ETV Bharat / state

ಬಿಟ್ ಕಾಯಿನ್ ಹಗರಣವು ಸಿಂಪಲ್ ಐಪಿಸಿ ಕೇಸ್ ಅಲ್ಲ: ಕಾಂಗ್ರೆಸ್​ ನ್ಯಾಯಾಂಗ ತನಿಖೆ ಬೇಡಿಕೆಗೆ ಬಿಜೆಪಿ ಟಾಂಗ್ - ಬಿಟ್ ಕಾಯಿನ್ ಹಗರಣದ ಬಗ್ಗೆ ರಾಜೀವ್​ ಪ್ರತಿಕ್ರಿಯೆ

ಬಿಟ್​ ಕಾಯಿನ್​ ಪ್ರಕರಣದಲ್ಲಿ(Karnataka bitcoin case) ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರುವುದಾದರೆ ನನ್ನದೇನು ಅಭ್ಯಂತರವಿಲ್ಲ, ಆದರೆ ನ್ಯಾಯಾಂಗ ತನಿಖೆ ಮಾಡಲು ಅಷ್ಟು ಇಕ್ವಿಪ್ಟೆಂಟ್ ಇದೆಯಾ? ಇದು ಸಿಂಪಲ್ ಐಪಿಸಿ ಕೇಸ್ ಅಲ್ಲ. ಭಾರತೀಯ ದಂಡ ಸಂಹಿತೆಯ ಅಪರಾಧಗಳ ಅಡಿ ಬರುವ ಪ್ರಕರಣವಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್ ಹೇಳಿದ್ದಾರೆ.

state-bjp-spokesperson-p-rajeev-press-meet-on-bitcoin-scam
ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್
author img

By

Published : Nov 19, 2021, 10:05 AM IST

ಬೆಂಗಳೂರು: ಬಿಟ್ ಕಾಯಿನ್ ಹಗರಣ (bitcoin Scam) ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಕಾಂಗ್ರೆಸ್ ಬೇಡಿಕೆಯನ್ನು ಬಿಜೆಪಿ ಟೀಕಿಸಿದೆ. ಇದು ಸಿಂಪಲ್ ಐಪಿಸಿ ಕೇಸ್ ಅಲ್ಲ, ನೂರಾರು ಜನ ಸಾಫ್ಟ್‌ವೇರ್ ಇಂಜಿನಿಯರ್​​​ಗಳು ಕೆಲಸ ಮಾಡುವ ಪ್ರತಿಷ್ಠಿತ ಕಂಪನಿಗಳ ಪಾಸ್​​ವರ್ಡ್ ಹ್ಯಾಕ್ ಮಾಡುವ ಶ್ರೀಕಿ ಕೇಸ್​​ ತನಿಖೆ ನಡೆಸಲು ನ್ಯಾಯಾಂಗ ತನಿಖೆಯಿಂದ ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ಬೇಡಿಕೆಗೆ ಬಿಜೆಪಿ(BJP) ತಿರುಗೇಟು ನೀಡಿದೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್(P rajeev), ಪೊಲೀಸ್ ಇಲಾಖೆಗೆ ಇಂತಹ ಹ್ಯಾಕರ್ಸ್​​​​​ ಇಂಟ್ರಾಗೇಟ್ ಮಾಡಲು ತರಬೇತಿ ನೀಡಿಲ್ಲ. ಹಾಗಾಗಿ ನಮ್ಮ ಪೊಲೀಸರು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್, ಇ-ಗವರ್ನೆನ್ಸ್ ಸೈಬರ್ ತಜ್ಞರ ಸಂಸ್ಥೆ, ಸೈಬರ್ ಐಟಿ ಟೆಕ್ನಾಲಜಿ ಸಂಸ್ಥೆ, ಎನ್‌ಸಿಬಿ, ಎನ್‌ಐಎ, ವಾಣಿಜ್ಯ ತೆರಿಗೆ ಇಲಾಖೆ, ದೆಹಲಿ ಪೊಲೀಸ್, ಒಡಿಶಾ ಪೊಲೀಸ್, ಚೆನ್ನೈ ಪೊಲೀಸ್, ಹಲವಾರು ಸಂಸ್ಥೆಗಳಲ್ಲಿ ತಜ್ಞರಾಗಿದ್ದವರ ಸಹಕಾರ ತೆಗೆದುಕೊಂಡಿದ್ದಾರೆ. ಈ ತನಿಖೆ ಮಾಡುವುದು ಅಷ್ಟು ಸುಲಭವಲ್ಲ ಎಂದರು.

ಸಿದ್ದುಗೆ ಪಿ ರಾಜೀವ್​ ಟಾಂಗ್​

ಈಗ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಎಲ್ಲ ಸಂಸ್ಥೆಗಳ ಉದ್ದೇಶ ಸತ್ಯ ಹೊರಗೆ ತೆಗೆಯುವುದು ಎನ್ನುವುದೇ ಆಗಿದೆ. ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರುವುದಾದರೆ ನನ್ನದೇನು ಅಭ್ಯಂತರವಿಲ್ಲ, ಆದರೆ, ನ್ಯಾಯಾಂಗ ತನಿಖೆ ಮಾಡಲು ಅಷ್ಟು ಇಕ್ವಿಪ್ಟೆಂಟ್ ಇದೆಯಾ? ಇದು ಸಿಂಪಲ್ ಐಪಿಸಿ ಕೇಸ್ ಅಲ್ಲ. ಭಾರತೀಯ ದಂಡ ಸಂಹಿತೆಯ ಅಪರಾಧಗಳ ಅಡಿ ಬರುವ ಪ್ರಕರಣವಲ್ಲ ಎಂದು ಪ್ರತಿಪಕ್ಷ ಸಿದ್ದರಾಮಯ್ಯಗೆ(Siddaramaiah) ಬೇಡಿಕೆಗೆ ಟಾಂಗ್ ನೀಡಿದ್ದಾರೆ.

ಇ - ಪ್ರಕ್ಯೂರ್​​ಮೆಂಟ್ ಹ್ಯಾಕ್ ಮಾಡುತ್ತಾರೆ ಎಂದರೆ?

ಸರ್ಕಾರದ ಇ - ಪ್ರಕ್ಯೂರ್​​ಮೆಂಟ್ ಹ್ಯಾಕ್ ಮಾಡುತ್ತಾರೆ ಎಂದರೆ, ಇದರ ಗಂಭೀರತೆ ಹೇಗಿದೆ ನೋಡಿ, ಶ್ರೀಕಿ ಪ್ರತಿಷ್ಠಿತ ಕಂಪನಿಗಳ ಪಾಸ್​​ವರ್ಡ್ ಹ್ಯಾಕ್ ಮಾಡುತ್ತಿದ್ದ. ನಂತರ ಅವರಿಗೆ ಕರೆ ಮಾಡಿ ಹ್ಯಾಕ್ ಮಾಡಿರುವ ಮಾಹಿತಿ ನೀಡುತ್ತಿದ್ದ. ಆದರೆ, ಕಂಪನಿ ನಂಬುತ್ತಿರಲಿಲ್ಲ, ನಮ್ಮ ಕಂಪನಿಯ ಪಾಸ್​​ವರ್ಡ್ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಅವರು ನಿರ್ಲಕ್ಷ್ಯ ಮಾಡುತ್ತಿದ್ದರು.

ಆದರೆ, ಸಾವಿರಾರು ಜನ ಸಾಫ್ಟ್​ವೇರ್ ಇಂಜಿನಿಯರ್​​ಗಳು ಕೆಲಸ ಮಾಡುತ್ತಿದ್ದ ಕಂಪನಿಯ ಪಾಸ್​​ವರ್ಡ್ ಅ​​ನ್ನು ಇವನು ಹ್ಯಾಕ್ ಮಾಡುತ್ತಿದ್ದ. ಪಾಸ್​​ವರ್ಡ್ ಹ್ಯಾಕ್ ಆಗಿದೆ ಎಂದು ಗೊತ್ತಾದ ಬಳಿಕ ಇವನನ್ನು ಹುಡುಕಿಕೊಂಡು ಬಂದು ಕೈಕಾಲು ಹಿಡಿದು ಹಣ ನೀಡಿ ಸರಿಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಹ್ಯಾಕ್​ ಆದವರು ದೂರು ನೀಡಿಲ್ಲ

ಪಾಸ್​​ವರ್ಡ್ ಹ್ಯಾಕ್​​ಗೆ ಒಳಗಾದ ಈ ಕಂಪನಿಗಳು ಕೂಡ ಪೊಲೀಸ್ ದೂರು ನೀಡಲಿಲ್ಲ, ಸಾರ್ವಜನಿಕರ ಜವಾಬ್ದಾರಿಯೂ ಇದೆ. ಅವರೆಲ್ಲ ಬಂದು ದೂರು ಕೊಡಬೇಕಿತ್ತು. ನೂರಾರು ಜನ ಇಂಜಿನಿಯರ್ ಕೆಲಸ ಮಾಡುವ ಸಾಫ್ಟ್​ವೇರ್ ಕಂಪನಿಯ ಪಾಸ್​​ವರ್ಡ್​ನ್ನೇ ಹ್ಯಾಕ್ ಮಾಡುತ್ತಾನೆಂದರೆ, ಇದರ ತನಿಖೆಗೆ ನ್ಯಾಯಾಂಗ ತನಿಖೆಯಿಂದ ಸಾಧ್ಯವಾ? ಎಂದು ಸಿದ್ದರಾಮಯ್ಯರ ಬೇಡಿಕೆಗೆ ರಾಜೀವ್ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆ: ಕಟ್ಟಡ ಕುಸಿತ, ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.