ETV Bharat / state

ರಾಜ್ಯ ಸಂಕಷ್ಟದಲ್ಲಿರುವಾಗ ಸಂಪುಟ ವಿಸ್ತರಣೆ ಕಸರತ್ತು ಸರಿಯೇ..?: ಎಸ್​​ಆರ್ ಪಾಟೀಲ್ - ರಾಜ್ಯ ಸಂಕಷ್ಟದಲ್ಲಿರುವಾಗ ಸಂಪುಟ ವಿಸ್ತರಣೆ

ರಾಜ್ಯದ ಜನರು ಸಂಕಷ್ಟದಲ್ಲಿದ್ದರೂ ಕೂಡ ಬಿಜೆಪಿ ನಾಯಕರು ಬೆಂಗಳೂರು ಟು ದಿಲ್ಲಿ, ದಿಲ್ಲಿ ಟು ಬೆಂಗಳೂರು ಎಂದು ‘ಕುರ್ಚಿ ಕಸರತ್ತು’ ನಡೆಸುತ್ತಿರುವುದು ಎಷ್ಟು ಸರಿ? ಎಂದು ಎಸ್​​ಆರ್ ಪಾಟೀಲ್ ಪ್ರಶ್ನಿಸಿದ್ದಾರೆ.

SR Patil Leader of the Opposition
ಎಸ್​​ಆರ್ ಪಾಟೀಲ್
author img

By

Published : Nov 26, 2020, 5:21 PM IST

ಬೆಂಗಳೂರು: ರಾಜ್ಯ ಸಂಕಷ್ಟದಲ್ಲಿರುವ ಸಂದರ್ಭ ಜನರಿಗೆ ಧೈರ್ಯ ತುಂಬುವ ಬದಲು, ಸರ್ಕಾರ ಸಂಪುಟ ವಿಸ್ತರಣೆಯತ್ತ ಗಮನಹರಿಸಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​​ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

  • ರಾಜ್ಯದ ಜನರು ಸಂಕಷ್ಟದಲ್ಲಿದ್ದರೂ ಕೂಡ ಬಿಜೆಪಿ ನಾಯಕರು ಬೆಂಗಳೂರು To ದಿಲ್ಲಿ, ದಿಲ್ಲಿ To ಬೆಂಗಳೂರು ಎಂದು ‘ಕುರ್ಚಿ ಕಸರತ್ತು’ ನಡೆಸುತ್ತಿರುವುದು ಎಷ್ಟು ಸರಿ..? 3/3

    — S R Patil (@srpatilbagalkot) November 26, 2020 " class="align-text-top noRightClick twitterSection" data=" ">

ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿರುವ ಅವರು, ಕೊರೊನಾ ಲಾಕ್​​ಡೌನ್ ಮತ್ತು ಪ್ರವಾಹದಿಂದ ರಾಜ್ಯ ಸಂಪೂರ್ಣವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಜನರಿಗೆ ನಾವಿದ್ದೇವೆ ಎನ್ನುವ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರದ ಚಿತ್ತ ಸಂಪುಟ ವಿಸ್ತರಣೆಯ ಕಡೆಯೇ ನೆಟ್ಟಿದೆ ಎಂದಿದ್ದಾರೆ.

ಒಂದು ಕಡೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಂಪುಟ ಸಚಿವರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ದಿಲ್ಲಿ ದೊರೆಗಳ ಮೊರೆ ಹೋಗಿದ್ದಾರೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದರೂ ಕೂಡ ಬಿಜೆಪಿ ನಾಯಕರು ಬೆಂಗಳೂರು ಟು ದಿಲ್ಲಿ, ದಿಲ್ಲಿ ಟು ಬೆಂಗಳೂರು ಎಂದು ‘ಕುರ್ಚಿ ಕಸರತ್ತು’ ನಡೆಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಧೈರ್ಯ ಇದ್ರೆ ಹೈದರಾಬಾದ್​ಗೆ ಬಂದು ಮೋದಿ ಸಭೆ ನಡೆಸಲಿ: ಓವೈಸಿ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.