ETV Bharat / state

ಸರ್ಕಾರಿ ಇಲಾಖೆಗಳ ನಡುವೆ ಕಾಣದ ಸಾಮರಸ್ಯ, ಕೊರೊನಾ ಮಹಾಸ್ಫೋಟಕ್ಕೆ ನಾಂದಿ ಹಾಡುವುದೇ?

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದೆ. ಆದರೆ ಇದಕ್ಕೆ ಹೊಣೆ ಹೊತ್ತ ಇಲಾಖೆಗಳ ನಡುವಿನ ಸಾಮರಸ್ಯ ಕೊರತೆ ಕಾರಣ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.

CM
ಸಿಎಂ
author img

By

Published : Jul 8, 2020, 12:14 AM IST

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನಡುವೆ ಬಾಂಧವ್ಯ ಅಷ್ಟೇನು ಚೆನ್ನಾಗಿಲ್ಲ ಎನ್ನುವುದು ಹಿಂದಿನಿಂದಲೂ ಕಾಣಸಿಗುತ್ತಿರುವ ಹಲವು ಉದಾಹರಣೆಗಳಿಂದ ಅರಿಯಬಹುದಾಗಿದೆ. ಆದರೆ ಈ ಸಚಿವರ ಹಾಗೂ ಇಲಾಖೆ ಅಧಿಕಾರಿಗಳ ನಡುವಿನ ಸಾಮರಸ್ಯ ಕೊರತೆ ಹಾಗೂ ಅಂತರವೇ ಇಂದು ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ಕೇವಲ ಪ್ರತಿಪಕ್ಷಗಳ ಆರೋಪ ಮಾತ್ರವಾಗಿ ಉಳಿದಿಲ್ಲ. ಬದಲಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದ ನಾಗರಿಕರು, ಕೊರೊನಾ ವಾರಿಯರ್ಸ್​ಗಳ ಅಳಲಾಗಿದೆ.

government departments
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
government departments
ಸಚಿವ ಬಿ. ಶ್ರೀರಾಮುಲು

ಭ್ರಷ್ಟಾಚಾರಕ್ಕೆ ಸೀಮಿತ

ಅಲ್ಲದೇ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅದಾಗಲೇ ಸಮುದಾಯ ಮಟ್ಟ ತಲುಪಿದೆ. ಇದನ್ನು ದಾಟಿ ಇಲ್ಲಿಂದ ಸಾಕಷ್ಟು ನಾಗರಿಕರು ಭಯಗೊಂಡು ತಮ್ಮೂರಿಗೆ ತೆರಳುತ್ತಿದ್ದು, ತಮ್ಮೊಂದಿಗೆ ಹಲವರು ಕೊರೊನಾ ಮಾರಿಯನ್ನೂ ಕೊಂಡೊಯ್ಯುತ್ತಿದ್ದಾರೆ. ಈ ಮೂಲಕ ಸದ್ಯ ನಾಲ್ಕೈದು ಜಿಲ್ಲೆಗಳಲ್ಲಿ ಕೊರೊನಾ ಸಮುದಾಯ ಹಂತ ತಲುಪಿದ್ದು, ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಆದರೆ ಬೆಂಗಳೂರು ಬಿಡುವವರಿಂದಾಗಿ ಇಡೀ ರಾಜ್ಯದಲ್ಲೇ ಕೊರೊನಾ ಸಮುದಾಯ ಹಂತ ತಲುಪಬಹುದು ಎಂಬ ಆತಂಕ ಕಾಡುತ್ತಿದೆ. ಈ ಮಧ್ಯೆ ಬೆಂಗಳೂರು ಬಿಡುವವರನ್ನು ಮನವೊಲಿಸಿ ವಾಪಸ್ ಕರೆತರುವಲ್ಲಿ ಕೂಡ ಸರ್ಕಾರ ಹಾಗೂ ಸಚಿವರು ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಕೇವಲ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಹಣಗಳಿಕೆಗೆ ಸರ್ಕಾರ ಹಾಗೂ ಸಚಿವರು, ಇಲಾಖೆಗಳು ಮುಂದಾಗಿವೆಯೇ ಎನ್ನುವ ಪ್ರತಿಪಕ್ಷಗಳ ಅನುಮಾನ ಇದೀಗ ಜನಸಾಮಾನ್ಯರಲ್ಲೂ ಮೂಡುತ್ತಿದೆ.

ಸಿದ್ದರಾಮಯ್ಯ ಆಕ್ರೋಶ:

government departments
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಈಗಾಗಲೇ ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಕ್ರಮ, ಇಲಾಖೆ, ಸಚಿವರ ವೈಖರಿಯನ್ನು ಟೀಕಿಸಿದ್ದಾರೆ. ಇಂದು ಈ ವಿಚಾರವಾಗಿಯೇ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ದಾಖಲೆಗಳನ್ನು ಪರಿಶೀಲಿಸಲು ವಿಧಾನಸೌಧಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮಾಹಿತಿ ಕೋರಿ ಕನಿಷ್ಠ 20 ಪತ್ರ ಬರೆದಿದ್ದೇನೆ. ಮೊದಲು ಅವುಗಳಿಗೆ ಉತ್ತರ ಕೊಡಿ. ಮಾಹಿತಿ ನೀಡಲು ಯಾಕೆ ಭಯ? ಎಂದು ಕೇಳಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲಿಕ್ಕಾ? ಇಲ್ಲವೇ, ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕಾ? ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ? ಎಂದು ಹೇಳಿಕೆ ಕೂಡ ನೀಡಿದ್ದರು.

ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿ ಉಪಯುಕ್ತ ಸಲಹೆ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕೋವಿಡ್ ನಿಯಂತ್ರಣದಲ್ಲಿ ದಿನಕ್ಕೊಂದು ಆದೇಶ, ಗಳಿಗೆಗೆ ಒಂದು ಸುತ್ತೋಲೆ, ಕ್ಷಣಕ್ಕೊಂದು ನಿರ್ಧಾರ ತೆಗೆದುಕೊಂಡು ನಿರ್ವಹಣೆಯಲ್ಲಿ ವಿಫಲವಾಗಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ಜನ ರಸ್ತೆಯಲ್ಲೇ ಪರದಾಡುವಂತಾಗಿದೆ. ಕನಿಷ್ಠ ಕೋವಿಡ್ ಸಮಸ್ಯೆ ಮುಗಿಯುವ ವರೆಗೆ ಎರಡೂ ಇಲಾಖೆಯನ್ನ ವಿಲೀನಗೊಳಿಸಿ ಒಂದೇ ನೇತೃತ್ವದ ಅಡಿಯಲ್ಲಿ ಆಡಳಿತ ನೀಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಸಲಹೆಗೆ ಇಲ್ಲ ಕಿಮ್ಮತ್ತು:

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಕೂಡ ಇಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆ ಪ್ರತಿಪಕ್ಷಗಳ ಬೇಸರವನ್ನು ಕೇವಲ ಅಸಮಾಧಾನ ಎಂದು ಪರಿಗಣಿಸುತ್ತಿರುವ ಸರ್ಕಾರ ನೀಡುತ್ತಿರುವ ಯಾವೊಂದು ಉಪಯುಕ್ತ ಸಲಹೆಯನ್ನೂ ಪಾಲಿಸುತ್ತಿಲ್ಲ ಎಂಬ ಆರೋಪ ಇದೆ. ಒಟ್ಟಾರೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಚಿವರ ನಡುವಿನ ಸಾಮರಸ್ಯ ಕೊರತೆ ದೊಡ್ಡ ಆತಂಕವನ್ನು ರಾಜ್ಯದ ಜನರಲ್ಲಿ ಮೂಡಿಸುತ್ತಿದೆ. ಕರ್ನಾಟಕ ರಾಜ್ಯ ದೇಶದಲ್ಲಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಸದ್ಯ ದೇಶದಲ್ಲಿ 7 ನೇ ಸ್ಥಾನದಲ್ಲಿದ್ದು, ಇಂದು 6 ಕ್ಕೇರುವ ಎಲ್ಲಾ ಸಾಧ್ಯತೆ ಇದೆ. ಹೀಗಿರುವ ಸಂದರ್ಭ ಜನರ ಹಾಗೂ ಪ್ರತಿಪಕ್ಷಗಳ ಆತಂಕಕ್ಕೆ ಉತ್ತರಿಸುವ ಬದಲು ಇದೇ ನಿರ್ಲಕ್ಷ್ಯವನ್ನು ಸರ್ಕಾರ ಮುಂದುವರಿಸಿದರೆ ಅದ್ಯಾವ ಕೂಪಕ್ಕೆ ರಾಜ್ಯವನ್ನು ತಳ್ಳಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.