ETV Bharat / state

ಸಾಲ ಮಾಡಲು ಆರಂಭಿಸಿದ ಬೊಮ್ಮಾಯಿ ಸರ್ಕಾರ: ಮುಂದಿನ ಮೂರು ತಿಂಗಳಲ್ಲಿ 19,000 ಕೋಟಿ ಸಾಲಕ್ಕೆ ನಿರ್ಧಾರ

author img

By

Published : Oct 6, 2022, 3:00 PM IST

ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ 19,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಆರ್​ಬಿಐಗೆ ಮಾಹಿತಿ ನೀಡಿದೆ.

state-government-decision-to-take-19000-crore-loan-in-next-three-months
ಸಾಲ ಮಾಡಲು ಆರಂಭಿಸಿದ ಬೊಮ್ಮಾಯಿ ಸರ್ಕಾರ: ಮುಂದಿನ ಮೂರು ತಿಂಗಳಲ್ಲಿ 19,000 ಕೋಟಿ ಸಾಲಕ್ಕೆ ನಿರ್ಧಾರ

ಬೆಂಗಳೂರು: 2022-23ನೇ ಸಾಲಿನ ಮೊದಲಾರ್ಧ ವರ್ಷದಲ್ಲಿ ಸಾಲದ ಮೊರೆ ಹೋಗದಿದ್ದ ರಾಜ್ಯ ಸರ್ಕಾರ ಇದೀಗ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ. ಆರ್​​ಬಿಐ ಮೂಲಕ ಮುಂದಿನ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಮಾಡಲು ಆರಂಭಿಸಲಿದೆ.

ಆದಾಯ ಸಂಗ್ರಹ ಚೇತರಿಕೆ ಕಾಣುತ್ತಿದ್ದರೂ ಸರ್ಕಾರಕ್ಕೆ ಬಜೆಟ್ ನಿರ್ವಹಣೆಗಾಗಿ ಸಾಲ ಮಾಡುವುದು ಅನಿವಾರ್ಯವಾಗಿದೆ. ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಬೊಮ್ಮಾಯಿ ಸರ್ಕಾರ ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. 2022-23 ಸಾಲಿನ ಮೊದಲಾರ್ಧ ವರ್ಷದಲ್ಲಿ ಬೊಮ್ಮಾಯಿ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಯಾವುದೇ ಸಾಲವನ್ನು ಎತ್ತುವಳಿ ಮಾಡಿಲ್ಲ.

ಆರ್​​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾಡಲಾಗುತ್ತದೆ. ರಾಜ್ಯ ಮಾಡುವ ಬಹುಪಾಲು ಸಾಲ ರಾಜ್ಯ ಅಭಿವೃದ್ಧಿ ಸಾಲವಾಗಿದೆ. ಅದರಂತೆ ಬೊಮ್ಮಾಯಿ ಸರ್ಕಾರ ಏಪ್ರಿಲ್ - ಜೂನ್ ಮುಗಿಯಲಿರುವ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಿರಲಿಲ್ಲ. ಉತ್ತಮ ಆದಾಯ ಸಂಗ್ರಹಿಸಿದ ಕಾರಣ ಜುಲೈ - ಸೆಪ್ಟೆಂಬರ್​​ವರೆಗಿನ ಎರಡನೇ ತ್ರೈಮಾಸಿಕದಲ್ಲೂ ಆರ್​ಬಿಐ ಮೂಲಕ ಸಾಲ ಮಾಡದಿರಲು ನಿರ್ಧರಿಸಿತ್ತು. ಆದರೆ, ಈ ತಿಂಗಳಿಂದ ಬೊಮ್ಮಾಯಿ‌ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ.

19,000 ಕೋಟಿ ಸಾಲ ಮಾಡಲು ನಿರ್ಧಾರ: ಆರ್ಥಿಕ ವರ್ಷದ ಎರಡು ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದಿರುವ ಸರ್ಕಾರ ಇದೀಗ ಮೂರನೇ ತ್ರೈಮಾಸಿಕದಲ್ಲಿ ಆರ್​​ಬಿಐ ಮೂಲಕ ಸಾಲ ಮಾಡಲು ಪ್ರಾರಂಭಿಸಲಿದೆ. ಅಕ್ಟೋಬರ್​ನಿಂದ ಡಿಸೆಂಬರ್ ವರೆಗಿನ ಮೂರನೇ ತ್ರೈ ಮಾಸಿಕದಲ್ಲಿ ರಾಜ್ಯ ಸರ್ಕಾರ 19,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಆರ್​ಬಿಐಗೆ ಮಾಹಿತಿ ನೀಡಿದೆ.

ಆರ್​ಬಿಐ ರಾಜ್ಯದ ಪರವಾಗಿ ಪ್ರತಿ ವಾರ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಸಾಲ ಎತ್ತುವಳಿ ಮಾಡುತ್ತದೆ. ಅದರಂತೆ ರಾಜ್ಯ ಸರ್ಕಾರ ಅಕ್ಟೋಬರ್ 11ರಿಂದ ಮಾರುಕಟ್ಟೆ ಸಾಲವನ್ನು ಎತ್ತುವಳಿ ಮಾಡಲಿದೆ. ಆ ಮೂಲಕ ಅಕ್ಟೋಬರ್ ತಿಂಗಳಲ್ಲಿ ಒಟ್ಟು 3,000 ಕೋಟಿ ಸಾಲ ಮಾಡಲು ಉದೇಶಿಸಿದೆ.

ನವೆಂಬರ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಿಂದ 8,000 ಕೋಟಿ ರೂ. ಸಾಲ ಮಾಡಲಿದೆ. ಅದರಂತೆ ನವೆಂಬರ್​ 1ಕ್ಕೆ 2,000 ಕೋಟಿ ರೂ., ನ.7ರಂದು 1,000 ಕೋಟಿ ರೂ., ನ.15ರಂದು 2,000 ಕೋಟಿ ರೂ., ನ.22ರಂದು 1,000 ಕೋಟಿ ಹಾಗೂ ನ.29ರಂದು 2,000 ಕೋಟಿ ಸಾಲ ಮಾಡಲು ನಿರ್ಧರಿಸಿದೆ.

ಡಿಸೆಂಬರ್​ ತಿಂಗಳಲ್ಲಿ ಒಟ್ಟು 8,000 ಕೋಟಿ ರೂ. ಸಾಲ ಮಾಡಲಿದೆ. ಅದರಂತೆ ಡಿ.6, ಡಿ.13, ಡಿ.20 ಹಾಗೂ ಡಿ.27ಕ್ಕೆ ತಲಾ 2,000 ಕೋಟಿ ರೂಪಾಯಿಯಂತೆ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ. ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಇನ್ನಷ್ಟು ಹೆಚ್ಚಿನ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ ಎಂದು ಆರ್ಥಿಕ ಇಲಾಖೆ‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಆನೆಗೆ ಚಿಕಿತ್ಸೆ ನೀಡುವಂತೆ ರಾಹುಲ್ ಗಾಂಧಿ ಪತ್ರ: ಸ್ಪಂದಿಸಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.