂರ್ಣಾವಧಿ ಅಧಿಕಾರ ನೀಡಿದ ಸಿದ್ದರಾಮಯ್ಯ ಕೂಡ ವಿವಿಧ ಭಾಗ್ಯಗಳನ್ನು ಜನರಿಗೆ ನೀಡಿದರಾದ್ರೂ, ಜನಸಂಖ್ಯೆ ನಿಯಂತ್ರಣ ವಿಚಾರದಲ್ಲಿ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳಲಿಲ್ಲ. ಹಲವು ಜನಹಿತ ಯೋಜನೆ ತಂದರಾದ್ರೂ ಜನಸಂಖ್ಯೆ ನಿಯಂತ್ರಣಕ್ಕೆ ಹೇಳಿಕೊಳ್ಳುವ ಕಾರ್ಯ, ಯೋಜನೆ ಜಾರಿಗೆ ತರಲಿಲ್ಲ.

ಸರ್ಕಾರಗಳು ಅಧಿಕಾರಕ್ಕೆ ಬಂದವಾದ್ರೂ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೆಣಗಾಡಿದವೇ ಹೊರತು, ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಬೇಕೆಂಬ ಚಿಂತನೆ ನಡೆಸಲಿಲ್ಲ. ಇದರಿಂದಾಗಿ ಇಂದು ಪ್ರಜ್ಞಾವಂತ ಸಮುದಾಯ ಇರುವ ಕಡೆ ಜನಸಂಖ್ಯೆ ಸಾಕಷ್ಟು ನಿಯಂತ್ರಣದಲ್ಲಿದೆ. ಬಡವರು, ಅವಿದ್ಯಾವಂತರು ಇರುವ ಪ್ರದೇಶದಲ್ಲಿ ಜನಸಂಖ್ಯೆಯ ನಿಯಂತ್ರಣವಾಗಿಲ್ಲ. ಇಲ್ಲಿ ಸರ್ಕಾರ ಕೂಡ ಸೂಕ್ತ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಉತ್ತಮ ಭವಿಷ್ಯ ಕಲ್ಪಿಸುವ ಯೋಜನೆ ಘೋಷಿಸುವ ಕಾರ್ಯವನ್ನೂ ಮಾಡದ ಸರ್ಕಾರ ಜನಜಾಗೃತಿಯನ್ನೂ ಮೂಡಿಸಿಲ್ಲ ಎನ್ನುವ ಆರೋಪ ಇದೆ.

ಆರ್ಥಿಕ ಸಂಕಷ್ಟ, ಮಕ್ಕಳನ್ನು ಬೆಳೆಸಲು ಆಗುವ ಅಧಿಕ ವೆಚ್ಚ, ಹೆಚ್ಚುತ್ತಿರುವ ಬೆಲೆ ಏರಿಕೆ, ಶಿಕ್ಷಣ ಶುಲ್ಕ, ಆರೋಗ್ಯ ವೆಚ್ಚದ ಹೆಚ್ಚಳ ಇತ್ಯಾದಿ ಕಾರಣಗಳ ಜತೆ ಹತ್ತು ಹಲವು ವಿಚಾರ ಮುಂದಿಟ್ಟು ಜನರೇ ಮಕ್ಕಳ ವಿಚಾರದಲ್ಲಿ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದಾರೆ. ಇದರಿಂದಲೇ 2011ರಲ್ಲಿ 6.11 ಕೋಟಿ ಇದ್ದ ಜನಸಂಖ್ಯೆ 7 ಕೋಟಿಯನ್ನು ಮೀರಿದೆ. 2011ರ ಹಿಂದಿನ ಜನಸಂಖ್ಯಾ ಪ್ರಗತಿಗೆ ಹೋಲಿಸಿದರೆ ಒಂದಿಷ್ಟು ಕಡಿವಾಣ ಬಿದ್ದಿದೆ. ಆದರೆ, ಇದು ಪ್ರಜ್ಞಾವಂತ ಹಾಗೂ ವಿದ್ಯಾವಂತರ ಸಮುದಾಯದಲ್ಲಿ ಅನ್ನುವುದು ಗಮನಾರ್ಹ.

ಜನಸಂಖ್ಯೆ ಹೆಚ್ಚಳ ಅನೇಕ ಸಮಸ್ಯೆಗಳಿಗೆ ಕಾರಣ. ಜನಸಂಖ್ಯೆ ಹೆಚ್ಚಳದಿಂದ ಹಲವಾರು ಸಮಸ್ಯೆಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಅನಕ್ಷರತೆ, ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳ ಬೇಕಾದ್ರೆ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇ ಬೇಕಾಗಿದೆ.

ಜನಸಂಖ್ಯೆ ತ್ವರಿತವಾಗಿ ಬೆಳೆಯುವಷ್ಟು ಆಹಾರವನ್ನು ಬೆಳೆಸಲು ಸಾಧ್ಯವಿಲ್ಲ. ಜನಸಂಖ್ಯೆ ಮಿತಿಮೀರಿದ್ರೆ ಜನರಿಗೆ ಮೂಲಸೌಲಭ್ಯ, ಶಿಕ್ಷಣ ಸೇರಿ ಇತರೆ ಅವಶ್ಯಕತೆಗಳನ್ನು ಪರಿಪೂರ್ಣವಾಗಿ ಪೂರೈಸಲು ಸಾಧ್ಯವಾಗದೆ ಇರಬಹುದು. ಆದ್ದರಿಂದ ಜನರು ಸಹ ಜಾಗೃತರಾಗಿ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡಿದ್ದಾರೆ.

ಜನಸಂಖ್ಯೆ ಸ್ಫೋಟ ಒಂದು ವಿಷವರ್ತುಲವಾಗಿದೆ. ಬಡತನ, ಅನಕ್ಷರತೆ, ಸಂಪನ್ಮೂಲ ಕೊರತೆ, ನಿರುದ್ಯೋಗ ಸಮಸ್ಯೆಗಳು ಜನಸಂಖ್ಯೆಯಿಂದಾಗಿವೆ. ಆದ್ದರಿಂದ ದೇಶದ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅನಿವಾರ್ಯ. ಇದನ್ನು ಸರ್ಕಾರಗಳು ಪರಿಣಾಮಕಾರಿಯಾಗಿಸಲು ಮರೆತರೂ, ಜನ ಒಂದಿಷ್ಟು ನೆನಪಿಟ್ಟುಕೊಂಡಿದ್ದು ಸಮಾಧಾನಕರ ಸಂಗತಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.