ಬೆಂಗಳೂರು: ಮುಂದಿನ ಏಪ್ರಿಲ್ 14ರ ವರೆಗೂ ಭಾರತ ಲಾಕ್ ಡೌನ್ ಹಿನ್ನೆಲೆ 7 ರಿಂದ 10ನೇ ತರಗತಿಯ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಈಗಾಗಲೇ ಈ ಪರೀಕ್ಷೆ ಒಂದು ಬಾರಿ ಮುಂದೂಡಿಕೆಯಾಗಿದ್ದು, ಆಗ ಮಾರ್ಚ್ 31ಕ್ಕೆ ದಿನಾಂಕ ನಿಗದಿಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಆದರೀಗ ಲಾಕ್ ಡೌನ್ ಹಿನ್ನೆಲೆ ಏಪ್ರಿಲ್ 20 ರವರೆಗೂ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಏ.20ರ ನಂತರ ಪರೀಕ್ಷೆಗಳನ್ನು ನಡೆಸಲು ನಿರ್ಧಾರ ಮಾಡಲಾಗಿದೆ. ಆರ್ಟಿಇ ಪ್ರವೇಶ ಮತ್ತು ವಿದ್ಯಾರ್ಥಿಗಳ ಅಡ್ಮಿಷನ್ ಕೂಡ ಮುಂದೂಡಿಕೆಯಾಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಎಂದು ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಇದೀಗ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
-
ಕೆಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ #SSLC ಪರೀಕ್ಷೆ ಕುರಿತು ರದ್ದಾಗಿದೆ ಎಂಬ ಒಂದು #ಅಪ್ಪಟ_ಸುಳ್ಳು_ಸುದ್ಧಿ ಹರಿದಾಡುತ್ತಿದೆ. #SSLC_ಪರೀಕ್ಷೆ_ರದ್ದು_ಮಾಡುವ_ಯಾವುದೇ_ನಿರ್ಧಾರ_ಕೈಗೊಂಡಿಲ್ಲ.
— S.Suresh Kumar, Minister - Govt of Karnataka (@nimmasuresh) March 26, 2020 " class="align-text-top noRightClick twitterSection" data="
ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ.
">ಕೆಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ #SSLC ಪರೀಕ್ಷೆ ಕುರಿತು ರದ್ದಾಗಿದೆ ಎಂಬ ಒಂದು #ಅಪ್ಪಟ_ಸುಳ್ಳು_ಸುದ್ಧಿ ಹರಿದಾಡುತ್ತಿದೆ. #SSLC_ಪರೀಕ್ಷೆ_ರದ್ದು_ಮಾಡುವ_ಯಾವುದೇ_ನಿರ್ಧಾರ_ಕೈಗೊಂಡಿಲ್ಲ.
— S.Suresh Kumar, Minister - Govt of Karnataka (@nimmasuresh) March 26, 2020
ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ.ಕೆಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ #SSLC ಪರೀಕ್ಷೆ ಕುರಿತು ರದ್ದಾಗಿದೆ ಎಂಬ ಒಂದು #ಅಪ್ಪಟ_ಸುಳ್ಳು_ಸುದ್ಧಿ ಹರಿದಾಡುತ್ತಿದೆ. #SSLC_ಪರೀಕ್ಷೆ_ರದ್ದು_ಮಾಡುವ_ಯಾವುದೇ_ನಿರ್ಧಾರ_ಕೈಗೊಂಡಿಲ್ಲ.
— S.Suresh Kumar, Minister - Govt of Karnataka (@nimmasuresh) March 26, 2020
ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ.
ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿಲ್ಲ, ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆ ಕೂಡ ನಡೆದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ. ಏಪ್ರಿಲ್ 14ರ ವರೆಗೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡುವಂತೆ ಪ್ರಧಾನಿ ಸೂಚಿಸಿದ್ದಾರೆ. ಹೀಗಾಗಿ ಏಪ್ರಿಲ್ 20ರ ನಂತರ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಲಿದ್ದು, ಪರೀಕ್ಷೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಆರ್ಟಿಇ ಅಡಿಯಲ್ಲಿ ಮಕ್ಕಳ ದಾಖಲಾತಿ ಕುರಿತು ಆಮೇಲೆ ತೀರ್ಮಾನವಾಗಲಿದೆ ಎಂದು ತಿಳಿಸಿದ್ದಾರೆ.