ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೈ ಪಕ್ಷ, ರಾಜ್ಯ ಬಿಜೆಪಿ ಪಕ್ಷದ ಪರಿಸ್ಥಿತಿ "ಮನೆಯೊಂದು ಮೂರಲ್ಲ ನೂರು ಬಾಗಿಲು" ಎಂಬಂತಾಗಿದೆ. ತಮ್ಮ ಬಾಗಿಲು, ಬಿಲಗಳನ್ನು ಮುಚ್ಚಿಕೊಳ್ಳುವ ಬದಲಾಗಿ ಕಾಂಗ್ರೆಸ್ ಮುಕ್ತ ಎಂಬ "ತಿರುಕನ ಕನಸು" ಕಾಣುತ್ತಿರುವುದು ಹಾಸ್ಯಾಸ್ಪದ. ಅಧಿಕಾರದ ಹಪಹಪಿಯ ಬಿಜೆಪಿಗೆ ಅಧಿಕಾರ ಸಿಕ್ಕಾಗಲೆಲ್ಲ ಕಿತ್ತಾಟಗಳೇ ಮುಖ್ಯವಾಗಿ ರಾಜ್ಯದ ಅಭಿವೃದ್ಧಿ, ಅಡಳಿತಯಂತ್ರಕ್ಕೆ ಮಾರಕವಾಗಿದೆ ಎಂದಿದೆ.
ಕಾಂಗ್ರೆಸ್ ಟ್ವೀಟ್‌ಗೆ ಬಿಜೆಪಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಬಿಜೆಪಿ ಕನಸಿಗೆ ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯ ಕಾಂಗ್ರೆಸ್ಗೆ ಧನ್ಯವಾದಗಳು. ಪ್ರತಿದಿನ ಮಾಧ್ಯಮದ ಮುಂದೆ ಬಿಜೆಪಿ ಸರ್ಕಾರ ಬೀಳುತ್ತದೆ ಎಂದು ಭವಿಷ್ಯ ನುಡಿಯುವ ಸಿದ್ದರಾಮಯ್ಯನವರೇ, ನಿಮ್ಮ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ ಎಂದು ಟ್ವೀಟ್ ಮಾಡಿದೆ.