ETV Bharat / state

ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕೇಸ್ ಸಿಐಡಿ ತನಿಖೆಗೆ : ಸಚಿವ ಶ್ರೀರಾಮುಲು

author img

By

Published : Mar 25, 2022, 5:06 PM IST

Updated : Mar 25, 2022, 5:28 PM IST

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಚಾಮರಾಜನಗರ ಜಿಲ್ಲೆಗಳಲ್ಲಿ 40 ಬುಡಕಟ್ಟು ಜನಾಂಗದವರಿಗೆ ವಿದ್ಯುತ್ ಇಲ್ಲ. ನೀರಾವರಿ ವ್ಯವಸ್ಥೆ ಇಲ್ಲ, ರಸ್ತೆ ಇಲ್ಲ. ಈ ಅರಣ್ಯ ಪ್ರದೇಶದಲ್ಲಿ ಒಬ್ಬರೇ ಓಡಾಡಲು ಸಾಧ್ಯವಿಲ್ಲ. ಪಾಠ ಮಾಡಲು ಹೋದ ಶಿಕ್ಷಕರು ಒಂದು ವಾರ ವಾಡೆಯಲ್ಲಿ ಇರಬೇಕು. ಬುಡಕಟ್ಟು ಜನಾಂಗದವರ ಆರೋಗ್ಯ ವ್ಯತ್ಯಾಸವಾದರೆ, ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಸೇರಿಸೋಕೆ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ..

ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕೇಸ್ ಸಿಐಡಿ ತನಿಖೆಗೆ ಎಂದ ಶ್ರೀರಾಮುಲು

ಬೆಂಗಳೂರು : ಐಷಾರಾಮಿ ಕಾರ್​​ಗಳ ತೆರಿಗೆ ವಂಚನೆ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಒಪ್ಪಿಸಲು ಸಾರಿಗೆ ಸಚಿವ ಬಿ.ಶ್ರೀರಾಮುಲು ನಿರಾಕರಿಸಿದ್ದು, ಸಿಐಡಿ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಕೆಲ ಐಷಾರಾಮಿ ಕಾರ್​​ಗಳು ತೆರಿಗೆ ಕಟ್ಟದೆ ಓಡಾಡುತ್ತಿವೆ. 224 ಐಷಾರಾಮಿ ಕಾರಿಗಳು ತೆರಿಗೆ ಕಟ್ಟಿಲ್ಲ. ಕೋಟ್ಯಂತರ ರೂಪಾಯಿ ತೆರಿಗೆ ನಷ್ಟ ಆಗಿದೆ. ಕೋರಮಂಗಲದ ಆರ್‌ಟಿಒದಲ್ಲಿ 95 ಸಾವಿರ ಐಷಾರಾಮಿ ಕಾರ್‌ಗಳು ರಿಜಿಸ್ಟರ್ ಆಗಿವೆ. ತೆರಿಗೆ ಪಾವತಿ ಮಾಡಿಸಿಕೊಳ್ಳಲು ಆರ್‌ಟಿಒ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಇದರಲ್ಲಿ ಅಧಿಕಾರಿಗಳ ಕೈವಾಡ ಇದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ ಎಂದು ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯಿಸಿದರು.

ಸಾರಿಗೆ ಇಲಾಖೆ ಬಗ್ಗೆ ಮಾತನಾಡಿದ ರಾಮುಲು

ಇದಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, 2015 ರಿಂದ 2021ವರೆಗೆ 124 ಐಷಾರಾಮಿ ಕಾರ್‌ಗಳು ಜೀವಿತಾವಧಿ ತೆರಿಗೆ ಪಾವತಿ ಮಾಡಿಲ್ಲ. ಈ ಕಾರ್​ಗಳ ವಿಚಾರದಲ್ಲಿ ಕಡತಗಳೇ ನಾಪತ್ತೆ ಆಗಿವೆ. ಹೀಗಿದ್ದರೂ ಈವರೆಗೆ 13 ಕಾರ್ ಸೀಜ್ ಮಾಡಿದ್ದೇವೆ. 1.64 ಕೋಟಿ ತೆರಿಗೆ ಸಂಗ್ರಹ ಮಾಡಿರುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ : ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 26,65,731 ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಬಾಕಿ ವಾಹನಗಳಿಗೂ ಶ್ರೀಘ್ರದಲ್ಲೇ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಒಳ್ಳೇ ರಾಜಕಾರಣಿ, ಸಿಎಂ ಆಗಿ ಯಶಸ್ವಿಯಾಗಿ ಅವಧಿ ಮುಗಿಸಿದವರು.. ಆದರೆ ; ಬಿ ಸಿ ನಾಗೇಶ್

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 3 ವರ್ಷಗಳಲ್ಲಿ 26,65,731 ವಾಹನಗಳಿಗೆ ಹೈ ಸೆಕ್ಯುರಿಟಿ ಸಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. 61,509 ವಾಹನಗಳಿಗೆ ಇನ್ನು ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇದೆ. ಆದಷ್ಟು ಬೇಗ ಬಾಕಿ ಇರೋ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು.

ಬುಡಕಟ್ಟು ಜನರಿಗೆ 45 ದಿನಕ್ಕೊಮ್ಮೆ ಪಡಿತರ : ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಚಾಮರಾಜನಗರ ಜಿಲ್ಲೆಗಳಲ್ಲಿ 40 ಬುಡಕಟ್ಟು ಜನಾಂಗದವರಿಗೆ ವಿದ್ಯುತ್ ಇಲ್ಲ. ನೀರಾವರಿ ವ್ಯವಸ್ಥೆ ಇಲ್ಲ, ರಸ್ತೆ ಇಲ್ಲ. ಈ ಅರಣ್ಯ ಪ್ರದೇಶದಲ್ಲಿ ಒಬ್ಬರೇ ಓಡಾಡಲು ಸಾಧ್ಯವಿಲ್ಲ. ಪಾಠ ಮಾಡಲು ಹೋದ ಶಿಕ್ಷಕರು ಒಂದು ವಾರ ವಾಡೆಯಲ್ಲಿ ಇರಬೇಕು. ಬುಡಕಟ್ಟು ಜನಾಂಗದವರ ಆರೋಗ್ಯ ವ್ಯತ್ಯಾಸವಾದರೆ, ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಸೇರಿಸೋಕೆ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ.

ಬುಡಕಟ್ಟು ಜನಾಂಗಕ್ಕೆ ಓಡಾಡಲು ಫ್ರೀ ಬಸ್ ಪಾಸ್ ಕೊಡಿ. ಜನಾಂಗದ ಮಕ್ಕಳಿಗೆ ವಿಶೇಷ ವಸತಿ ಶಾಲೆ ಮಾಡಿ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಚಾಮರಾಜನಗರ ವ್ಯಾಪ್ತಿಯಲ್ಲಿ 1,20,219 ಬುಡಕಟ್ಟು ಜನರಿದ್ದಾರೆ. ಮೂಲ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಣ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ 8 ಸಂಚಾರಿ ಆರೋಗ್ಯ ಘಟಕ ಬುಡಕಟ್ಟು ಜನರ ಆರೋಗ್ಯ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಬುಡಕಟ್ಟು ಜನಾಂಗದವರ ಬಗ್ಗೆ ಮಾತನಾಡಿದ ಶ್ರೀರಾಮುಲು

ಪ್ರಗತಿ ಕಾಲೋನಿ ಅಭಿವೃದ್ಧಿಗೆ ₹18 ಕೋಟಿ ಬಿಡುಗಡೆ ಮಾಡಲಾಗಿದೆ. ಓದುವ ಬುಡಕಟ್ಟು ಜನಾಂಗದ ಶಾಲಾ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಬುಡಕಟ್ಟು ಜನರಿಗೆ ಉಚಿತ ಬಸ್ ನೀಡಲು ಸಾಧ್ಯವಿಲ್ಲ. ಬುಡಕಟ್ಟು ಜನಾಂಗದವರಿಗೆ ಅಕ್ಕಿ, ರಾಗಿ, ಗೋಧಿ, ಎಣ್ಣೆ, ಮೊಟ್ಟೆ, ತುಪ್ಪ ಕೊಡಲಾಗ್ತಿದೆ. 45 ದಿನಕ್ಕೊಮ್ಮೆ ಆಹಾರ ಧಾನ್ಯ ನೀಡುತ್ತಿದ್ದೇವೆ. ಚಾಮರಾಜನಗರದಲ್ಲಿ ವಾಲ್ಮೀಕಿ ವಸತಿ ಶಾಲೆ ಇವೆ. ಇಲ್ಲಿ ಮಕ್ಕಳಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಭವಿಷ್ಯ ನಿಧಿಗಾಗಿ ಸಾರಿಗೆ ಕಟ್ಟಡ ಅಡಮಾನ : ನರ್ಮ್ ಯೋಜನೆ ಅಡಿ ಖರೀದಿಸಿದ ಬಸ್​ಗಳು ಮತ್ತು ಸಂಸ್ಥೆಯ ಕಟ್ಟಡ ಅಡಮಾನ ಇಡುತ್ತಿರುವ ಕುರಿತು ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನರ್ಮ್ ಯೋಜನೆ ಅಡಿ 4 ನಿಗಮದಲ್ಲಿ 2,624 ಬಸ್ ಖರೀದಿ ಮಾಡಲಾಗಿದೆ. ಈ ಪೈಕಿ 168 ಬಸ್‌ಗಳು ಸ್ಥಗಿತಗೊಂಡಿವೆ. ನರ್ಮ್ ಯೋಜನೆ ಅಡಿ 7 ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಸಾರಿಗೆ ಇಲಾಖೆ ಕಟ್ಟಡಗಳನ್ನ ಸಿಬ್ಬಂದಿ ಭವಿಷ್ಯ ನಿಧಿಗಾಗಿ ಅಡಮಾನ ಇಡುತ್ತಿದ್ದೇವೆ. ಅನಿವಾರ್ಯ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಉತ್ತರ ನೀಡಿದರು.

Last Updated : Mar 25, 2022, 5:28 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.