ಬೆಂಗಳೂರು : ಗಿರಿಜಮ್ಮ, ರಾಜು, ರಘುವರನ್, ಸುರೇಶ್, ಲಿಂಗರಾಜು, ಸ್ಟೀಫನ್, ಮಣಿಕಂಠನ್, ಸತೀಶ್, ರಾಜೇಶ್ ಅಬ್ದುಲ್ ಸಮ್ಮದ್, ಸತೀಶ ಎಂಬ ರಾಜ್ಯ ಅಂತರ್ ರಾಜ್ಯ ದರೋಡೆಕೋರರ ಬಂಧನ ಮಾಡುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಭಾವತಿ ಮತ್ತು ನರಸಮ್ಮ ಎಂಬುವವರು ಮನೆಯಲ್ಲಿ ಇಬ್ಬರೇ ಹೆಂಗಸರು ಇರುವುದನ್ನ ಗಮನಿಸಿದ ಖದೀಮರು ಮನೆಗೆ ಎಂಟ್ರಿ ಕೊಟ್ಟು ನಗದು, ಚಿನ್ನಾಭರಣ ಲೂಟಿ ಮಾಡಿದ್ದರು.
ಹೀಗಾಗಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ ತಂಡ ರಚನೆ ಮಾಡಿದ್ದರು. ಪೊಲೀಸರ ತಂಡ ಹುಡುಕಾಟ ನಡೆಸಿದಾಗ ಆರೋಪಿಗಳು ದಕ್ಷಿಣಾ ವಿಭಾಗ ವ್ಯಾಪ್ತಿಯಲ್ಲಿ ಅಡಗಿ ಕೂತಿರುವ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ ನಗದು, ಚಿನ್ನಾಭರಣ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.