ETV Bharat / state

ಬೆಂಗಳೂರಲ್ಲಿ 3ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೇಮ ವೈಫಲ್ಯ ಶಂಕೆ - ಬಾಲಕಿ ಆತ್ಮಹತ್ಯೆ

ಎಸ್​ಎಸ್​​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮನೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

floor
ಬಾಲಕಿ ಸಾವು
author img

By

Published : Nov 23, 2021, 3:14 PM IST

Updated : Nov 23, 2021, 3:43 PM IST

ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಿಪೇಟೆಯಲ್ಲಿ ಎಸ್​ಎಸ್​​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ತಮ್ಮ ಮನೆಯ ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಅಕ್ಕಿಪೇಟೆ ನಿವಾಸಿ ದೂದ್ ರಾಮ್ ಮಾಲಿಯ ಎಂಬುವರ ಮಗಳು ಮೃತ ಬಾಲಕಿ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. ಘಟನೆ ನಂತರ ಬಾಲಕಿ ತಂದೆ ಮಗಳ ಸ್ನೇಹಿತನಾಗಿದ್ದ ಬಾಲಕನ ವಿರುದ್ಧ ದೂರು ನೀಡಿದ್ದಾರೆ. ಮಗಳ ಸಾವಿನ ಹಿಂದೆ ಆತನ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಲಕಿಯ ಮೊಬೈಲ್ ನಂಬರ್ ಡಿಟೇಲ್ಸ್ ಹಾಗೂ ಇತರೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಬಾಲಕಿ ಹಲವು ದಿನಗಳಿಂದ ಸಹಪಾಠಿ ಬಾಲಕನನ್ನು ಪ್ರೀತಿಸುತ್ತಿದ್ದಳು.‌ ಇದಕ್ಕೆ ಆತ ಒಲ್ಲೆ ಎಂದಿದ್ದ ಎಂದು ತಿಳಿದುಬಂದಿದೆ‌.

ಇದನ್ನೂ ಓದಿ:ವಿಧಾನಸೌಧದಲ್ಲೇ ಛಾಪಾ ಕಾಗದ ಡೀಲ್: ಐವರು ಆರೋಪಿಗಳನ್ನು ಬಂಧಿಸಿದ ಎಸ್ಐಟಿ

Last Updated : Nov 23, 2021, 3:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.