ETV Bharat / state

ಆದಾಯ ಕೊರತೆ ಮಧ್ಯೆ ತೆರಿಗೆ ಹೊರೆ ಇಲ್ಲದ ಬಜೆಟ್​ ಸ್ವರೂಪ ಹೇಗಿರಲಿದೆ?

ಸಿಎಂ ಯಡಿಯೂರಪ್ಪ ಆರ್ಥಿಕ ಪರಿಸ್ಥಿತಿಯನ್ನು ತುಲನೆ ಮಾಡಿ ಸರಿಯಾದ ಲೆಕ್ಕ ಹಾಕಿ ನಾಳೆ ಬಜೆಟ್ ಮಂಡಿಸಬೇಕಿದೆ. ಈ ಹಿನ್ನೆಲೆ ಫ್ಲಾನ್​ ಮಾಡಲಾಗಿದೆ ಎಂಬ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

state-budget-2021
ರಾಜ್ಯ ಬಜೆಟ್​
author img

By

Published : Mar 7, 2021, 4:47 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ನಾಳೆ ತಮ್ಮ ಎಂಟನೇ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆ ಮಂಡನೆ ಮಾಡಲಾಗುತ್ತಿರುವ ಬಜೆಟ್​ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಬಹುತೇಕ ಅನುಮಾನವಾಗಿದ್ದು, ಸರಳ, ತೆರಿಗೆ ಹೊರೆ ಇಲ್ಲದ ಇತಿಮಿತಿಯ ಆಯವ್ಯಯವಾಗಿರಲಿದೆ ಎಂಬ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ.

2021-22 ಸಾಲಿನ‌ ಬಜೆಟ್ ಮಂಡನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡನೆ ಮಾಡಲಿರುವ ಸಿಎಂ ಯಡಿಯೂರಪ್ಪಗೆ ಆರ್ಥಿಕ ಸಂಕಷ್ಟ, ಆದಾಯ ಕೊರತೆ ಮಧ್ಯೆ ಜನರಿಗೆ ಹೆಚ್ಚಿನ ಹೊರೆ ಇಲ್ಲದ, ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ಈಗಾಗಲೇ ಸಿಎಂ ಕೊರತೆಯ ಬಜೆಟ್ ಮಂಡನೆಯಾಗುವುದಿಲ್ಲ ಎಂದಿದ್ದಾರೆ. ಆದರೆ ಆದಾಯ ಕೊರತೆ ಇದ್ದರೂ ಕಳೆದ ಬಾರಿಯ ಬಜೆಟ್​ಗಿಂತ ಈ ಬಾರಿ ಬಜೆಟ್ ಗಾತ್ರ ಸ್ವಲ್ಪ ದೊಡ್ಡದಾಗಿರಲಿದೆ ಎಂಬ ಸುಳಿವು ನೀಡಿದ್ದಾರೆ. ವೆಚ್ಚ ಕಡಿತದೊಂದಿಗೆ ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು ನೀಡುವ ಇತಿಮಿತಿಯ ಬಜೆಟ್ ಇರಲಿದೆ ಎಂದು ಹೇಳಲಾಗಿದೆ.

ಎಲ್ಲೆಲ್ಲಿ ತೆರಿಗೆ ಹೆಚ್ಚಳ ಸಾಧ್ಯತೆ:

ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಸಿಎಂ ಯಡಿಯೂರಪ್ಪಗೆ ಜನರ‌ ಮೇಲೆ ಹೆಚ್ಚಿನ ತೆರಿಗೆ ಹೊರೆ ಹಾಕದಿರುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಬಜೆಟ್​ನಲ್ಲಿ ತೆರಿಗೆ ಹೊರೆ ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.ಸಾಮಾನ್ಯವಾಗಿ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ ಆದಾಯ ಕ್ರೋಢೀಕರಣಕ್ಕೆ ಬಜೆಟ್​ನಲ್ಲಿ ಕೈ ಹಾಕಲಾಗುತ್ತದೆ. ಆದರೆ ಈಗಾಗಲೇ ಪೆಟ್ರೋಲ್ ಉತ್ಪನ್ನಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರ ಮೇಲೆ ಬೆಲೆ‌ ಏರಿಕೆಯ ಬರೆ ಬಿದ್ದಿದೆ. ಈ‌ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಮೇಲೆ ಮತ್ತೆ ತೆರಿಗೆ ಹೆಚ್ಚಿಸುವ ಪರಿಸ್ಥಿತಿಯಲ್ಲಿ ಸಿಎಂ ಇಲ್ಲ. ಹೀಗಾಗಿ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸುವ ಆಯ್ಕೆಯನ್ನು ಕೈ ಬಿಡಲಾಗಿದೆ. ಆದರೆ ಇರುವ ತೆರಿಗೆಯನ್ನು ಇಳಿಕೆ ಮಾಡದಿರಲು ನಿರ್ಧರಿಸಿದೆ. ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ. ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ತೆರಿಗೆ ಮೂಲ ಅಬಕಾರಿ ಸುಂಕ. ಆರ್ಥಿಕ ಸಂಕಷ್ಟದ ಮಧ್ಯೆ ಈ ಬಾರಿ ಸರ್ಕಾರದ ಕೈ ಹಿಡಿದಿರುವುದು ಅಬಕಾರಿ ತೆರಿಗೆನೇ. ಹೀಗಾಗಿ ಸೊರಗಿದ ಆದಾಯವನ್ನು ತುಂಬಿಸಲು ಪ್ರತಿಬಾರಿಯಂತೆ ಈ ಬಜೆಟ್​ನಲ್ಲೂ ಅಬಕಾರಿ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇತರ ತೆರಿಗೆ ಮೂಲಗಳಾದ ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ಹೆಚ್ಚಿಸುವ ಸಾಧ್ಯತೆಯೂ ಕಡಿಮೆ ಇದೆ ಎನ್ನಲಾಗಿದೆ. ಎಲ್ಲಾ ಉತ್ಪನ್ನಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದರಿಂದ ಸರ್ಕಾರಕ್ಕೆ ತೆರಿಗೆ ವಿಧಿಸುವ ಅವಕಾಶ ಇಲ್ಲ.

ತೆರಿಗೆಯೇತರ ಆದಾಯಕ್ಕೆ ಹೆಚ್ಚಿನ ಆದ್ಯತೆ:

ಈ ಬಾರಿ ಬಜೆಟ್​ನಲ್ಲಿ ರಾಜ್ಯ ಸ್ವಂತ ತೆರಿಗೆ ಮೂಲಗಳ ಬದಲಾಗಿ ತೆರಿಗೆಯೇತರ ಆದಾಯ ಮೂಲವನ್ನೇ ಸರ್ಕಾರ ನೆಚ್ಚಿಕೊಳ್ಳಲಿದೆ. ಲಾಕ್‌ಡೌನ್​ನಿಂದ ಎಲ್ಲಾ ಕ್ಷೇತ್ರಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ. ಪ್ರಮುಖವಾಗಿ ಸರ್ಕಾರಿ ಭೂಮಿಗಳನ್ನು ಹರಾಜು ಹಾಕಿ, ಆ ಮೂಲಕ ಆದಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ತೆರವಾಗಿರುವ ಒತ್ತುವರಿ ಸರ್ಕಾರಿ ಜಮೀನುಗಳನ್ನು ಹರಾಜು ಹಾಕುವ ಮೂಲಕ ಬೊಕ್ಕಸ ತುಂಬಿಸಲು ನಿರ್ಧರಿಸಲಾಗಿದೆ. ಸುಮಾರು 2.7 ಲಕ್ಷ ಎಕರೆ ಸರ್ಕಾರಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆಯಲಾಗಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 16,148 ಎಕರೆ ಜಮೀನು ಇದೆ. ಜೊತೆಗೆ ಬಿಡಿಎ ಮೂಲೆ ನಿವೇಶನ ಹರಾಜು, ಬಿಡಿಎ ಬಡಾವಣೆಯಲ್ಲಿನ ಕಟ್ಟಡ ಅಕ್ರಮ ಸಕ್ರಮ, ಸಿಎ ನಿವೇಶನ ಮಾರಾಟವನ್ನು ಚುರುಕುಗೊಳಿಸಿ ಆದಾಯ ಸಂಗ್ರಹಕ್ಕೆ ಮುಂದಾಗಿದೆ.

ಪಿಪಿಪಿ ಮಾದರಿಗೆ ಮಣೆ ಹಾಕಲಿರುವ ಸರ್ಕಾರ:

ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಖಾಸಗಿ ಪಾಲುದಾರಿಕೆಯ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ನಷ್ಟದಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸಾಧ್ಯತೆ ಹೆಚ್ಚಿದೆ. ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರದ‌‌‌ ಮೇಲೆ ಹೊರೆ ಕಡಿಮೆಗೊಳಿಸಿ, ಹೆಚ್ಚಿನ ಆದಾಯ ಕ್ರೋಢೀಕರಣ ಮಾಡುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಈ ಬಾರಿ ಪಿಪಿಪಿ ಮಾದರಿಯಡಿ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಸಾಲದ ಮೊರೆ ಹೋಗಲು ನಿರ್ಧಾರ:

ಕೇಂದ್ರ ಸರ್ಕಾರ ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಿರುವ ಕಾರಣ, ಸಿಎಂ ಹೆಚ್ಚಿನ ಸಾಲ ಪಡೆಯುವ ಆಯ್ಕೆಯನ್ನು ಬಳಸಲು ಈಗಾಗಲೇ ನಿರ್ಧರಿಸಿದ್ದಾರೆ.ಆದಾಯ ಮೂಲ ಸೀಮಿತವಾಗಿರುವುದರಿಂದ ಸಾಲದ ಮೊರೆ ಹೋಗಲು ನಿರ್ಧರಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ 3% ರಿಂದ 5%ಗೆ ಸಾಲದ‌ ಮಿತಿಯನ್ನು ಏರಿಕೆ ಮಾಡಿದ್ದು, ಅದರಂತೆ ಹೆಚ್ಚಿನ ಸಾಲ ಪಡೆಯಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.

ಇಲಾಖೆಗಳ ಅನುದಾನ ಕಡಿತ:

ಈ ಬಾರಿಯ ಬಜೆಟ್‌ನಲ್ಲಿ ಹಲವು ಇಲಾಖೆಗ ಅನುದಾನ ಕಡಿತದ ಮುನ್ಸೂಚನೆಯನ್ನು ಬಜೆಟ್ ಪೂರ್ವಬಾವಿ ಸಭೆಯಲ್ಲಿ ನೀಡಲಾಗಿದೆ.ಅದರಂತೆ ಕೆಲ ಇಲಾಖೆಗಳ ಅನುದಾನ ಸುಮಾರು 15-30% ಕಡಿತವಾಗುವ ಸಾಧ್ಯತೆ ಇದೆ. ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಸಕ್ಕರೆ ಇಲಾಖೆ, ಪಶುಸಂಗೋಪನೆ ಇಲಾಖೆಗಳ ಅನುದಾನಕ್ಕೆ ಈ ಬಾರಿಯ ಬಜೆಟ್​ನಲ್ಲಿ ಕತ್ತರಿ ಬೀಳುವ ಸಾಧ್ಯತೆ ಇದೆ. ಅದರ‌ ಜೊತೆಗೆ ಮುಜರಾಯಿ, ಪೌರಾಡಳಿತ ಇಲಾಖೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ,ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅನುದಾನಕ್ಕೂ ಈ ಬಾರಿಯ ಬಜೆಟ್​ನಲ್ಲಿ ಕತ್ತರಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಯೋಜನೆಗಳ ಸಮೀಕರಣಕ್ಕೆ ನಿರ್ಧಾರ:

ಅನಾವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಮಾದರಿಯಂತೆ ರಾಜ್ಯದ ಯೋಜನೆಗಳನ್ನು ಸಮೀಕರಿಸಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯ ಯೋಜನಾ ಮಂಡಳಿ 1745 ರಾಜ್ಯ ಯೋಜನೆಗಳನ್ನು ಸಮೀಕರಿಸಲು ಶಿಫಾರಸು ಮಾಡಿದೆ. ರಾಜ್ಯದಲ್ಲಿ 2020-21ನೇ ಸಾಲಿನ ಬಜೆಟ್​ನಲ್ಲಿ 1863 ಯೋಜನೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಒಂದು ಕೋಟಿಗೂ ಹೆಚ್ಚಿನ ಅನುದಾನಿತ 368 ಯೋಜನೆಗಳಿವೆ.1-10 ಕೋಟಿ ರೂ. ಅನುದಾನಿತ 616 ಯೋಜನೆಗಳು, 10-100 ಕೋಟಿ ರೂ. ಅನುದಾನಿತ 612 ಯೋಜನೆಗಳು ಮತ್ತು 100 ಕೋಟಿ ರೂ‌‌.‌ಮೇಲ್ಪಟ್ಟು ಅನುದಾನಿತ 267 ಯೋಜನೆಗಳಿವೆ. ಒಂದು ಕೋಟಿ ರೂ.ಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದೇ ರೀತಿಯ ಉದ್ದೇಶ ಇದ್ದರೆ ರಾಜ್ಯದ ಯೋಜನೆಗಳಿಗೆ ಸಮೀಕರಿಸಲು ಮುಂದಾಗಿದೆ.

ಸದ್ಯದ ಆರ್ಥಿಕ ಇತಿಮಿತಿ ಏನಿದೆ:

ವಾಣಿಜ್ಯ ತೆರಿಗೆ ಸಂಗ್ರಹವಾಗಿದ್ದು 43,593 ಕೋಟಿ ರೂ. ಬಜೆಟ್ ಅಂದಾಜಿಗಿಂತ 11.22% ಕುಸಿತವಾಗಿದೆ. ಇನ್ನು ಅಬಕಾರಿ ಸುಂಕ ರೂಪದಲ್ಲಿ 18,956 ಕೋಟಿ ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ 5% ವೃದ್ಧಿಯಾಗಿದೆ.ಮೋಟಾರು ವಾಹನ‌ ತೆರಿಗೆ ರೂಪದಲ್ಲಿ ಈವರೆಗೆ 4300 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, 24% ಆದಾಯ ಕುಸಿತವಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕದ ರೂಪದಲ್ಲಿ ಸುಮಾರು 7800 ಕೋಟಿ ರೂ. ಸಂಗ್ರಹವಾಗಿದ್ದು,ಕಳೆದ ಬಾರಿಗಿಂತ 15% ಕುಸಿತ ಕಂಡಿದೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ಸುಮಾರು 10% ಕುಸಿತವಾಗಿದೆ.ಸರ್ಕಾರದ ಸ್ವಂತ ತೆರಿಗೆ ರೂಪದಲ್ಲಿ ಈ ಬಾರಿ ಸುಮಾರು 34,000 ಕೋಟಿ ರೂ. ಕೊರತೆಯಾಗಲಿದ್ದು, ಒಟ್ಟು ರಾಜಸ್ವ ಸಂಗ್ರಹದಲ್ಲಿ ಸುಮಾರು 63,700 ಕೋಟಿ ರೂ. ಕೊರತೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.