ETV Bharat / state

SWAT:ದೊಡ್ಡ ಮಟ್ಟದ ಅಪರಾಧ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಿದೆ ಈ ವಿಶೇಷ ತಂಡ

author img

By

Published : Aug 11, 2021, 8:23 PM IST

ಬೆಂಗಳೂರು ನಗರದಲ್ಲಿ ಎಲ್ಲೇ ದೊಡ್ಡ ಮಟ್ಟದಲ್ಲಿ ಅಪರಾಧ ಚಟುವಟಿಕೆ ಕಂಡು ಬಂದರೂ‌‌ ಸ್ಪೆಷಲ್‌ ವೆಪನ್ಸ್ ಅಂಡ್ ಟ್ಯಾಕ್ಟಿಸ್ ತಂಡ ಕೂಡಲೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಲಿದೆ.

SWAT
SWAT

ಬೆಂಗಳೂರು: ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದೆಲ್ಲ ಪ್ರಖ್ಯಾತಿಗೊಂಡಿರುವ ರಾಜ ರಾಜ್ಯಧಾನಿ ಬೆಂಗಳೂರಿನಲ್ಲಿ ಸಣ್ಣ ಅವಘಡ ಸಂಭವಿಸಿದರೂ ರಾಷ್ಟ್ರ‌ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗಲಿದೆ. 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ಮಹಾನಗರದಲ್ಲಿ ಕಾನೂನು‌ ಸುವ್ಯವಸ್ಥೆಗೆ ಧಕ್ಕೆಯಾಗಿ ಅಪರಾಧ ಪ್ರಕರಣಗಳು ವರದಿಯಾಗುವುದು ಸಾಮಾನ್ಯವಾಗಿದೆ. ಅಹಿತಕರ ಘಟನೆಯಾದಾಗ ಹಾಗೂ ವಿಶೇಷ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ರಾಜ್ಯ ಆಂತರಿಕ ಭದ್ರತಾ ಇಲಾಖೆ ಎಡಿಜಿಪಿ ಮಾರ್ಗದರ್ಶನದಲ್ಲಿ ನಗರದಲ್ಲಿ ಹೊಸದಾಗಿ ಸ್ಪೆಷಲ್‌ ವೆಪನ್ಸ್ ಅಂಡ್ ಟ್ಯಾಕ್ಟಿಸ್ ತಂಡ (SWAT) ಕಾರ್ಯನಿರ್ವಹಿಸಲಿದೆ.

ನಗರ ಸಶಸ್ತ್ರ‌ ಮೀಸಲು ಪಡೆಯ (ಸಿಎಆರ್) ವಿಶೇಷ ತಂಡ ರಚಿಸಿ, 8 ವಾರಗಳ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ‌. ತಂಡದಲ್ಲಿ 120 ಮಂದಿ‌ಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು 30 ಸಿಬ್ಬಂದಿಯಂತೆ ನಾಲ್ಕು ತಂಡಗಳಾಗಿ ವಿಭಜಿಸಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌

ಮೊದಲ ಹಂತದಲ್ಲಿ 60 ಮಂದಿ‌ ಸಿಬ್ಬಂದಿಗೆ ತರಬೇತಿ‌ ಪೂರ್ಣಗೊಳಿಸಲಾಗಿದೆ. ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ) ನುರಿತ ಸದಸ್ಯರಿಂದ ತರಬೇತಿ ಕೊಡಲಾಗಿದೆ. ಸಿಎಆರ್ ಘಟಕಗಳಿಂದ ತರಬೇತಿ‌ ಪಡೆದ 60 ಮಂದಿ‌ ಸಿಬ್ಬಂದಿಯನ್ನು, ಇಬ್ಬರು‌ ರಿಸರ್ವ್ ಸಬ್ ಇನ್ಸ್​ಪೆಕ್ಟರ್​ (ಆರ್​ಎಸ್ಐ) ನೇತೃತ್ವದಲ್ಲಿ‌ ನಗರದ ಎಲ್ಲ ಭಾಗಗಳಿಗೂ ಅಗತ್ಯಕ್ಕನುಗುಣವಾಗಿ ನಿಯೋಜಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ ತಿಳಿಸಿದ್ದಾರೆ.

ಸಿಬ್ಬಂದಿಗೆ ಭಯೋತ್ಪಾದಕ ಹಾಗೂ ನಕ್ಸಲ್ ಚಟುವಟಿಕೆ ಸಾಮಾಜಿಕ ವಿರೋಧಿ ಚಟುವಟಿಕೆ, ಭದ್ರತೆ, ರಾಜ್ಯ ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಅಂತಾರಾಷ್ಟ್ರೀಯ ಮಹತ್ವವುಳ್ಳ ಕಾರ್ಯಕ್ರಮಗಳ ಭದ್ರತೆ ಹಾಗೂ ಆಧುನಿಕ ಆಯುಧಗಳ ಬಗ್ಗೆ ತರಬೇತಿ ನೀಡಿ ಸನ್ನದುಗೊಳಿಸಲಾಗಿದೆ.

ನಗರದಲ್ಲಿ ಎಲ್ಲೇ ದೊಡ್ಡ ಮಟ್ಟದಲ್ಲಿ ಅಪರಾಧ ಚಟುವಟಿಕೆ ಕಂಡು ಬಂದರೂ‌‌ ಈ ತಂಡ ಕೂಡಲೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಲಿದೆ. ಸದ್ಯ ಬೆಂಗಳೂರಿನಲ್ಲಿ ಮಾತ್ರ ಈ ತಂಡ ಕಾರ್ಯನಿರ್ವಹಿಸಲಿವೆ‌. ಮುಂದಿನ ದಿನಗಳಲ್ಲಿ‌ ಇನ್ನುಳಿದ 60 ಮಂದಿ‌ ಸಿಬ್ಬಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು ಎಂದು ಸಂದೀಪ್‌ ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.