ETV Bharat / state

ಸತೀಶ್ ಜಾರಕಿಹೊಳಿ‌ ರಾಜಕೀಯ ಜೀವನ ಮುಗಿಸಲು ಟಿಕೆಟ್ ನೀಡಲಾಗಿದೆ : ಬಿಜೆಪಿ ಟ್ವೀಟ್ - ರಾಹುಲ್ ಗಾಂಧಿ

ಮಲ್ಲಿಕಾರ್ಜುನ ಖರ್ಗೆಯವರೇ ನೀವು ಹಾಸ್ಯದ ವಿಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ಸರಿಗಟ್ಟುವ ಪ್ರಯತ್ನ ಮಾಡುತ್ತಿದ್ದೀರಾ? ಬೀದಿಗೆ ಬಿದ್ದಿರುವ ಪಕ್ಷದ ಮಾಜಿ ಅಧ್ಯಕ್ಷನಿಂದ ಬಿಜೆಪಿಗೆ ಭಯ ಉಂಟಾಗುತ್ತಿದೆ ಅನ್ನೋದು ದೊಡ್ಡ ಭ್ರಮೆ..

bjp-tweeted
ಬಿಜೆಪಿ ಟ್ವೀಟ್
author img

By

Published : Apr 12, 2021, 8:10 PM IST

ಬೆಂಗಳೂರು : ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಅವರ ರಾಜಕೀಯ ಜೀವನವನ್ನೇ ಮುಗಿಸಲು ಸಂಚು ನಡೆಸಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

  • ಕಲ್ಯಾಣ ಕರ್ನಾಟಕ ವಿರೋಧಿ @kharge ಅವರೇ,

    ಈ ನಿಯಮ ನಕಲಿ ಗಾಂಧಿ ಕುಟುಂಬಕ್ಕೆ ಅನ್ವಯ ಆಗುತ್ತದೆಯೇ?

    ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಮಹಾತ್ಮ ಆಗಲಾರರು! pic.twitter.com/9WFuPYS2UW

    — BJP Karnataka (@BJP4Karnataka) April 12, 2021 " class="align-text-top noRightClick twitterSection" data=" ">

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮೂರು ಹೋಳುಗಳಾಗಿ ಅಧೋಗತಿಗೆ ತಲುಪಿದೆ. ಡಿಕೆಶಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪಕ್ಷದಲ್ಲಿ ಪ್ರಭಾವಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ಸತೀಶ್ ಜಾರಕಿಹೊಳಿ ರಾಜಕೀಯ ಜೀವನವನ್ನು ಮುಗಿಸಲು ಕಾಂಗ್ರೆಸ್ ಹೂಡಿರುವ ಸಂಚು ಇದಾಗಿದೆ ಎಂದು ಆರೋಪಿಸಿದೆ.

ಮಲ್ಲಿಕಾರ್ಜುನ ಖರ್ಗೆಯವರೇ ನೀವು ಹಾಸ್ಯದ ವಿಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ಸರಿಗಟ್ಟುವ ಪ್ರಯತ್ನ ಮಾಡುತ್ತಿದ್ದೀರಾ? ಬೀದಿಗೆ ಬಿದ್ದಿರುವ ಪಕ್ಷದ ಮಾಜಿ ಅಧ್ಯಕ್ಷನಿಂದ ಬಿಜೆಪಿಗೆ ಭಯ ಉಂಟಾಗುತ್ತಿದೆ ಅನ್ನೋದು ದೊಡ್ಡ ಭ್ರಮೆ.

  • Dear @rssurjewala

    ನಿಮ್ಮ @INCKarnataka ಪಕ್ಷದ ಸರ್ಕಾರವಿದ್ದಾಗ ಮಾಡಿದ ಘನ ಕಾರ್ಯಗಳನ್ನು ಒಮ್ಮೆ ಕೇಳಿ ತಿಳಿದುಕೊಳ್ಳಿ.

    ☑️ವೀರಶೈವ, ಲಿಂಗಾಯತ ಎಂದು ಧರ್ಮಾಗ್ನಿ ಹಚ್ಚಿದರು.
    ☑️ದಲಿತರು ಮೇಲ್ವರ್ಗದವರು ಎಂಬ ಕಂದಕ ಸೃಷ್ಟಿಸಿದರು.
    ☑️ಸಮುದಾಯ ಆಧಾರಿತ ಭಾಗ್ಯ ಕರುಣಿಸಿದರು.
    ☑️ಹಿಂದೂಗಳಿಗೆ ಹತ್ಯಾಭಾಗ್ಯ ನೀಡಿದರು. pic.twitter.com/dYtPPzH3N8

ವಾಸ್ತವದಲ್ಲಿ ರಾಹುಲ್‌ ಗಾಂಧಿ ಅವರಿಂದ ನಮಗೆ ಲಾಭವೇ ಜಾಸ್ತಿ, ಆತ ಹೋದಲ್ಲೆಲ್ಲ ಕಾಂಗ್ರೆಸ್‌ ನೆಲಕಚ್ಚುತ್ತಿದೆ ಎಂದು ಖರ್ಗೆಗೆ ಟ್ವೀಟ್ ಮೂಲಕ ಬಿಜೆಪಿ ಟಾಂಗ್ ನೀಡಿದೆ. ರಾಜ್ಯದಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮಾಡಿದ ಘನ ಕಾರ್ಯಗಳನ್ನು ಒಮ್ಮೆ ಕೇಳಿ ತಿಳಿದುಕೊಳ್ಳಿ.

• ವೀರಶೈವ, ಲಿಂಗಾಯತ ಎಂದು ಧರ್ಮಾಗ್ನಿ ಹಚ್ಚಿದರು.
• ದಲಿತರು ಮೇಲ್ವರ್ಗದವರು ಎಂಬ ಕಂದಕ ಸೃಷ್ಟಿಸಿದರು.
• ಸಮುದಾಯ ಆಧಾರಿತ ಭಾಗ್ಯ ಕರುಣಿಸಿದರು.
• ಹಿಂದೂಗಳಿಗೆ ಹತ್ಯಾಭಾಗ್ಯ ನೀಡಿದರು ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.