ಬೆಂಗಳೂರು: ಮಸೀದಿಗಳ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯ ಆದರೆ ನಾವು ಸುಮ್ಮನಿರಲ್ಲ. ಮಂದಿರ, ಚರ್ಚ್, ಸಾರ್ವಜನಿಕ ಕಾರ್ಯಕ್ರಮಕ್ಕೆ ಇಷ್ಟೇ ಸೌಂಡ್ ಇರಬೇಕು ಎನ್ನುವ ನಿಯಮ ಇದೆ. ನಿಯಮದಂತೆ ಬಳಕೆ ಮಾಡಿದರೆ ನಮ್ಮ ವಿರೋಧ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ, ವಿದ್ಯಾರ್ಥಿಗಳಿಗೆ, ರೀಸರ್ಚ್ ಸೆಂಟರ್‌ಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಶಬ್ದ ಮಾಲಿನ್ಯ ಆದರೆ ನಾವು ಸುಮ್ಮನಿರಲ್ಲ ಎಂದರು.
ಇನ್ನು, ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಇಂದು ಕೊನೆ ಇರಬಹುದು. ಅದರಿಂದ ಅವರಿಗೆ ಧಣಿವಾಗುತ್ತದೆಯೇ ಹೊರತು ಯಾವುದೇ ಲಾಭ ಇಲ್ಲ. ಇದರಲ್ಲಿ ಯಾವುದೇ ಸತ್ವ ಇಲ್ಲ. ಯಾವುದೇ ಸಮಸ್ಯೆ ಇಟ್ಟುಕೊಂಡು ಜೋಡೋ ಯಾತ್ರೆ ಮಾಡಿಲ್ಲ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಜೋಡೋ ಯಾತ್ರೆ ನಂತರ ರಾಜಸ್ಥನದಲ್ಲಿ ಕೂಡ ಹೋಗಲಿದೆ. ನಾನು ರಾಹುಲ್ ಗಾಂಧಿಗೆ ಸವಾಲ್ ಹಾಕ್ತೀನಿ ಗುಜರಾತ್ನಲ್ಲಿ ಎರಡನೇ ಸ್ಥಾನಕ್ಕೆ ಬನ್ನಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.
ಇದನ್ನೂ ಓದಿ : ಶಾಲಾ ಶ್ರೇಯೋಭಿವೃದ್ಧಿಗೆ ಹಣ ಸಂಗ್ರಹ.. ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಹೆಚ್ ವಿಶ್ವನಾಥ್ ಆಗ್ರಹ