ETV Bharat / state

ಹೆಚ್.ವಿಶ್ವನಾಥ್ ಯಾವಾಗ ಏನ್​ ಮಾತಾಡ್ತಾರೆ ಅನ್ನೋದೇ ಗೊತ್ತಿಲ್ಲ: ಎಸ್.ಆರ್. ವಿಶ್ವನಾಥ್ - ಹೆಚ್​.ವಿಶ್ವನಾಥ್ ವಿರುದ್ಧ ಎಸ್.ಆರ್.ವಿಶ್ವನಾಥ್ ವಾಗ್ದಾಳಿ

ವಿಧಾನ ಪರಿಷತ್​ ಹೆಚ್. ವಿಶ್ವನಾಥ್ ಯಾವಾಗ ಏನು ಮಾತಾಡ್ತಾರೆ ಗೊತ್ತಿಲ್ಲ‌. ಅವರೇನು ಮಾತಾಡ್ತಾರೆ ಅಂತಾ ಅವರಿಗೂ ಅರ್ಥ ಆಗಲ್ಲ, ನಮಗೂ ಅರ್ಥ ಆಗಲ್ಲ ಅಂತಾ ಎಸ್​.ಆರ್. ವಿಶ್ವನಾಥ್ ಕಿಡಿಕಾರಿದ್ದಾರೆ.

ishwanath
ಎಸ್​.ಆರ್.ವಿಶ್ವನಾಥ್
author img

By

Published : Dec 1, 2020, 2:24 PM IST

ಬೆಂಗಳೂರು : ಹೆಚ್. ವಿಶ್ವನಾಥ್ ಯಾವಾಗ ಏನು ಮಾತಾಡ್ತಾರೆ ಗೊತ್ತಿಲ್ಲ‌. ಅವರೇನು ಮಾತಾಡ್ತಾರೆ ಅಂತಾ ಅವರಿಗೂ ಅರ್ಥ ಆಗಲ್ಲ, ನಮಗೂ ಅರ್ಥ ಆಗಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಕಿಡಿಕಾರಿದರು.

ಹೆಚ್. ವಿಶ್ವನಾಥ್ ಯಾವಾಗ ಏನು ಮಾತಾಡ್ತಾರೆ ಅನ್ನೋದೇ ಗೊತ್ತಿಲ್ಲ: ಎಸ್.ಆರ್. ವಿಶ್ವನಾಥ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೆಚ್.ವಿಶ್ವನಾಥ್, ಸರ್ಕಾರ ರಚನೆಗೆ ಸಹಕಾರ ನೀಡಿದ್ದಾರೆ. ಅವರಿಗೆ ಚುನಾವಣೆಗೆ ನಿಲ್ಲುವುದು ಬೇಡ ಎಂದರೂ, ಸ್ಪರ್ಧಿಸಿದ್ದರು. ಅವರು ಅವರದ್ದೇ ಹಾದಿಯಲ್ಲಿ ಹೋಗಿದ್ದರು. ಅದಾಗ್ಯೂ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು. ಕೋರ್ಟ್‌ನಲ್ಲಿ ವ್ಯತ್ಯಾಸ ಆಗಿದ್ದು, ಬೇರೆ ಯಾರೂ ವ್ಯತ್ಯಾಸ ಮಾಡಿಲ್ಲ. ಮಂತ್ರಿ ಮಾಡುವ ಬಗ್ಗೆ ಬರೀ‌ ಊಹಾಪೋಹವಷ್ಟೇ. ಅವರನ್ನು ಮಂತ್ರಿ ಮಾಡಲು ಹೈಕಮಾಂಡ್​ಗೆ ಪಟ್ಟಿ ಕಳಿಸಿಲ್ಲ. ಹೆಚ್. ವಿಶ್ವನಾಥ್‌ಗೆ ಯಾವ ಮೂಲದಿಂದ ಗೊತ್ತಾಗಿದೆಯೋ ಗೊತ್ತಿಲ್ಲ ಎಂದು ಎಸ್​ ಆರ್​ ವಿಶ್ವನಾಥ್​ ಸ್ಪಷ್ಟಪಡಿಸಿದರು.
ಹೆಚ್.ವಿಶ್ವನಾಥ್ ತಲೆನೋವು ಅಂತಾ ಅಲ್ಲ. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡುತ್ತಾರೆ. ಯಾವ ಪಕ್ಷದಲ್ಲಿ ಇದ್ದರೂ ಅದೇ ಮಾಡಿದ್ದಾರೆ. ನಾವು ಸಾಕಷ್ಟು ಬಾರಿ ತಿಳಿ ಹೇಳಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮಾತನಾಡಲು ಸೂಚನೆಯನ್ನೂ ನೀಡಿದ್ದೇವೆ. ಆದರೂ ಅರಿತುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.