ಬೆಂಗಳೂರು : ರಾಜ್ಯದಲ್ಲಿಂದು 1,12,524 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 300 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,02,427ಕ್ಕೆ ಏರಿಕೆ ಆಗಿದೆ.
279 ಮಂದಿ ಗುಣಮುಖರಾಗಿದ್ದು, ಈತನಕ 29,56,970 ಡಿಸ್ಜಾರ್ಜ್ ಆಗಿದ್ದಾರೆ. ಉಡುಪಿಯಲ್ಲಿ ಸೋಂಕಿಗೆ ಇಂದು ಒಬ್ಬರು ಮೃತರಾಗಿದ್ದು, ಸಾವಿನ ಸಂಖ್ಯೆ 38,288ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7140ಕ್ಕೆ ಏರಿಕೆ ಕಂಡಿದೆ.
ಈ ಮೂಲಕ ಸೋಂಕಿತರ ಪ್ರಮಾಣ ಶೇ.0.26% ರಷ್ಟಿದೆ. ಸಾವಿನ ಪ್ರಮಾಣ ಶೇ. 0.33 ರಷ್ಟು ಇದೆ. ವಿಮಾನ ನಿಲ್ದಾಣದಿಂದ 4,899 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಹೈರಿಸ್ಕ್ ದೇಶದಿಂದ 1599 ಜನರು ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿಂದು 168 ಮಂದಿಗೆ ವೈರಸ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,60,131ಕ್ಕೆ ಏರಿದೆ. 148 ಜನರು ಡಿಸ್ಜಾರ್ಜ್ ಆಗಿದ್ದು, 12,38,093 ಗುಣಮುಖರಾಗಿದ್ದಾರೆ. ಇಂದು ರಾಜಧಾನಿಯಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ. ಸದ್ಯ ಸಕ್ರಿಯ ಪ್ರಕರಣಗಳು 5,660 ರಷ್ಟಿದೆ.
ರೂಪಾಂತರಿ ಅಪ್ಡೇಟ್ಸ್
ಅಲ್ಫಾ- 155
ಬೇಟಾ-08
ಡೆಲ್ಟಾ- 2095
ಡೆಲ್ಟಾ ಸಬ್ಲೈನ್ ಏಜ್- 558
ಕಪ್ಪಾ-160
ಈಟಾ-01
ಒಮಿಕ್ರಾನ್- 14
ಓದಿ: ಸೈಟ್ ದಾಖಲೆ ಪಡೆದು ಮೋಸದ ಆರೋಪ ; ಲೋಕಾಯುಕ್ತ ಕಚೇರಿಯಲ್ಲೇ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ