ಬೆಂಗಳೂರು: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕೊರೊನಾ ಆತಂಕದ ನಡುವೆಯು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 21ರಿಂದ 29 ರವರೆಗೆ 772 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶಾಲಾ ಅಭ್ಯರ್ಥಿಗಳು 3354, ಪುನರಾವರ್ತಿತ 1,93,370, ಖಾಸಗಿ 1759, ಪುನರಾವರ್ತಿತ ಖಾಸಗಿ 15,472 ಜನ ಪರೀಕ್ಷೆ ಬರೆದಿದ್ದರು.
ಉತ್ತರ ಪತ್ರಿಕೆಗಳ ಮೌಲ್ಯಮಾಪಕ್ಕೆ ಅಕ್ಟೋಬರ್ 7ರಿಂದ 13ರ ವರೆಗೆ 84 ಮೌಲ್ಯಮಾಪನ ಕೇಂದ್ರಗಳಲ್ಲಿ 13,834 ಮೌಲ್ಯಮಾಪಕರನ್ನು ನಿಯೋಜಿಸಲಾಗಿತ್ತು. ಇಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು kseeb.kar.nic.in ಅಥವಾ karresults.nic.in ನಲ್ಲಿ ಪರೀಕ್ಷಾ ಫಲಿತಾಂಶ ನೋಡಬಹುದು.
ಈ ಬಾರಿ 2,13,955 ವಿದ್ಯಾರ್ಥಿಗಳಲ್ಲಿ 1,09,719 ಪಾಸ್ ಆಗಿದ್ದು, 51.28% ಫಲಿತಾಂಶ ಬಂದಿದೆ. ಇದರಲ್ಲಿ ಬಾಲಕರ ಫಲಿತಾಂಶ-ಶೇ.48.56 ರಷ್ಟು ಹಾಗೂ ಬಾಲಕಿಯರ ಫಲಿತಾಂಶ-ಶೇ.55.96 ರಷ್ಟು ಇದೆ. ನಗರ ಪ್ರದೇಶ- ಶೇ. 48.25%, ಗ್ರಾಮೀಣ ಪ್ರದೇಶ- ಶೇ.54.21% ಫಲಿತಾಂಶ ಬಂದಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿಗಾಗಿ ಅಕ್ಟೋಬರ್ 17 ರಿಂದ 21 ರ ವರೆಗೆ ಅರ್ಜಿ ಸಲ್ಲಿಸಬಹುದು. ಮರುಎಣಿಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ರಿಂದ 28 ರವರೆಗೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20-29ರವರೆಗೆ ದಿನಾಂಕ ನಿಗದಿಪಡಿಸಲಾಗಿದೆ.