ETV Bharat / state

ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ

author img

By

Published : Jul 22, 2022, 4:19 PM IST

Updated : Jul 23, 2022, 9:47 AM IST

ಹೆಚ್ಚುವರಿ ಹೂಡಿಕೆ ಆಧಾರದಲ್ಲಿ ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಉದ್ಯೋಗ ನೀಡುವ ನೀತಿ ಇದಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

state-cabinet-approves-karnataka-employment-policy-2022-25
ಉದ್ಯೋಗ ನೀತಿ 2022-25ಗೆ ಸಚಿವ ಸಂಪುಟ ಸಭೆ: ಹೆಚ್ಚುವರಿ ಹೂಡಿಕೆಗೆ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ

ಬೆಂಗಳೂರು: ಕರ್ನಾಟಕ ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವ ಸಂಸ್ಥೆಗಳು ಅದರ ಆಧಾರದಲ್ಲಿ ಸ್ಥಳೀಯರಿಗೆ ಶೇ.2-3ರಷ್ಟು ಹೆಚ್ಚುವರಿ ಉದ್ಯೋಗ ನೀಡುವ ನೀತಿ ಇದಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚುವರಿ ಹೂಡಿಕೆ ಆಧಾರದಲ್ಲಿ ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಉದ್ಯೋಗ ನೀಡಲು ಈ ನೀತಿ ರೂಪಿಸಲಾಗಿದೆ. ಎಲ್ಲ ಶ್ರೇಣಿಯಲ್ಲೂ ಸ್ಥಳೀಯ ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ ಎಂದರು.

2022-23ನೇ ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಯೋಜನೆಯಡಿ 132 ಕೋಟಿ ರೂ. ಅನುದಾನದಲ್ಲಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್ಸ್​ ವಿತರಿಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಸನ್ನಡತೆ ಮಾರ್ಗಸೂಚಿಗೆ ತಿದ್ದುಪಡಿ: ರಾಜ್ಯದ ವಿವಿಧ ಕೇಂದ್ರ ಕಾರಾಗೃಹದಲ್ಲಿರುವ ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆಗೊಳಿಸುವ ಮಾರ್ಗಸೂಚಿಗಳನ್ನೊಳಗೊಂಡ ಏಪ್ರಿಲ್ 2020ರ ಸರ್ಕಾರಿ ಆದೇಶಕ್ಕೆ ತಿದ್ದುಪಡಿ ಮಾಡಿ ಎರಡು ಹೆಚ್ಚುವರಿ ಅಂಶಗಳನ್ನು ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಜೀವಾವದಿ ಕೈದಿಗಳನ್ನು ಬಿಡಬೇಕಾದರೆ, ಪೋಸ್ಕೋದಲ್ಲಿ ಬಂಧಿತರಾದವರು, ಮೂರು - ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ, ಅತ್ಯಾಚಾರ ಅಪರಾಧಿಗಳನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ‌. ಈ ಸಂಬಂಧ ಅಂಶಗಳನ್ನು ಸೇರಿಸಿ ಮಾರ್ಗಸೂಚಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಸಂಪುಟದ ಪ್ರಮುಖ ತೀರ್ಮಾನಗಳೇನು?:

  • ಕರ್ನಾಟಕ ರಾಜ್ಯ ಪೊಲೀಸ್‌' (ಶಿಸ್ತು ನಡಾವಳಿ) (ತಿದ್ದುಪಡಿ) ನಿಯಮಗಳು, 2022 ಅನುಮೋದನೆ - 75ನೇ ಸ್ವಾತಂತ್ರ್ಯ ದಿನಾಚಾರಣೆಯ ಅಂಗವಾಗಿ, ಅಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಭಾರತ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ವಯ ಒಟ್ಟು 81 ಅರ್ಹ ನಿರ್ದಿಷ್ಟ ವರ್ಗದ ಶಿಕ್ಷಾ ಬಂಧಿಗಳನ್ನು 15ನೇ ಅಗಸ್ಟ್ 2022ರ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮೊದಲನೇ ಹಂತದಲ್ಲಿ ವಿಶೇಷ ಮಾಫಿಯೊಂದಿಗೆ ಬಿಡುಗಡೆಗೆ ಪರಿಗಣಿಸಲು ತೀರ್ಮಾನ.
  • ಕರ್ನಾಟಕ ರೇಷ್ಮೆ ಹುಳುವಿನ ಬಿತ್ತನೆ, ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ಹಂಚಿಕೆ ಮತ್ತು ಮಾರಾಟ (ನಿಯಂತ್ರಣ) (ತಿದ್ದುಪಡಿ) ವಿಧೇಯಕ 2022ಕ್ಕೆ ಅನುಮೋದನೆ‌.
  • ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿ ಮೊದಲನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ 46,499 ಬಹುಮಹಡಿ ಮನೆಗಳ ಪೈಕಿ 8,096 ಎರಡು ಬಿಎಚ್ ಕೆ ಮನೆ/ ಫ್ಲಾಟ್‌ನ ಘಟಕ ಬೆಲೆಯನ್ನು 15 ಲಕ್ಷಗಳಿಂದ 14 ಲಕ್ಷ ರೂ.ಗೆ ಪರಿಷ್ಕರಿಸಲು ತೀರ್ಮಾನ.
  • ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 1 ಬಿಎಚ್ ಕೆ ಹಾಗೂ 2 ಬಿಎಚ್ ಕೆ ಮನೆಗಳನ್ನು ಪೂರ್ಣಗೊಳಿಸಲು ವಾಣಿಜ್ಯ ಬ್ಯಾಂಕ್/ ಹುಡ್ಕೊ ಸಂಸ್ಥೆಯಿಂದ ಆರ್​​ಜಿಎಚ್​​ಸಿಎಲ್​ ಸಂಸ್ಥೆಯ 250 ಕೋಟಿ ರೂ.ಗಳ ಸಾಲ ಪಡೆಯಲು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಎಹೆಚ್‌ ಪಿ ಘಟಕದಡಿ ಅನುಷ್ಠಾನಗೊಳಿಸುತ್ತಿರುವ ವಸತಿ ಯೋಜನೆಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು 100 ಕೋಟಿ ರೂ. ಸಾಲ ಪಡೆಯಲು ಸರ್ಕಾರಿ ಖಾತರಿ ನೀಡಲು ಅಸ್ತು.
  • ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ವಿಸ್ತರಣೆಗಾಗಿ ಅವಶ್ಯವಿರುವ 240 ಎಕರೆ ಜಮೀನನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ‌ ನಿಲ್ದಾಣ ಎಂದು ಮರುನಾಮಕರಣ ಮಾಡಲು ಅನುಮೋದನೆ.
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) (ಕರ್ನಾಟಕ) (ತಿದ್ದುಪಡಿ) ನಿಯಮಗಳು 2022ಕ್ಕೆ ಅನುಮೋದನೆ.
  • ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ಹುಕ್ಕೇರಿ ತಾಲ್ಲೂಕಿನ 19 ಕೆರೆಗಳಿಗೆ ಒದಗಿಸುವ ಕಾಮಗಾರಿಯನ್ನು 42.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಕೆರೆಗೆ ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಯ 2ನೇ ಹಂತದ ಕಾಮಗಾರಿಯನ್ನು 49 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೇರೂರು ಮತ್ತು ಇತರೆ 14 ಗ್ರಾಮಗಳ ಹಾಗೂ ಹುಲಿಹೈದರ್ ಮತ್ತು ಇತರ 12 ಗ್ರಾಮಗಳ ಬಹುಗ್ರಾಮ ಕುಡಿವ ನೀರು ಸರಬರಾಜಿನ ಯೋಜನೆಯನ್ನು ಡಿಬಿಒಟಿ ಆಧಾರದ ಮೇಲೆ 43.15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಸತ್ತಿ ಮತ್ತು ಇತರ 8 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ಯೋಜನೆಯ 71 ಕೋಟಿ ರೂ.ಗಳ ಪರಿಷ್ಕಣೆ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರದ 291 ಜನವಸತಿಗಳಿಗೆ ಹಂತ-2 (193 ಜನವಸತಿಗಳು) ಬಹುಗ್ರಾಮ ಕುಡಿವ ನೀರು ಸರಬರಾಜಿನ ಯೋಜನೆಯನ್ನು ಅನುಷ್ಠಾನಗೊಳಿಸಲು 268 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಮತ್ತು ಇತರೆ 20 ಜನವಸತಿಗಳು ಹಾಗೂ ಚನ್ನಗಿರಿ ತಾಲ್ಲೂಕಿನ ಜೆ.ಬಿ, ಹಳ್ಳಿ ಮತ್ತು ಇತರೆ 6 ಜನವಸತಿಗಳಿಗೆ ಡಿಬಿಒಟಿ ಆಧಾರದ ಮೇಲೆ 49 ಕೋಟಿ ರೂ.ಗಳ ಅಂದಾಜಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ ಮಿಷನ್ ಯೋಜನೆಯಡಿ ಬಳ್ಳಾರಿ ಜಿಲ್ಲೆಯ (ಪ್ರಸ್ತುತ ವಿಜಯನಗರ ಜಿಲ್ಲೆ) ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಮತ್ತು ಇತರ 29 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 34.81 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ದಾವಣಿಗೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಮತ್ತು ಇತರ 20 ಜನವಸತಿಗಳು ಹಾಗೂ ಚನ್ನಗಿರಿ ತಾಲ್ಲೂಕಿನ ಜೆ.ಬಿ. ಹಳ್ಳಿ ಮತ್ತು ಇತರ 6 ಜನವಸತಿಗಳಿಗೆ ಡಿಬಿಒಟಿ ಆಧಾರದ ಮೇಲೆ 49 ಕೋಟಿ ರೂ.ಗಳ ಅಂದಾಜಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್‌ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್ ಮತ್ತು 61 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಡಿಬಿಒಟಿ ಆಧಾರದ ಮೇಲೆ ಒಟ್ಟು ಮೊತ್ತ 110 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕಡೆಹಳ್ಳಿ ಮತ್ತು ಇತರ 103 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಡಿಬಿಒಟಿ ಆಧಾರದ ಮೇಲೆ ಒಟ್ಟು ಮೊತ್ತ 260 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಝರ್ವಿ ಹಾಗೂ ಅವರ 30 ಗ್ರಾಮಗಳಿಗೆ (35 ಜನವಸತಿಗಳು), ಬೈಲಹೊಂಗಲ ತಾಲ್ಲೂಕಿನ 55 ಗ್ರಾಮಗಳಿಗೆ (59 ಜನವಸತಿಗಳು) ಬೆಳಗಾವಿ ತಾಲ್ಲೂಕಿನ 11 ಗ್ರಾಮಗಳಿಗೆ (12 ಜನವತಿಗಳು) ಮತ್ತು ಎಂಕೆ ಹುಬ್ಬಳ್ಳಿ ನಗರ ಪ್ರದೇಶಕ್ಕೆ ಬಹುಗ್ರಾಮ ಕುಡಿವ ನೀರು ಸರಬರಾಜು 410 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ದೇಗಾಂವ ಹಾಗೂ ಇತರೆ 16 ಗ್ರಾಮಗಳಿಗೆ (29 ಜನವಸತಿಗಳು), ಖಾನಾಪುರ ತಾಲ್ಲೂಕಿನ 104 ಗ್ರಾಮಗಳಿಗೆ (135 ಜನವಸತಿಗಳು), ಬೆಳಗಾವಿ ತಾಲೂಕಿನ 02 ಗ್ರಾಮಗಳಿಗೆ (02 ಜನವಸತಿಗಳು) ಮತ್ತು ಕಿತ್ತೂರು ನಗರ ಪ್ರದೇಶಕ್ಕೆ, ಬಹುಗ್ರಾಮ ಕುಡಿವ ನೀರು ಸರಬರಾಜು ಯೋಜನೆಗೆ ಡಿಬಿಒಟಿ ಆಧಾರದ ಮೇಲೆ ಒಟ್ಟು ಮೊತ್ತ 565 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಆರ್.ಎಸ್.ನಂ. 597 ಪೈಕಿ 5.92 ಎಕರೆ ರಲ್ಲಿ ಒಟ್ಟು 24,008 ಚ.ಮೀ. ನಾಗರೀಕ ಸೌಲಭ್ಯ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್ತಿಗೆ ಮಂಜೂರು ಮಾಡಲಾಗಿದ್ದು, ಅದಕ್ಕೆ ರಿಯಾಯಿತಿ ದರ ನಿಗದಿಪಡಿಸಲು ಅಸ್ತು.

ಇದನ್ನೂ ಓದಿ: ತಂದೆಯವರ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ನಡೆದುಕೊಳ್ತೇನೆ: ಬಿ.ವೈ. ವಿಜಯೇಂದ್ರ

Last Updated : Jul 23, 2022, 9:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.