ಬೆಂಗಳೂರು: ಮಹತ್ವದ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಗೆ ಕೆಲ ಸಚಿವರು ಗೈರಾಗಿದ್ದು, ಬಹುತೇಕರು ಹಾಜರಾಗಿದ್ದಾರೆ.
ಓದಿ: ಇಂದು ಸಂಜೆ ಸಚಿವ ಸಂಪುಟ ಸಭೆ: ಖಾತೆ ಬದಲಾವಣೆ ಬಗ್ಗೆ ಅಸಮಾಧಾನ ಸ್ಫೋಟ?
ವಲಸಿಗರ ಪೈಕಿ ಎಸ್.ಟಿ. ಸೋಮಶೇಖರ್, ಆನಂದ್ ಸಿಂಗ್, ಶಿವರಾಮ ಹೆಬ್ಬಾರ್, ನಾರಾಯಣಗೌಡ, ಆರ್. ಶಂಕರ್ ಸಭೆಗೆ ಆಗಮಿಸಿದ್ದಾರೆ.
ಗೈರು: ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಎಂ.ಟಿ.ಬಿ. ನಾಗರಾಜ್, ಸಂಪುಟ ಸಭೆಗೆ ಗೈರಾಗಿದ್ದಾರೆ. ಸಿಎಂ ಜತೆಯಲ್ಲಿ ಸಂಪುಟ ಸಭೆಗೆ ಡಿಸಿಎಂ ಗೋವಿಂದ ಕಾರಜೋಳ, ಆರ್.ಅಶೋಕ್, ವಿ. ಸೋಮಣ್ಣ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಡಿಸಿಎಂ ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ ಆಗಮಿಸಿದರು. ನಂತರ ಸಚಿವ ಜಗದೀಶ್ ಶೆಟ್ಟರ್, ಸಿ.ಪಿ.ಯೋಗೇಶ್ವರ್ ಹಾಜರಾದರು.
ಸಚಿವರಾದ ಅಶೋಕ್, ಬಸವರಾಜ ಬೊಮ್ಮಾಯಿ ಸ್ವಲ್ಪ ಹೊತ್ತು ವಲಸಿಗರಿಗಾಗಿ ಹೊರಗೆ ಕಾದು ಮತ್ತೆ ಸಂಪುಟ ಸಭೆಗೆ ತೆರಳಿದರು. ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿರುವುದರಿಂದ ರಮೇಶ್ ಜಾರಕಿಹೊಳಿ ಹಾಗೂ ಸ್ವಕ್ಷೇತ್ರದಲ್ಲಿ ಕಾರ್ಯಕ್ರಮ ಇರುವ ಕಾರಣ ಜೆ.ಸಿ. ಮಾಧುಸ್ವಾಮಿ ಸಭೆಗೆ ಬಂದಿರಲಿಲ್ಲ. ದೂರವಾಣಿ ಕರೆಗೂ ಅಸಮಾಧಾನಿತ ಸಚಿವರು ಸ್ಪಂದಿಸಲಿಲ್ಲ ಎನ್ನಲಾಗ್ತಿದೆ.