ETV Bharat / state

ರಾಜ್ಯದಲ್ಲಿಂದು 7,665 ಕೊರೊನಾ ಪ್ರಕರಣ ಪತ್ತೆ, 8,397 ಮಂದಿ ಗುಣಮುಖ

ಇಂದು ರಾಜ್ಯದಲ್ಲಿ 7,665 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 139 ಮಂದಿ ಬಲಿಯಾಗಿದ್ದು, 8,397 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

corona
corona
author img

By

Published : Aug 18, 2020, 9:40 PM IST

ಬೆಂಗಳೂರು: ಆಗಸ್ಟ್ ತಿಂಗಳ ಕೊರೊನಾಘಾತ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ 7,665 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,40,948 ಏರಿಕೆ ಆಗಿದೆ.

ಇಂದು ರಾಜ್ಯದಲ್ಲಿ ಕೊರೊನಾಗೆ 139 ಬಲಿಯಾಗಿದ್ದು, ಸಾವಿನ ಸಂಖ್ಯೆ 4,201ಕ್ಕೆ ಏರಿಕೆ ಆಗಿದೆ. ಒಟ್ಟು 2,40,948 ಪ್ರಕರಣಗಳಲ್ಲಿ 1,56,949 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದು, 79,782 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

8,397 ಮಂದಿ ಒಂದೇ ದಿನ ಡಿಸ್ಚಾರ್ಜ್ ಆಗಿದ್ದು, 697 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ವಿಮಾನ ನಿಲ್ದಾಣದಲ್ಲಿಂದು 27,006 ಮಂದಿಯನ್ನು ತಪಾಸಣೆಗೆ ಒಳಪಡಿಲಾಗಿದೆ. ಜುಲೈ ಒಂದರಿಂದ ಆಗಸ್ಟ್ 18 ರವರೆಗೆ 3,28,804 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದ ಕಾರಣ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ.

ತೀವ್ರ ಉಸಿರಾಟ ಸಮಸ್ಯೆ ಇರುವವರಿಗೆ ಹಾಸಿಗೆ ಮೀಸಲು:

ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹೊಂದಿರುವವರ ಚಿಕಿತ್ಸೆಗೆಂದು ನಗರದ 15 ಆಸ್ಪತ್ರೆಗಳಲ್ಲಿ 143 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೊರೊನಾ ವೈರಸ್ ಸೋಂಕು ಪರೀಕ್ಷೆ ವರದಿ ಇಲ್ಲದಿದ್ದರೂ ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಸದ್ಯ ಸೋಂಕು ಪರೀಕ್ಷಾ ವರದಿ ಇಲ್ಲದೇ ರೋಗ ಲಕ್ಷಣ ಹೊಂದಿದವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಇದರಿಂದ ಸಾರಿ ಪ್ರಕರಣಗಳಲ್ಲಿ ನಿಗದಿತ ಸಮಯಕ್ಕೆ ಚಿಕಿತ್ಸೆ ಸಿಗದೇ ಸೋಂಕಿತರ ಸಾವು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ನಗರದಲ್ಲಿ 5 ಸರ್ಕಾರಿ, 10 ಖಾಸಗಿ ಸೇರಿ ಒಟ್ಟು 15 ಆಸ್ಪತ್ರೆಗಳಲ್ಲಿ 143 ಹಾಸಿಗೆಗಳನ್ನು ತೀವ್ರ ಉಸಿರಾಟದ ಸಮಸ್ಯೆ ಹೊಂದಿದವರಿಗಾಗಿ ಮೀಸಲಿಡಲಾಗಿದೆ. ಎಲ್ಲಾ ಹಾಸಿಗೆಗಳು ತುರ್ತು ನಿಗಾ ಘಟಕದಲ್ಲಿದ್ದು(ಐಸಿಯು), ಬಹುತೇಕ ಕೃತಕ ಆಕ್ಸಿಜನ್ ಸೌಲಭ್ಯ ಒಳಗೊಂಡಿರುತ್ತವೆ.

ಆಸ್ಪತ್ರೆಗೆ ಉಸಿರಾಟದ ಸಮಸ್ಯೆ ಇರುವವರು ಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಆ ಬಳಿಕ ಸೋಂಕು ಪರೀಕ್ಷೆ ನಡೆಸಿ, ಕೊರೊನಾ ಆಸ್ಪತ್ರೆಗೆ ಅಥವಾ ಅದೇ ಆಸ್ಪತ್ರೆಯ ಕೊರೊನಾ ಸೋಂಕಿತರ ವಾರ್ಡ್​ಗೆ ವರ್ಗಾಯಿಸಬೇಕು. ಒಂದು ವೇಳೆ ವರದಿ ನೆಗೆಟಿವ್ ಬಂದರೆ ಆಸ್ಪತ್ರೆಯ ಕೊರೊನೇತರ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರೆಸಬೇಕು ಎಂದು ತಿಳಿಸಲಾಗಿದೆ.

ಆಸ್ಪತ್ರೆಗಳು - ಹಾಸಿಗೆ ಸಾಮರ್ಥ್ಯ ಹೀಗಿವೆ:

ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ - 36
ಬೌರಿಂಗ್ ಮತ್ತು ಲೇಡಿ ಕರ್ಜನ್ - 20
ಕೆ.ಸಿ. ಜನರಲ್ - 20
ಸಿ.ವಿ.ರಾಮನ್ - 4
ಜಯನಗರ ಜನರಲ್ - 10
ಬಾಪ್ಟಿಸ್ಟ್ ಆಸ್ಪತ್ರೆ - 6
ಚಿನ್ಮಯ ಮಿಷನ್ - 8
ಎಚ್‌ಪಿಎಸ್ - 2
ಪ್ರೋಮಿಡ್ - 2
ಸಕ್ರಾ - 3
ಸಂತೋಷ್ - 4
ಸಪ್ತಗಿರಿ ಸೂಪರ್ ಸ್ಪೆಷಾಲಿಟಿ - 7
ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ -2
ಸೆಂಟ್ ಫಿಲೋಮಿನಾ -17
ವಿಕ್ರಂ - 5

ETV Bharat Logo

Copyright © 2024 Ushodaya Enterprises Pvt. Ltd., All Rights Reserved.