ಬೆಂಗಳೂರು: ಯಶವಂತಪುರ ತಾಜ್ ವಿವಾಂತದಿಂದ ಪ್ರಕೃತಿ ರೆಸಾರ್ಟ್ಗೆ ಆಗಮಿಸಿದ ಕಾಂಗ್ರೆಸ್ ಶಾಸಕರ ಜೊತೆಯಲ್ಲಿ ನಾಟಿ ಕೋಳಿಗಳು ರೆಸಾರ್ಟ್ ಒಳಗೆ ಎಂಟ್ರಿ ಕೊಟ್ಟಿವೆ.
ಝಿರೋ ಟ್ರಾಫಿಕ್ ಮೂಲಕ ಕೈ ಶಾಸಕರು ಯಶವಂತಪುರದಿಂದ ದೇವನಹಳ್ಳಿಯ ಪ್ರಕೃತಿ ರೆಸಾರ್ಟ್ಗೆ ಪ್ರಯಾಣ ಬೆಳೆಸಿದರು. ಮುಂದೆ ಬಸ್ ಹಾಗೂ ಅದರ ಹಿಂದೆ ಶಾಸಕರ ವಾಹನಗಳು ಬಂದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್ ನೇತೃತ್ವದಲ್ಲಿ ಎರಡು ಬಸ್ಗಳಲ್ಲಿ ಕಾಂಗ್ರೆಸ್ ನಾಯಕರು ಆಗಮಿಸಿದರು.
ಈ ವೇಳೆ ಬೈಕ್ ಮೂಲಕ ನಾಟಿ ಕೋಳಿಗಳನ್ನು ಹಿಡಿದು ತಂದಿದ್ದ ಇಬ್ಬರು, ಶಾಸಕರ ಹಿಂದೆಯೇ ರೆಸಾರ್ಟ್ ಒಳಗೆ ಹೋದರು. ವಿಂಡ್ ಫ್ಲವರ್ ಪ್ರಕೃತಿ ರೆಸಾರ್ಟ್ನಲ್ಲಿ ಕೈ ಶಾಸಕರ ವಾಸ್ತವ್ಯವಿದ್ದು, ನಾಟಿ ಕೋಳಿ ಭೋಜನ ಸವಿಯಲಿದ್ದಾರೆ ಎನ್ನಲಾಗಿದೆ.