ETV Bharat / state

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಎಸ್ ಆರ್ ಪಾಟೀಲ್ ಭೇಟಿ, ಮಾತುಕತೆ

ಪಕ್ಷದಲ್ಲಿ ಯಾರು ಎಲ್ಲಿಯೇ ನಿಲ್ಲಲಿ, ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದು ನನ್ನ ಜವಾಬ್ದಾರಿ. ನನಗೆ ಯಾವುದೇ ಅಸಮಾಧಾನವಿಲ್ಲ. ಸಿದ್ದರಾಮಯ್ಯ ಸಹೋದರನ ನಿಧನಕ್ಕೆ ಸಾಂತ್ವನ ಹೇಳಲು ಬಂದಿದ್ದೆ ಅಷ್ಟೇ ಎಂದು ಎಸ್​ ಆರ್​ ಪಾಟೀಲ್​ ಹೇಳಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Aug 30, 2022, 3:15 PM IST

Updated : Aug 30, 2022, 3:48 PM IST

ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ವಿಧಾನ ಪರಿಷತ್​ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಮಾಲೋಚಿಸಿದರು. ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಅವರು ಮಾತುಕತೆ ನಡೆಸಿದ್ದಾರೆ. ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದ, ಎಸ್ ಆರ್ ಪಾಟೀಲ್ ದಿಢೀರ್ ಭೇಟಿ ನೀಡಿ ಸಮಾಲೋಚಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಸಿದ್ದರಾಮಯ್ಯ ಮತ್ತು ಪಕ್ಷದ ಕಾರ್ಯಕ್ರಮಗಳಿಂದ ಎಸ್​ ಆರ್​ ಪಾಟೀಲ್​​ ಅಂತರ ಕಾಪಾಡಿಕೊಂಡಿದ್ದರು. ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದರು. ಕ್ಷೇತ್ರಕ್ಕೆ ಸೀಮಿತರಾಗಿದ್ದು ಬಹುದಿನಗಳ ನಂತರ ಬೆಂಗಳೂರಿಗೆ ಆಗಮಿಸಿದ್ದರು.

ಸಿದ್ದರಾಮಯ್ಯ ನಿವಾಸಕ್ಕೆ ಎಸ್ ಆರ್ ಪಾಟೀಲ್ ಭೇಟಿ

ನನಗೆ ಅಸಮಾಧಾನ ಇಲ್ಲ: ಭೇಟಿಯ ಬಳಿಕ ಮಾತನಾಡಿದ ಪಾಟೀಲ್, ನನಗೆ ಯಾರ ಮೇಲೂ ಅಸಮಾಧಾನ ಇಲ್ಲ. ಎರಡು ಬಾರಿ ನನಗೆ ಟಿಕೆಟ್ ತಪ್ಪಿತ್ತು. ನಾನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅಥವಾ ಹೈಕಮಾಂಡ್ ಸೇರಿದಂತೆ ಯಾರ ಮೇಲೂ ದೋಷಾರೋಪಣೆ ಮಾಡಿಲ್ಲ. ಪಕ್ಷದಲ್ಲಿ ಯಾರು ಎಲ್ಲಿಯೇ ನಿಲ್ಲಲಿ, ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದು ನನ್ನ ಜವಾಬ್ದಾರಿ. ಸಿದ್ದರಾಮಯ್ಯ ಸಹೋದರನ ನಿಧನಕ್ಕೆ ಸಾಂತ್ವನ ಹೇಳಲು ಬಂದಿದ್ದೆ ಅಷ್ಟೇ ಎಂದರು.

ತನಿಖೆಯ ನಂತರ ಎಲ್ಲಾ ಗೊತ್ತಾಗಲಿದೆ: ಮುರುಘಾ ಶರಣರ ಪ್ರಕರಣದ ಬಗ್ಗೆ ಕೇಳಿ ನನಗೆ ಬಹಳ ನೋವಾಗಿದೆ. ಬಸವ ತತ್ವಗಳನ್ನು ಅಕ್ಷರಶಃ ಜಾರಿಗೆ ತಂದವರು ಅವರು. ತನಿಖೆ ನಡೆಯುತ್ತಿದೆ, ಬಳಿಕ ಎಲ್ಲ ಗೊತ್ತಾಗಲಿದೆ. ಸುಳ್ಳು ಕೇಸ್ ಇದ್ರೂ ಅದು ಬಯಲಾಗುತ್ತದೆ. ಬಸವ ತತ್ವಗಳನ್ನು ಜಾರಿಗೆ ತಂದ ಏಕೈಕ ಶ್ರೀಗಳು ಅವರು. ಷಡ್ಯಂತ್ರ ಇದ್ರೂ ಇರಬಹುದು, ನನಗೆ ಗೊತ್ತಿಲ್ಲ. ಸತ್ಯ ಹೊರಬರಬೇಕು ಎಂಬುದು ನನ್ನ ಅಪೇಕ್ಷೆ ಎಂದು ಹೇಳಿದರು.

ಇದನ್ನೂ ಓದಿ: ಎಸ್.ಆರ್‌.ಪಾಟೀಲರೂ ಸಹ ಮುಖ್ಯಮಂತ್ರಿ ಅಭ್ಯರ್ಥಿ: ವೀರಪ್ಪ ಮೊಯ್ಲಿ

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ: ಎಸ್ ಆರ್ ಪಾಟೀಲ್ ಸಿಎಂಗೆ ಸೂಕ್ತ ಎಂಬ ವೀರಪ್ಪ ಮೊಯ್ಲಿ ಹೇಳಿಕೆಗೆ ಉತ್ತರಿಸಿ, ವೀರಪ್ಪ ಮೊಯ್ಲಿ ನಮ್ಮ ಸ್ನೇಹಿತರು. ಅವರ ಜೊತೆ ಸಾಕಷ್ಟು ವರ್ಷಗಳಿಂದ ಒಡನಾಟ ಇದೆ. ನಾನು ಎಲ್ಲಾ ರೀತಿಯಲ್ಲೂ ಅರ್ಹನಾಗಿದ್ದೇನೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರಿಗೂ ಅವರದ್ದೇ ಅಪೇಕ್ಷೆಗಳು ಇರುತ್ತವೆ ಎಂದು ಪರೋಕ್ಷವಾಗಿ ಸಿಎಂ ಹುದ್ದೆಗೆ ನಾನು ಅರ್ಹ‌ನಿದ್ದೇನೆ ಎಂಬ ಅಭಿಪ್ರಾಯವನ್ನು ಎಸ್ ಆರ್ ಪಾಟೀಲ್ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಎಂ ಕಾದಾಟ: ಡಿಕೆಶಿ, ಸಿದ್ದರಾಮಯ್ಯ ಜೊತೆಗೆ ಮುನ್ನೆಲೆಗೆ ಬಂದ ಎಸ್​.ಆರ್.​ ಪಾಟೀಲ್​

ಮಾಜಿ ಸಚಿವ ಆಂಜನೇಯ ಭೇಟಿ: ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ವಿಚಾರವಾಗಿ, ದಲಿತಪರ ಸಂಘಟನೆಗಳು ಶ್ರೀಗಳ ವಿರುದ್ಧ ಚಿತ್ರದುರ್ಗದಲ್ಲಿ ಪ್ರತಿಭಟನೆ‌ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ವಿವರಿಸುವ ಸಲುವಾಗಿ ಸಿದ್ದರಾಮಯ್ಯರನ್ನು ಮಾಜಿ ಸಚಿವ ಹೆಚ್ ಆಂಜನೇಯ ಭೇಟಿಯಾಗಿದ್ದರು. ಶ್ರೀಗಳ ಪ್ರಕರಣದ ಬಳಿಕ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಆಂಜನೇಯ‌ ವಾಪಸ್ ತೆರಳುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಹೇಳಿ ಹೊರಟು ಹೋದರು.

Last Updated : Aug 30, 2022, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.