ETV Bharat / state

ಮಕ್ಕಳಿಗೂ ಲಸಿಕೆ ಶುರು.. ಮೊದಲ ಲಸಿಕೆ ಪಡೆದ ಕೀರ್ತಿ ಕೊಕಾಟಿ - ಮೊದಲ ಲಸಿಕೆ ಪಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

ಭೈರವೇಶ್ವರ ನಗರದ ಪಾಲಿಕೆ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಎಸ್ಎಸ್ಎಲ್​​​ಸಿ ವಿದ್ಯಾರ್ಥಿನಿ ಕೀರ್ತಿ ಕೊಕಾಟಿ ಪ್ರಥಮವಾಗಿ ಲಸಿಕೆ ಪಡೆದರು. ಈ ಮೂಲಕ ಮಕ್ಕಳಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.

SSLC student Keerthi kokati take the first vaccine
ಮೊದಲ ಲಸಿಕೆ ಪಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಕೀರ್ತಿ ಕೊಕಾಟಿ
author img

By

Published : Jan 3, 2022, 12:38 PM IST

Updated : Jan 3, 2022, 1:35 PM IST

ಬೆಂಗಳೂರು: ಇಂದಿನಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಿದ್ದು, ಭೈರವೇಶ್ವರ ನಗರದ ಪಾಲಿಕೆ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಎಸ್ಎಸ್ಎಲ್​​​ಸಿ ವಿದ್ಯಾರ್ಥಿನಿ ಕೀರ್ತಿ ಕೊಕಾಟಿಗೆ ಪ್ರಥಮವಾಗಿ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೊದಲ ಲಸಿಕೆ ಪಡೆದ ವಿದ್ಯಾರ್ಥಿ ನಿ ಕೀರ್ತಿ ಕೊಕಾಟಿ

ನಾನೇ ಪ್ರಥಮವಾಗಿ ಲಸಿಕೆ ಹಾಕಿಸಿಕೊಂಡೆ. ಇದರಿಂದ ತುಂಬಾ ಖುಷಿಯಾಗುತ್ತಿದೆ. ಕೋವಿಡ್​ನಿಂದ ಸುರಕ್ಷಿತವಾಗಿರಬಹುದು ಎಂದು ಅಪ್ಪ -ಅಮ್ಮನಿಗೂ ಖುಷಿಯಾಗಿದೆ. ಇನ್ನೂ ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸುತ್ತೇನೆ. ಲಸಿಕೆ ಹಾಕುವಾಗ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲರೂ ಹಾಕಿಸಿಕೊಳ್ಳಬೇಕು ಎಂದು ಲಸಿಕೆ ಪಡೆದು ವಿದ್ಯಾರ್ಥಿನಿ ಕೀರ್ತಿ ಕೊಕಾಟಿ ಕಿವಿ ಮಾತು ಹೇಳಿದರು.

ಸಾಂಕೇತಿಕವಾಗಿ ಮೊದಲ ಡೋಸ್ ಪಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು :

1. ಕೀರ್ತಿ ಕೊಕಾಟಿ(16 ವರ್ಷ)

2. ಅನ್ವರ್ ಲಾಲ್ಮಿಯ(16 ವರ್ಷ)

3. ಲಾವಣ್ಯ(16 ವರ್ಷ)

4. ಮೊಹ್ಮದ್ ಅಫ್ ನಾನ್(16 ವರ್ಷ)

5. ಪ್ರಶಾಂತ್.ಜಿ.ಎಲ್( 16 ವರ್ಷ)

6. ರಾಹುಲ್ ಆನಂದ್ ಬಡಿಗೇರ್( 16 ವರ್ಷ )

7. ಪ್ರತುಶಾ(16 ವರ್ಷ)

8. ವಿಶ್ವಾರಾಧ್ಯ(16 ವರ್ಷ)

ಬಿಬಿಎಂಪಿ ವ್ಯಾಪ್ತಿಯಲ್ಲಿ 15-18 ವರ್ಷದೊಳಗಿನವರಿಗೆ ಇಂದಿನ ಲಸಿಕಾಕರಣದ ವಿವರ

ಶಾಲಾ-ಕಾಲೇಜುಗಳ ಸಂಖ್ಯೆ: 255

ಲಸಿಕಾಕರಣ ಗುರಿ: 62,706

ಎಸ್​ಎಸ್​ಎಲ್​ಸಿಯಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ- 240 (ಇಂದು 42 ವಿದ್ಯಾರ್ಥಿಗಳು ಲಸಿಕೆ ಪಡೆಯಲಿದ್ದಾರೆ)

ಪದವಿ ಪೂರ್ವ ಕಾಲೇಜಿನಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ - 395(ಇಂದು 50 ವಿದ್ಯಾರ್ಥಿಗಳು ಲಸಿಕೆ ಪಡೆಯಲಿದ್ದಾರೆ)

ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ

Last Updated : Jan 3, 2022, 1:35 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.