ಬೆಂಗಳೂರು: ಕಾಂಗ್ರೆಸ್ಗೆ ಬರುತ್ತೇವೆ ಎಂದವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ಆಗಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ವಾಪಸ್ ಬರುವವರಿಗೆ ಅಂತಾನೇ ಒಂದು ಕಮಿಟಿ ಇದೆ. ಪಕ್ಷಕ್ಕೆ ಬರುವವರಿಂದ ನಮಗೆ ಹಾನಿಯಾಗಬಾರದು. ಹೋಗುವಾಗ ಏನು ಹಾನಿ ಮಾಡಿದ್ದಾರೆ ನೋಡಬೇಕಾಗುತ್ತದೆ. ರೋಷನ್ ಬೇಗ್ ಬರ್ತಾರೋ ಇಲ್ವೋ ಗೊತ್ತಿಲ್ಲ. ನಮ್ಮ ನಾಯಕರ ಜೊತೆ ಚರ್ಚೆ ಮಾಡಿರಬಹುದು. ಪಕ್ಷದ ಚೌಕಟ್ಟಿನಲ್ಲಿ ಮೊದಲು ಚರ್ಚೆಯಾದ ಮೇಲೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ನಿರ್ಧರಿಸುತ್ತಾರೆ ಎಂದರು.
ಬಿಜೆಪಿ ಮೂರು ವರ್ಷ ಪೂರೈಸಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಆಂತರಿಕ ವಿಚಾರ. ಅವರು ಮಾಡಿದ ಆಪರೇಷನ್ ಕಮಲ ಅವರಿಗೇ ಮುಳುವಾಗಿದ್ದು, ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಎಂದರು. ಡಿಕೆಶಿ ಪದಗ್ರಹಣ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ಸರ್ಕಾರ ಅವಕಾಶ ನೀಡಿರಲಿಲ್ಲ. ಅಮಿತ್ ಶಾ ಸಮಾವೆಶಕ್ಕೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿ ಮಾರ್ಗಸೂಚಿ ಅನ್ವಯವಾಗಲ್ವಾ? ಅವರಿಗೆ ಅನುಮತಿ ಕೊಟ್ಟು, ಇಲ್ಲಿ ಕೈಬಿಟ್ಟರೆ ಹೇಗೆ? ಅವರಿಗೊಂದು ನ್ಯಾಯ, ಇಲ್ಲಿಗೊಂದು ನ್ಯಾಯವೇ? ಈಗ ಸಿಎಂ ಜೊತೆ ಡಿಕೆಶಿ ಮಾತನಾಡಿದ್ದಕ್ಕೆ ಅವಕಾಶ ಕೊಡುವ ಬಗ್ಗೆ ಹೇಳಿದ್ದಾರೆ ಎಂದರು.