ETV Bharat / state

ನಳಿನ್ ಕುಮಾರ್ ಕಟೀಲ್​ಗೆ ಟ್ವೀಟ್​ ಮೂಲಕ ಖಡಕ್​ ಎಚ್ಚರಿಕೆ ನೀಡಿದ ಕಾಂಗ್ರೆಸ್ - State Congress tweet against Nalin Kumar Kateel

ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ.

State Congress tweet against Nalin Kumar Kateel
ನಳಿನ್ ಕುಮಾರ್ ಕಟೀಲ್​ಗೆ ಟ್ವೀಟ್​ ಮೂಲಕ ಖಡಕ್​ ಎಚ್ಚರಿಕೆ ನೀಡಿದ ರಾಜ್ಯ ಕಾಂಗ್ರೆಸ್
author img

By

Published : Nov 2, 2020, 9:37 AM IST

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿರುವ ಪಕ್ಷ, ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ..? ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆ್ಯಕ್ಟರ್ ನಳಿನ್ ಕುಮಾರ್ ಕಟೀಲ್ ಸಾಕ್ಷಿ, ಇವರ ಮಾತಲ್ಲಿ ಘನತೆ, ಗೌರವ, ಬದ್ಧತೆ, ಯಾವುದೂ ಇಲ್ಲ. ಸಿದ್ದರಾಮಯ್ಯಗೆ ಕಾಂಗ್ರೆಸ್​​​​ನಲ್ಲಿ ಬೆಲೆ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ, ಸರ್ವ ಜನಾಂಗದ ನಾಯಕ, ಹಣಕಾಸು ತಜ್ಞ,168 ಯೋಜನೆಗಳನ್ನ ಘೋಷಿಸಿ ಜಾರಿಗೊಳಿಸಿ ನುಡಿದಂತೆ ನಡೆದ ನಾಯಕ ಸಿದ್ದರಾಮಯ್ಯ ಎಂದು ಅಭಿಪ್ರಾಯಪಟ್ಟಿದೆ.

ಪಂಪ್ ವೆಲ್ ಸೇತುವೆ ಪ್ರಸ್ತಾಪ ಒಂದು ಪಂಪ್ ವೆಲ್ ಮೇಲ್ಸೇತುವೆ ಸಮಯಕ್ಕೆ ಮುಗಿಸಲಾಗದ ನಳಿನ್ ಕುಮಾರ್ ಕಟೀಲ್ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ನಮ್ಮ ಪ್ರತಿ ಕಾರ್ಯಕರ್ತರಲ್ಲೂ ಸಿದ್ದರಾಮಯ್ಯ ಬಗ್ಗೆ ಅದಮ್ಯವಾದ ಗೌರವವಿದೆ ಎಂದಿದೆ.

ನಳಿನ್ ಕುಮಾರ್ ಕಟೀಲ್ ಅವರೇ ತಾವು ಪದೇ ಪದೆ ಅವಹೇಳನ ಮಾಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್​ಗೆ ಕನಿಷ್ಠ ನೋಟಿಸನ್ನೂ ಕೊಡದಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಣ್ಣ ಸಮಯ ಕೊಡದಿದ್ದಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಯಾವ ಪಾಡಿನಲ್ಲಿದ್ದಾರೆ ಎಂದು ಸೂಚಿಸುತ್ತದೆ. ಪಕ್ಷ ಕಟ್ಟಿದ ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದೆ.

ನಳಿನ್ ಕುಮಾರ್ ಕಟೀಲ್ ತಮ್ಮ ನಡೆ - ನುಡಿ‌ ಮೂಲಕ ತಾನೊಬ್ಬ ಅಪ್ರಬುದ್ಧ, ಅನಾಗರಿಕ, ಸಡಿಲ ನಾಲಿಗೆಯ ಯಕಶ್ಚಿತ್ ರಾಜಕಾರಣಿ ಎಂದು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿಯ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು. ಅವರು ಇದೇ ರೀತಿ ಮಾತನಾಡುತ್ತ ಬಿಜೆಪಿಯ ಬಣ್ಣ ಬಯಲು ಮಾಡುತ್ತಲೇ ಇರಲಿ ಎಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.