ಬೆಂಗಳೂರು : ಮುಂದಿನ ವರ್ಷಗಳಲ್ಲಿ ಸ್ಟಾರ್ಟ್ ಅಪ್ಗಳೇ ದೇಶದ ಆರ್ಥಿಕತೆ ನಡೆಸುತ್ತವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಏರೋ ಇಂಡಿಯಾ 2021ರ ಸ್ಟಾರ್ಟ್ ಅಪ್ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಪಿನ್ ರಾವತ್ ಅವರು ಐ ಡೆಕ್ಸ್ ಸ್ಟಾರ್ಟ್ ಅಪ್ಗೆ ಕೇಂದ್ರದಿಂದ ಬರುತ್ತಿರುವ ಹಣ ಕಡಿಮೆ ಎಂದರು. ಇದು ನನ್ನ ಮನಸ್ಸು ಮುಟ್ಟಿತು. ಈಗ 4.71 ಲಕ್ಷ ಉದ್ಯೋಗ 41,000 ಸ್ಟಾರ್ಟ್ ಅಪ್ ಸೃಷ್ಟಿ ಮಾಡಿವೆ. ನಮ್ಮ ಆರ್ಥಿಕತೆಯನ್ನು ಸ್ಟಾರ್ಟ್ ಅಪ್ಗಳು ಮುಂದೆ ನಡೆಸುತ್ತವೆ. ಸರ್ಕಾರದಿಂದ ಸ್ಟಾರ್ಟ್ ಅಪ್ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಐ ಡೆಕ್ಸ್ ಸ್ಥಾಪನೆ ಮಾಡಲಾಗಿದೆ ಎಂದರು.
ಸ್ಟಾರ್ಟ್ ಅಪ್ಗಳ ಆವಿಷ್ಕಾರ ರಕ್ಷಣಾ ಇಲಾಖೆಗೆ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಸ್ಟಾರ್ಟ್ ಅಪ್ ಮಂಥನ ವಾರ್ಷಿಕ ಸಮಾರಂಭ ಆಗಿದ್ದು, ರಕ್ಷಣಾ ಇಲಾಖೆಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣ ಒದಗಿಸುತ್ತದೆ. ಈ ಸಮಾರಂಭದಲ್ಲಿ ರಕ್ಷಣಾ ಇಲಾಖೆ ಹಾಗೂ ಸ್ಟಾರ್ಟ್ ಅಪ್ಗಳ ಪರಿಚಯ ಸಾಧ್ಯ.
ಇದರಿಂದ ಆತ್ಮ ನಿರ್ಭರ್ ಭಾರತ ಸಾಧಿಸಲು ಸಹಕಾರಿಯಾಗಿದೆ. ಸುಮಾರು 1,200 ಕ್ಕೂ ಹೆಚ್ವು ಸ್ಟಾರ್ಟ್ ಅಪ್ಗಳು ಈ ಮಂಥನದಲ್ಲಿ ಭಾಗವಹಿಸಿ 60ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿಗೆ ಹೂಡಿಕೆ ಕೂಡ ಸಿಕ್ಕಿದೆ. ಪ್ರತಿ ಸ್ಟಾರ್ಟ್ ಅಪ್ಗಳಿಗೆ 1.5 ಕೋಟಿ ಹೂಡಿಕೆ ಇಲಾಖೆ ನೀಡಿದೆ ಎಂದರು.
ಓದಿ: ರೆಪೋ ದರದಲ್ಲಿ ಮತ್ತೆ ಯಥಾಸ್ಥಿತಿ ಕಾಯ್ದಿರಿಸಿದ ಆರ್ಬಿಐ..
ಏರೋ ಸ್ಪೇಸ್ ವಲಯದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಕೆಲಸ ಮಾಡುತ್ತಿದ್ದು, 10ಕ್ಕೂ ಹೆಚ್ಚು ಸಂಸ್ಥೆಗಳು 10 ಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಏರೋ ಇಂಡಿಯಾದಲ್ಲಿ ಭಾಗವಿಸಿರುವ ಎಂಎಸ್ಎಂಇಗಳಲ್ಲಿ 45 ಎಂಎಸ್ಎಂಇಗಳು ವಿದೇಶಿ ಸಂಸ್ಥೆಗಳೊಂದಿಗೆ 203 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿವೆ ಎಂದರು.
ಬಳಿಕ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮಾತನಾಡಿ, ಸ್ಟಾರ್ಟ್ ಅಪ್ ಆವಿಷ್ಕಾರಗಳು ಹೆಮ್ಮೆ ತರುತ್ತದೆ. ಇಂದು ಐಟಿ ಸೇವೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ಗಳು ಜಗತ್ತನ್ನು ಸಮಾನ ಮಾಡಿದೆ. ಐ ಡೆಕ್ಸ್ ಸಂಸ್ಥೆ ಎಲ್ಲಾ ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಿ ಜಗತ್ತಿನ ಗಮನ ಸೆಳೆದಿದೆ. ಪ್ರಸ್ತುತವಾಗಿ 1,200 ಸ್ಟಾರ್ಟ್ ಅಪ್ಗಳು ರಕ್ಷಣಾ ಇಲಾಖೆಗೆ ಕೆಲಸ ಮಾಡುತ್ತಿದೆ.
ಎಲ್ಲರಿಗೂ 2020 ವರ್ಷ ಸವಾಲುಗಳನ್ನು ಎದುರಿಸುತ್ತಿದ್ದರೆ, ಸ್ಟಾರ್ಟ್ ಅಪ್ ಯುವಕರು ಆವಿಷ್ಕಾರಕ್ಕೆ ಒತ್ತು ನೀಡಿದರು. 34 ಬಿಲಿಯನ್ ಡಾಲರ್ ಡೀಲ್ಗಳನ್ನು 2020 ರಲ್ಲಿ ಸ್ಟಾರ್ಟ್ ಅಪ್ಗಳು ಒಪ್ಪಂದಗಳಿಗೆ ಸಹಿ ಹಾಕಿದೆ. ಆತ್ಮ ನಿರ್ಭರ್ ಭಾರತ ಯೋಜನೆಯಡಿಯಲ್ಲಿ ಐ ಡೆಕ್ಸ್ನಿಂದ ಒಪ್ಪಿಗೆ ಪಡೆದ ಎಲ್ಲಾ ಉಪಕರಣಗಳನ್ನು ರಕ್ಷಣಾ ಇಲಾಖೆ ಖರೀದಿಸಬಹುದು ಎಂದು ಸುಧಾರಣಾ ಕ್ರಮ ಬಂದಿದೆ. ಇದರಿಂದ ಸ್ಟಾರ್ಟ್ ಅಪ್ಗಳಿಗೆ ಸಂತಸ ತಂದಿದೆ ಎಂದರು.