ETV Bharat / state

ಶಾಸಕ ಸತೀಶ್ ರೆಡ್ಡಿ ರಾಜೀನಾಮೆಗೆ ಎಸ್.ಆರ್.ಪಾಟೀಲ್ ಆಗ್ರಹ

author img

By

Published : May 6, 2021, 12:53 PM IST

ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ಶಾಸಕ ಸತೀಶ್ ರೆಡ್ಡಿಯೇ ಪ್ರಕರಣd ಆರೋಪಿ ಎಂದು ಹೇಳಲಾಗ್ತಿದೆ. ಹಾಗಾಗಿ, ಸತೀಶ್ ರೆಡ್ಡಿ ರಾಜೀನಾಮೆ ನೀಡುವಂತೆ ಎಂಎಲ್​ಸಿ ಎಸ್.ಆರ್​.ಪಾಟೀಲ್ ಆಗ್ರಹಿಸಿದ್ದಾರೆ.

SR Patil demands resignation of MLA Satish Reddy
ಶಾಸಕ ಸತೀಶ್ ರೆಡ್ಡಿ ರಾಜೀನಾಮೆಗೆ ಎಸ್.ಆರ್​ ಪಾಟೀಲ್ ಆಗ್ರಹ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಬಿಜೆಪಿ ಶಾಸಕ ಸತೀಶ್ ರೆಡ್ಡಿ ರಾಜೀನಾಮೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಬಿಜೆಪಿ ಶಾಸಕರೇ ಬಡವರ ಜೀವದ ಜತೆ ಚೆಲ್ಲಾಟವಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಕೂಡಲೇ ಶಾಸಕ ಸತೀಶ್ ರೆಡ್ಡಿಯ ರಾಜೀನಾಮೆ ಪಡೆಯಬೇಕು, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ವಾರ್ ರೂಮ್ ಮೇಲೆ ದಾಳಿ ಮಾಡಿ ವೀರಾವೇಶ ಪ್ರದರ್ಶಿಸಿದರಲ್ಲ, ಆ ಸಮಯದಲ್ಲಿ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಶಾಸಕ ಸತೀಶ್ ರೆಡ್ಡಿ ಕೂಡ ಜೊತೆಗಿದ್ದರು. ಅಕ್ರಮ ಬಯಲಿಗೆಳೆಯೋದಕ್ಕೆ ಸಂಸದರು ಆರೋಪಿಯನ್ನೇ ಜೊತೆಗೆ ಕರೆದೊಯ್ಯಬೇಕಿತ್ತಾ ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.

ಓದಿ : ಬೆಡ್ ಬ್ಲಾಕಿಂಗ್​ ದಂಧೆ: ತನಿಖಾ ವರದಿ ಕೇಳಿದ ಹೈಕೋರ್ಟ್

ಬಿಬಿಎಂಪಿ ವಾರ್ ರೂಮ್​ನಲ್ಲಿ ತಮ್ಮ ಬೆಂಬಲಿಗರನ್ನು ಬಿಟ್ಟು ಚಿಂತಾಜನಕ ಸ್ಥಿತಿಯಲ್ಲಿರುವವರಿಗೆ ಬೆಡ್​ಗಳನ್ನು ಕೊಡದೆ ದುಡ್ಡಿಗೆ ಮಾರಾಟ ಮಾಡುವ ದಂಧೆಯಲ್ಲಿ ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ. ಕೂಡಲೇ ಶಾಸಕ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಇಬ್ಬರ ಮೇಲೂ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.