ETV Bharat / state

ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಂಪೂರ್ಣ ಸಿದ್ಧ: ಸಚಿವ ಸುಧಾಕರ್

ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲಾ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ Co-WIN ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

minister k sudhaker
ಸಚಿವ ಸುಧಾಕರ್
author img

By

Published : Jan 5, 2021, 9:05 PM IST

ಬೆಂಗಳೂರು: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಸುವ್ಯವಸ್ಥಿತ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸೇರಿ ಒಟ್ಟು 6,30,524 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ಸಚಿವ ಸುಧಾಕರ್ ಟ್ವೀಟ್​​​​​ ಮಾಡಿ ಮಾಹಿತಿ ನೀಡಿದ್ದಾರೆ.

  • ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿದ್ದು ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಿಲಿವೆ. (3/3)

    — Dr Sudhakar K (@mla_sudhakar) January 5, 2021 " class="align-text-top noRightClick twitterSection" data=" ">

ಲಸಿಕೆ ನೀಡಲು ತರಬೇತಿ ಪಡೆದ 9,807 ಸಿಬ್ಬಂದಿ ಹಾಗೂ ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲಾ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ Co-WIN ತಂತ್ರಾಂಶದಲ್ಲಿ ನಮೂದಿಸಲಾಗಿದೆ ಅಂತ ಸುಧಾಕರ್ ತಿಳಿಸಿದ್ದಾರೆ.

ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್​​ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿದ್ದು ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಲಿವೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ದೇಸಿ ಕೊರೊನಾ ಲಸಿಕೆ ಕುರಿತು ವಿನಾ ಕಾರಣ ಟೀಕೆ ಬೇಡ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.